ತಿರುವನಂಥಪುರಂ: ಭಾರತದ ಖ್ಯಾತ ಶಿಕ್ಷಣ ತಜ್ಞ ಹಾಗೂ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ ಅವರು ಆರ್ಯ ಸಮಾಜವು ತಮ್ಮನ್ನು ಹಿಂದೂ ಎಂದು ಕರೆಯಲೇಬೇಕು ಎಂದು ಆಗ್ರಹಿಸಿದ್ದನ್ನು ಕೇರಳ ರಾಜ್ಯಪಾಲರಾದ (Kerala Governor) ಆರೀಫ್ ಮೊಹಮ್ಮದ ಖಾನ್ ಅವರು ಸ್ಮರಿಸಿಕೊಂಡರು. ಕೇರಳದ ತಿರುವನಂಥಪುರದ ಕೇರಳ ಹಿಂದೂಸ್ ಆಫ್ ನಾರ್ಥ್ ಅಮೆರಿಕ(ಕೆಎಚ್ಎನ್ಎ) ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಿಮ್ಮ(ಆರ್ಯ ಸಮಾಜ) ನನ್ನದೊಂದು ಗಂಭೀರ ಆರೋಪವಿದೆ. ನೀವೇಕೆ ನನ್ನನ್ನು ಹಿಂದೂ ಎಂದು ಕರೆಯುವುದಿಲ್ಲ. ಹಿಂದೂ ಎಂಬುದನ್ನು ನಾನು ಧಾರ್ಮಿಕವಾಗಿ ಪರಿಗಣಿಸುವುದಿಲ್ಲ. ಅದೊಂದು ಭೌಗೋಳಿಕ ಸೂಚಕಪದವಾಗಿದೆ ಎಂದು ಸೈಯದ್ ಅಹ್ಮದ್ ಖಾನ್ ಅವರನ್ನು ನೆನಪಿಸಿಕೊಂಡು ಈ ಮಾತುಗಳನ್ನು ಹೇಳಿದರು.
ಭಾರತದಲ್ಲಿ ಹುಟ್ಟಿದವರು, ಇಲ್ಲೇ ವಾಸಿಸುವವರು, ಇಲ್ಲಿ ಹರಿಯುವ ನದಿಗಳು ನೀರು ಕುಡಿಯುವವರು ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳಬೇಕು. ಹಾಗಾಗಿ, ನೀವು ನನ್ನನ್ನೂ ಹಿಂದೂ ಎಂದೇ ಕರೆಯಬೇಕು ಎಂದು ಸೈಯರ್ ಸೈಯದ್ ಅಹ್ಮದ್ ಖಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅಭಿಪ್ರಾಯಪಟ್ಟರು.
ಇದನ್ನು ಓದಿ: Kerala Governor | ಕೇರಳ ಸರ್ಕಾರ v/s ಗವರ್ನರ್ : ಹಳೆ ವಿಡಿಯೋ ಷೇರ್ ಮಾಡಿದ ಖಾನ್!
ವಸಾಹತುಶಾಹಿ ಯುಗದಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್‌ನಂತಹ ಪರಿಭಾಷೆಗಳನ್ನು ಬಳಸುವುದು ಓಕೆ. ಏಕೆಂದರೆ ಬ್ರಿಟಿಷರು ನಾಗರಿಕರ ಸಾಮಾನ್ಯ ಹಕ್ಕುಗಳನ್ನು ನಿರ್ಧರಿಸಲು ಸಮುದಾಯಗಳನ್ನು ಆಧಾರವಾಗಿಸಿಕೊಂಡಿದ್ದರು. ಕೇರಳ ಸರ್ಕಾರದ ಜತೆಗಿನ ಸಂಘರ್ಷಕ್ಕೆ ಆಗಾಗ ಸುದ್ದಿಯಾಗುವ ಖಾನ್, ನಾನು ಹಿಂದೂ ಎಂದು ಹೇಳುವುದು ತಪ್ಪು ಎಂಬ ಭಾವನೆ ಮೂಡಿಸುವ ಷಡ್ಯಂತ್ರ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.