ಬೆಂಗಳೂರು: ಕೆಲವು ದಿನಗಳ ಹಿಂದೆ ವಿಶ್ವಾದ್ಯಂತ ಮಕ್ರೊಸಾಫ್ಟ್ ಬಳಕೆದಾರರು ಸಮಸ್ಯೆ ಎದುರಿಸಿದ್ದರು. ಅಂತೆಯೇ ಸೋಮವಾರ ಯೂಟ್ಯೂಬ್ (You Tube) ಬಳಕೆದಾರರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಯೂಟ್ಯೂಬ್ ಅಪ್ಲಿಕೇಶನ್, ವೆಬ್ಸೈಟ್ನಲ್ಲಿ ಸ್ಟ್ರೀಮಿಂಗ್ ಸಮಸ್ಯೆ ಮತ್ತು ವೀಡಿಯೊ ಅಪ್ಲೋಡ್ ಮಾಡಲು ತೊಂದರೆಗಳಾಗಿವೆ. ಸೋಮವಾರ ಮಧ್ಯಾಹ್ನ 1.30 ರಿಂದ ಡೌನ್ ಡೆಟೆಕ್ಟರ್ ಅಪ್ಲಿಕೇಶನ್ನಲ್ಲಿ ಸಮಸ್ಯೆಗಳು ಆರಂಭಗೊಂಡಿವೆ. ಮಧ್ಯಾಹ್ನ 3.15 ಕ್ಕೆ ಸಮಸ್ಯೆ ಹೆಚ್ಚಾಗಿದೆ. ವೆಬ್ಸೈಟ್ ಪ್ರಕಾರ ವರದಿ ಮಾಡಿದ 43 ಪ್ರತಿಶತದಷ್ಟು ಬಳಕೆದಾರರು ಅಪ್ಲಿಕೇಶನ್ನಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 33 ಪ್ರತಿಶತದಷ್ಟು ಬಳಕೆದಾರರು ವೀಡಿಯೊ ಅಪ್ಲೋಡ್ ಮಾಡಲು ತೊಂದರೆ ಎದುರಿಸುತ್ತಿದ್ದಾರೆ 23 ಪ್ರತಿಶತದಷ್ಟು ಜನರು ಯೂಟ್ಯೂಬ್ ವೆಬ್ಸೈಟ್ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ಸಮಸ್ಯೆ ಏನು ಎಂದು ತಿಳಿದಿಲ್ಲ. ಯೂಟ್ಯೂಬ್ ಸಪೋರ್ಟ್ ಪುಟದಲ್ಲಿ ಅಥವಾ ಅದರ ಸಾಮಾಜಿಕ ಮಾಧ್ಯಮ ಚಾನೆಲ್ಗಳಲ್ಲಿ ಯಾವುದೇ ವಿಷಯ ಪ್ರಕಟಿಸಿಲ್ಲ. ಸಣ್ಣ ದೋಷವಾಗಿದ್ದು, ಅದನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಹೇಳಿದೆ.
Youtube Down, Uploaded videos not showing in feed @YouTube @TeamYouTube @YouTubeCreators #youtubedown #youtubevideo
— Network10 (@Network10Update) July 22, 2024
ಯೂಟ್ಯೂಬ್ನಲ್ಲಿ ಕೆಲವು ಬಳಕೆದಾರರು ತಮ್ಮ ಫೀಡ್ನಲ್ಲಿ ಸಮಸ್ಯೆಗಳ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಒಂದು ವೀಡಿಯೊ ಅಪ್ಲೋಡ್ ಮಾಡಿದ ವೀಡಿಯೊಗಳನ್ನು ಫೀಡ್ನಲ್ಲಿ ತೋರಿಸುತ್ತಿಲ್ಲ ಎಂದು ಹೇಳಿದರೆ, ಮತ್ತೊಂದು ವಿಡಿಯೊದಲ್ಲಿ ವಿಡಿಯೊಗಳನ್ನು ಅಪ್ಲೋಡ್ ಮಾಡಲಾಗುತ್ತಿಲ್ಲ ಎಂದು ಹೇಳಲಾಗಿದೆ.
ಎಕ್ಸ್ನಲ್ಲಿ ಪೋಸ್ಟ್ ಗಳನ್ನು ನೋಡಿದರೆ ಸಮಸ್ಯೆ ವ್ಯಾಪಕವಾದಂತೆ ಕಾಣುತ್ತಿಲ್ಲ. ಇದು ಸಣ್ಣ ಪ್ರಮಾಣದ ಜನರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಯುಟ್ಯೂಬ್ ಭಾರತದಲ್ಲಿ ಹಲವಾರು ಬಳಕೆದಾರರಿಗೆ ಸ್ಥಗಿತ ಅನುಭವಿಸುತ್ತಿದೆ ಎಂದು ವರದಿಯಾಗಿದೆ. ಬೆಳಗ್ಗೆ ಈ ಬಗ್ಗೆ ಸುದ್ದಿಯಾಗಿದ್ದು ಸಂಜೆಯ ತನಕವೂ ಮುಂದುವರಿತ್ತು.
ಯೂಟ್ಯೂಬ್ ನ ಪ್ರತಿಕ್ರಿಯೆ
ಯೂಟ್ಯೂಬ್ ಡೌನ್ನಲ್ಲಿ ಹಲವಾರು ಪೋಸ್ಟ್ಗಳು ಮತ್ತು ಟ್ರೆಂಡಿಂಗ್ ಹ್ಯಾಶ್ಟ್ಯಾಗ್ಗಳ ಬಳಿಕ ಕಂಪನಿಯು ಅಧಿಕೃತ ಟೀಮ್ ಯೂಟ್ಯೂಬ್ನಲ್ಲಿ ಪ್ರತಿಕ್ರಿಯೆ ನೀಡಿದೆ. ಇದನ್ನು ಫ್ಲ್ಯಾಗ್ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾವು ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಯಾವುದೇ ಹೆಚ್ಚುವರಿ ಮಾಹಿತಿ ಬೇಕಾದರೆ ನಿಮ್ಮನ್ನು ಸಂಪರ್ಕಿಸುತ್ತೇವೆ ಎಂದು ಬರೆಯಲಾಗಿದೆ.
ಸಂಭಾವ್ಯ ಕಾರಣವೇನು?
ಯೂಟ್ಯೂಬ್ ಸ್ಥಗಿತಕ್ಕೆ ನಿಖರ ಕಾರಣ ತಿಳಿದಿಲ್ಲವಾದರೂ ಸಾಮಾನ್ಯ ಸಮಸ್ಯೆಗಳಲ್ಲಿ ಸರ್ವರ್ ಸಮಸ್ಯೆಗಳು, ನಿರ್ವಹಣಾ ಚಟುವಟಿಕೆಗಳು ಅಥವಾ ನೆಟ್ವರ್ಕ್ ಸಮಸ್ಯೆಗಳು ಸೇರಿಕೊಂಡಿವೆ ಎನ್ನಲಾಗಿದೆ. ಸ್ಥಳೀಯ ಇಂಟರ್ನೆಟ್ ಸೇವಾ ಪೂರೈಕೆದಾರರು (ಐಎಸ್ ಗಳು) ಕೂಡ ಯೂಟ್ಯೂಬ್ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಏನು ಮಾಡಬೇಕು?
ಯೂಟ್ಯೂಬ್ ಸ್ಥಗಿತದಿಂದ ಬಾಧಿತರಾದ ಬಳಕೆದಾರರು ತಮ್ಮ ಸಾಧನಗಳಲ್ಲಿ ಈ ಕೆಳಗಿನ ಪ್ರಯತ್ನಗಳನ್ನು ಮಾಡಬಹುದು
ಕ್ಯಾಶ್ ಮತ್ತು ಕುಕೀಗಳನ್ನು ಅಳಿಸಿ ಕೆಲವೊಮ್ಮೆ, ನಿಮ್ಮ ಬ್ರೌಸರ್ ನ ಕ್ಯಾಶ್ ಮತ್ತು ಕುಕೀಗಳನ್ನು ತೆರವುಗೊಳಿಸುವುದರಿಂದ ವೆಬ್ ಸೈಟ್ ನ ಲೋಡಿಂಗ್ ಸಮಸ್ಯೆಗಳನ್ನು ಪರಿಹರಿಸಬಹುದು.
ಇಂಟರ್ನೆಟ್ ಸಂಪರ್ಕ ಪರಿಶೀಲಿಸಿ: ಇಂಟರ್ನೆಟ್ ಸಂಪರ್ಕ ಸರಿಯಾಗಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಪರ್ಯಾಯ ನೆಟ್ವರ್ಕ್ ಬಳಸಿ: ಇದು ಡಿವೈಸ್ ಆಧಾರಿತ ಸಮಸ್ಯೆಯೇ ಅಥವಾ ಒಟ್ಟು ಸಮಸ್ಯೆಯೇ ಎಂದು ಪರಿಶೀಲಿಸಲು ಬೇರೆ ಸಾಧನದಿಂದ ಯೂಟ್ಯೂಬ್ಗೆ ಲಾಗ್ ಇನ್ ಆಗಿ.
ಯೂಟ್ಯೂಬ್ ಹೊಸ ಎಐ-ಕೇಂದ್ರಿತ ಮಾರ್ಗಸೂಚಿಗಳು ಮತ್ತು ಅಪ್ಡೇಟ್ಗಳನ್ನು ತಂದಿದೆ. ಇದು ಬಳಕೆದಾರರಿಗೆ ಎಐ-ರಚಿಸಿದ ವೀಡಿಯೊಗಳನ್ನು ಗುರುತಿಸಲು ಮತ್ತು ವರದಿ ಮಾಡಲು ಅನುವು ಮಾಡಿಕೊಡುತ್ತದೆ. ಈ ಅಪ್ಡೇಟ್ಗಳು ಎಐ ಟೂಲ್ ಬಳಸಿ ವೀಡಿಯೊ ಮಾಡಿದ್ದರೆ ಪತ್ತೆ ಹಚ್ಚುತ್ತದೆ. ಎಚ್ಚರಿಕೆಯನ್ನು ಪಡೆಯಲು ನೆರವಾಗುತ್ತದೆ.