ಮುಂಬೈ: ಫುಡ್ ಡೆಲಿವರಿ ಬಾಯ್‌ಗಳು ಗಾಳಿ, ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೆ, ಹಗಲು, ರಾತ್ರಿ ಎನ್ನದೆ ಆಹಾರ ಸರಬರಾಜು ಮಾಡುತ್ತಾರೆ. ಬಹುತೇಕ ಸಂದರ್ಭದಲ್ಲಿ ಇವರಿಗೆ ಮಳೆ, ಗಾಳಿ, ಚಳಿ ಅಲ್ಲದೆ ಮನೆಗಳಲ್ಲಿ ಸಾಕುವ ಶ್ವಾನಗಳೂ ಸವಾಲಾಗುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈನಲ್ಲಿ ಆಹಾರ ಪೂರೈಕೆ ಮಾಡಲು ಹೋದ ಜೊಮ್ಯಾಟೊ ಡೆಲಿವರಿ ಬಾಯ್‌ನ ಗುಪ್ತಾಂಗಕ್ಕೆ ಸಾಕು ನಾಯಿಯೊಂದು ಕಚ್ಚಿದೆ. ಈ ಕುರಿತ ವಿಡಿಯೊ ಈಗ ವೈರಲ್ (Viral Video) ಆಗಿದೆ.
ನವಿ ಮುಂಬೈನ ಪ್ಯಾನ್ವೆಲ್‌ನಲ್ಲಿ ನಿವಾಸವೊಂದಕ್ಕೆ ಫುಡ್ ಡೆಲಿವರಿ ಮಾಡಲು ಜೊಮ್ಯಾಟೊ ಡೆಲಿವರಿ ಬಾಯ್ ಹೋಗಿದ್ದಾರೆ. ಈ ವೇಳೆ ಲಿಫ್ಟ್‌ನಿಂದ ಹೊರಬಂದಾಗ ಶ್ವಾನವೊಂದು ಡೆಲಿವರಿ ಬಾಯ್‌ನ ಗುಪ್ತಾಂಗಕ್ಕೆ ಕಚ್ಚಿದೆ. ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ವಾನದ ಮಾಲೀಕರನ್ನು ಬಂಧಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ನಾಯಿ ಕಚ್ಚಿದ ಬಳಿಕ ಡೆಲಿವರಿ ಬಾಯ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಲಿಫ್ಟ್‌ನಲ್ಲಿ ತೆರಳುವಾಗ ತಮ್ಮ ಶ್ವಾನವು ಮಗುವಿಗೆ ಕಚ್ಚಿದರೂ ನಿರ್ಲಕ್ಷಿಸಿ ಹೋಗಿದ್ದರು. ಬಳಿಕ ಅವರಿಗೆ ದಂಡ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅವಘಡ ಸಂಭವಿಸಿದೆ.
ಇದನ್ನೂ ಓದಿ | Video | ನಾಯಿ ಕಚ್ಚಿ ಬಾಲಕ ಒದ್ದಾಡುತ್ತಿದ್ದರೂ ಸುಮ್ಮನೇ ನಿಂತಿದ್ದ ಮಹಿಳೆ; ಆಕೆಯದ್ದೇ ಶ್ವಾನ ಅದು !