ನವದೆಹಲಿ: ಉತ್ತರ ಪ್ರದೇಶದ (Uttar Pradesh) ಲಕ್ನೋ ನಗರದಲ್ಲಿರುವ (Lucknow) ನವಾಬ್ ವಾಜಿದ್ ಅಲಿ ಶಾ ಝೂಲಾಜಿಕಲ್ ಗಾರ್ಡನ್‌ನ ಉದ್ಯೋಗಿ ಸೋಮವಾರ ನೀರ್ಗುದುರೆ (Hippopotamus Attack) ದಾಳಿಯಿಂದ ಮೃತಪಟ್ಟಿದ್ದಾನೆ. ಮೃಗಾಲಯದ ಸಿಬ್ಬಂಧಿಯಾಗಿ ಸೂರಜ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ(Worker Dead). ನೀರ್ಗುದುರೆಯನ್ನು ಸ್ವಚ್ಛಗೊಲಿಸಲು ಆವರಣಕ್ಕೆ ಪ್ರವೇಶಿಸಿದಾಗ, ನೀರ್ಗುದುರೆ ಅನಿರೀಕ್ಷಿತವಾಗಿ ಸಿಬ್ಬಂದಿ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಸೋಮವಾರ ಮೃಗಾಲಯವನ್ನು ಸಾರ್ವಜನಿಕರಿಗೆ ತೆರೆದಿರಲಿಲ್ಲ.
ಸೂರಜ್ 2013ರಲ್ಲಿ ಮೃಗಾಲಯಕ್ಕೆ ಸೇರಿದ ಅನುಭವಿ ಕೆಲಸಗಾರರಾಗಿದ್ದಾರೆ. ವಿವಿಧ ಪ್ರಾಣಿಗಳ ಆವರಣಗಳನ್ನು ಸ್ವಚ್ಛಗೊಳಿಸುವುದು ಅವರ ದಿನನಿತ್ಯದ ಜವಾಬ್ದಾರಿಗಳ ಒಂದು ಭಾಗವಾಗಿದೆ. ತನ್ನ ಮೇಲೆ ದಾಳಿ ಮಾಡಿದ ನೀರ್ಗುದುರೆಯನ್ನು ಅವರು ಹಲವು ವರ್ಷಗಳಿಂದ ನೋಡಿಕೊಳ್ಳುತ್ತಿದ್ದರು. ಅದರ ನಡವಳಿಕೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು ಹೇಳಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 10:45 ರ ಸುಮಾರಿಗೆ ವಯಸ್ಕ ನೀರ್ಗುದುರೆ ನೌಕರನ ಮೇಲೆ ದಾಳಿ ಮಾಡಿತು. ಇದರಿಂದ ತೀವ್ರವಾಗಿ ಗಾಯಗೊಂಡ ಸೂರಜ್‌ನನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ನಂತರ ಸಿಬ್ಬಂದಿ ಕೊನೆಯುಸಿರೆಳೆದನು ಎಂದು ಅಧಿಕಾರಿಯು ತಿಳಿಸಿದ್ದಾರೆ.
ಮೃತನ ಕುಟುಂಬಕ್ಕೆ ಮೃಗಾಲಯದ ಪರವಾಗಿ 50 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ಮೃಗಾಲಯದ ಆಡಳಿತವು ತಿಳಿಸಿದೆ. ಆದರೆ, ಕೆಲವು ಮಾಧ್ಯಮಗಳ ವರದಿ ಪ್ರಕಾರ, ವ್ಯಕ್ತಿಯನ್ನು ಬಲಿ ಪಡೆದ ಇದೇ ನೀರ್ಗುದುರೆಯು ಮತ್ತೊಬ್ಬ ಸಿಬ್ಬಂದಿಯ ಮೇಲೂ ದಾಳಿ ನಡೆಸಿತ್ತು. ಆ ವ್ಯಕ್ತಿ ಈವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Elephant Attack : ಇದೆಂಥಾ ದುರಂತ; ಕಾಡಾನೆ ದಾಳಿಗೆ ಆನೆ ನಿಗ್ರಹ ಪಡೆ ಸದಸ್ಯನೇ ಬಲಿ?