ದುಬೈ,: ಯುಎಇ ಒಕ್ಕಲಿಗರ ಸಂಘದಿಂದ ದುಬೈನ ಮಶ್ರೀಫ್ ಪಾರ್ಕ್‌ನಲ್ಲಿ ಮಾರ್ಚ್ 3ರಂದು ಮಹಿಳಾ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸುಮಾರು 200ಕ್ಕೂ ಹೆಚ್ಚು ಜನರು ಆಗಮಿಸಿದ್ದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಯುಎಇಯಲ್ಲಿದ್ದುಕೊಂಡು ಉದ್ಯೋಗದ ಜತೆಗೆ ಸಾಮಾಜಿಕ, ಅರೋಗ್ಯ, ಶಿಕ್ಷಣ ಮತ್ತು ಕನ್ನಡ ಕ್ಷೇತ್ರದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಒಕ್ಕಲಿಗರ ಸಂಘದ ವಿಪುಲ ಶೆಟ್ಟಿ, ಡಾ.ಲೇಖಾ ತಮ್ಮಯ್ಯ, ರೂಪಾ ಶಶಿಧರ್ ಮತ್ತು ಪ್ರಭಾ ಪ್ರದೀಪ್ ಅವರಿಗೆ ಸಂಘದಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಹಿಳಾ ದಿನಕ್ಕೆ ಆಗಮಿಸಿದ ಎಲ್ಲಾ ಮಹಿಳೆಯರಿಗೂ ಗುಲಾಬಿ ಹೂ ಕೊಡುವ ಮುಖಾಂತರ ಸ್ವಾಗತಿಸಲಾಯಿತು. ಎಲ್ಲಾ ಮಹಿಳೆಯರು, ಮಕ್ಕಳು ಮತ್ತು ಪುರುಷರು ವಿವಿಧ ಕ್ರೀಡೆ, ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತಸಪಟ್ಟರು. ಇನ್ನು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಜತೆಗೆ ಸಂಘದ ವತಿಯಿಂದ ಎಲ್ಲರಿಗೂ ಗೌಡರ ಶೈಲಿಯ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಇದನ್ನೂ ಓದಿ | Raja Marga Column : ಬಹುಮುಖಿ ಸ್ತ್ರೀ; ನೀವು ಕಂಡು ಕೇಳರಿಯದ ಹೆಣ್ಣಿನ ಮುಖಗಳು
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣರಾದ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಶೋಭಾ ಗೌಡ, ಕಾಂತ ಗೌಡ, ಪುಟ್ಟರಾಜು ಗೌಡ, ಯತೀಶ ಗೌಡ, ದೀಪಕ್ ಗೌಡ, ಗೋಕುಲ್ ಗೌಡ, ಸತೀಶ್ ಗೌಡ, ಪ್ರದೀಪ್ ಗೌಡ , ರಮೇಶ್ ರಂಗಪ್ಪ, ಮಹೇಶ್ ಗೌಡ, ಅಕ್ಷಯ್ ಗೌಡ, ಮೋಹನ್ ಗೌಡ, ನಾರಾಯಣ ಸ್ವಾಮಿ, ಚೇತನ್ ಗೌಡ ಅವರನ್ನು ಸಂಘದ ಅಧ್ಯಕ್ಷರಾದ ಡಾ. ರಶ್ಮಿ ನಂದಕಿಶೋರ್ ಅವರು ವೇದಿಕೆ ಮೇಲೆ ಅಭಿನಂದಿಸಿದರು.