ಶಾರುಖ್ ಖಾನ್ 1965ರ ನವೆಂಬರ್ 2ರಂದು ನವ ದೆಹಲಿಯ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ಶಾರುಖ್ 15 ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದರು.
ಶಾರುಖ್ ಖಾನ್ 1980ರ ದಶಕದಲ್ಲಿ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ವೃತ್ತಿಜೀವನ ಪ್ರಾರಂಭಿಸಿದ್ದರು.
ತಮ್ಮ ತಾಯಿಯ ಆಸೆಯಂತೆ ಸಿನಿಮಾ ಹೀರೋ ಆಗಲು ಮುಂದಾದ ಶಾರುಖ್ ಅವಕಾಶಕ್ಕಾಗಿ ಅಲೆದಾಡಿದ್ದರು. ಹಲವು ನಿರ್ದೇಶಕರ ಮನೆ ಬಾಗಿಲು ಕಾದಿದ್ದರು.
1990ರಂದು ತಮ್ಮ ತಾಯಿಯನ್ನು ಕಳೆದುಕೊಂಡರು. ಆದರೆ ಅವರ ಭಿಲಾಷೆಯನ್ನು ತೀರಿಸುವ ಉದ್ದೇಶದಿಂದ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದರು.
ಬಾಲಿವುಡ್‌ಗೆ ಪ್ರವೇಶ ಮಾಡುವುದಕ್ಕಿಂತ ಮೊದಲೇ ಅಂದರೆ, 1991ರಲ್ಲಿ ಗೌರಿ ಜತೆ ವಿವಾಹ ಆಗಿದ್ದರು. 1992ರಲ್ಲಿ ದೀವಾನಾ ಸಿನಿಮಾದಲ್ಲಿ ನೆಗೆಟಿವ್ ರೋಲ್ ಮೂಲಕ ಬಾಲಿವುಡ್‌ಗೆ ಪ್ರವೇಶ.
ಶಾರುಖ್ ಖಾನ್ ಸುಮಾರು 80 ಚಲನಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ 7 ಸಿನಿಮಾಗಳಲ್ಲಿ ರಾಹುಲ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಶಾರುಖ್ ಅವರು ಸಿನಿಮಾ ಕ್ಷೇತ್ರದ ಸಾಧನೆಗಾಗಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಪಡೆದಕೊಂಡಿದ್ದಾರೆ.
ಶಾರುಖ್ ಖಾನ್ ಬಾಲಿವುಡ್ ಕ್ಷೇತ್ರದ ಶ್ರೀಮಂತ ನಟನಾಗಿದ್ದು, ಒಂದು ಸಿನಿಮಾಗೆ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
2018ರಲ್ಲಿ ಬಿಡುಗಡೆಯಾದ ಜೀರೋ ಸಿನಿಮಾ ಫ್ಲಾಪ್ ಆದ ಬಳಿಕ ಶಾರುಖ್ ಅವರು ಯಾವುದೇ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿಲ್ಲ.
ಪಠಾಣ್ ಎಂಬ ಹೊಸ ಕಥೆಯೊಂದಿಗೆ ಶಾರುಖ್ ಖಾನ್ ಕಮ್ ಬ್ಯಾಕ್ ಮಾಡಲಿದ್ದು, ಜವಾನ್, ಟೈಗರ್ 3, ಡಂಕಿ ಇವರ ಮುಂಬರುವ ಚಲನಚಿತ್ರಗಳು.
ಇದನ್ನೂ ಓದಿ| ಜನುಮದಿನ ಸಂಭ್ರಮದಲ್ಲಿ ಶರ್ಮಿಳಾ ಮಾಂಡ್ರೆ