ಬೆಂಗಳೂರು: ನಟ ದರ್ಶನ್ (Actor Darshan) ಅವರನ್ನು ಸೇಫ್ ಮಾಡಲು ಪ್ರಭಾವಿ ಶಾಸಕರು, ಸಚಿವರು ಪ್ರಯತ್ನಿಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ನಟ ದರ್ಶನ್ ಬಂಧನದ ಬಳಿಕ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಸಾಕಷ್ಟು ಊಹಾಪೋಹಗಳ ಮಧ್ಯೆ ದರ್ಶನ್ ಪ್ರಕರಣದಲ್ಲಿ ಸತೀಶ್ ರೆಡ್ಡಿ ಅವರ ಹೆಸರು ಚರ್ಚೆಗೆ ಗುರಿಯಾಗಿತ್ತು. ಇದೀಗ ಮಾಧ್ಯಮದ ಮುಂದೆ ಸತೀಶ್ ರೆಡ್ಡಿ ʻʻನಾನು ದರ್ಶನ್ ಅವರನ್ನು ಸೇಫ್ ಮಾಡುತ್ತಿರುವ ಸುದ್ದಿ ಸುಳ್ಳು.. ಇಂಡಸ್ಟ್ರಿಯ ಬಹುತೇಕರು ನನಗೆ ಕ್ಲೋಸ್ ಫ್ರೆಂಡ್ಸ್ʼʼಎಂದಿದ್ದಾರೆ.
ಸತೀಶ್ ರೆಡ್ಡಿ ಮಾತನಾಡಿ ʻ ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು.. ಇಂಡಸ್ಟ್ರಿಯ ಬಹುತೇಕರು ನನಗೆ ಕ್ಲೋಸ್ ಫ್ರೆಂಡ್ಸ್.. ನಾನು ದರ್ಶನ್ ಭೇಟಿಯಾಗಿ 3 ತಿಂಗಳು ಆಗಿದೆ. ದರ್ಶನ್ ವಿಚಾರದಲ್ಲಿ ನನ್ನ ಹೆಸರು ತರುತ್ತಿರುವುದು ಸರಿಯಲ್ಲ. ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗ್ಬೇಕು.. ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು.. ನಾನು ಯಾರ ಬಳಿಯೂ ಕೇಳಿಲ್ಲ.. ನಾನು ಒತ್ತಡ ಹಾಕ್ತಿದ್ದೀನಿ ಅನ್ನೋದು ಸುಳ್ಳು.. ನನಗೆ ಕಾಲು ಮುರಿದಿದ್ದ ಸಂದರ್ಭದಲ್ಲಿ ದರ್ಶನ್ ನನ್ನನ್ನು ಭೇಟಿಯಾಗಿದ್ರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗ್ಬೇಕು. ನಾನು ಈ ವಿಚಾರವಾಗಿ ದರ್ಶನ್ ಪರ ನಿಲ್ಲಲ್ಲ.. ದರ್ಶನ್ ತಪ್ಪು ಮಾಡಿದ್ದಾರಾ, ಇಲ್ವಾ ಅನ್ನೋದು ನ್ಯಾಯಾಲಯದ ಮೆಟ್ಟಿಲಲ್ಲಿದೆ. ಮುಂದೆ ನೋಡೋಣʼʼಎಂದಿದ್ದಾರೆ.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಹತ್ಯೆ ಶ್ವಾನದ ಮೇಲೆ ʻಆನೆʼ ದಾಳಿ ಮಾಡಿದಂತೆ ಎಂದ ರಾಮ್ ಗೋಪಾಲ್ ವರ್ಮಾ!
ದರ್ಶನ್ ಅವರನ್ನು ಬಚಾವ್ ಮಾಡಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಿದ್ದಂತೆ ಅವರು ಯಾರಾಗಿರಬಹುದು ಎನ್ನುವ ಚರ್ಚೆಯೂ ಜೋರಾಗಿತ್ತು. ದರ್ಶನ್ ಹಾಗೂ ಆತನ ಗ್ಯಾಂಗ್ನ ಸದಸ್ಯರು ಇದ್ದ ಪೊಲೀಸ್ ಠಾಣೆಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು . ವಿಐಪಿ ಆರೋಪಿಗಳ ಮೇಲೆ ದಾಳಿಯಾಗುವ ಅಥವಾ ಇನ್ಯಾವುದೇ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಠಾಣೆಯ ಹೊರಗಡೆ ಕೆಎಸ್ಆರ್ಪಿ ಪೊಲೀಸ್ ತಂಡವೊಂದನ್ನು ನಿಯೋಜಿಸಲಾಗಿತ್ತು.
ಇಂದು ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಈಗಾಗಲೇ 12 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕೋರ್ಟ್ ಬಹುತೇಕ ನ್ಯಾಯಾಂಗ ಬಂಧನದ ಆದೇಶ ನೀಡುವ ಸಾಧ್ಯತೆ ಇದೆ.