ಚೆನ್ನೈ: ಚಿತ್ರನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ (jaya prada) ಅವರಿಗೆ 6 ತಿಂಗಳ ಕಾಲ ಚೆನ್ನೈ ಎಗ್ಮೋರ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಎರಡು ಚಿತ್ರಮಂದಿರಗಳ ಮಾಲಕಿಯಾಗಿರುವ ಜಯಪ್ರದಾ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಜಪ್ತಿಗೊಂಡಿವೆ. ಇ.ಎಸ್.ಐ ಹಣವನ್ನು ದುರ್ಬಳಕೆಯನ್ನು ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಕಾರ್ಮಿಕ ಇಲಾಖೆ ಜಯಪ್ರದಾ ವಿರುದ್ಧ ದೂರು ದಾಖಲಿಸಿತ್ತು.
ಒಂದು ಕಾಲದಲ್ಲಿ ಜಯಪ್ರದಾ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚಿದ್ದರು. ಜಯಪ್ರದಾ ಕೊನೆಯದಾಗಿ ಮಲಯಾಳಂನ ‘ಕಿನಾರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ದೇಶಂ ಪಕ್ಷದ ಮೂಲಕ ನಟಿ ಜಯಪ್ರದಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಕನ್ನಡದಲ್ಲೂ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಅನೇಕ ನಟರ ಚಿತ್ರದಲ್ಲಿ ನಟಿಸಿದ್ದಾರೆ.
ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ, ಅಪ್ರತಿಮ ಸುಂದರಿ ಎಂದು ಹೆಸರು ಪಡೆದ ಜಯಪ್ರದಾ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ್ದರು. ಲಲಿತಾ ರಾಣಿ ಅವರ ಮೊದಲ ಹೆಸರಾಗಿತ್ತು. ತೆಲುಗು ದೇಶಂ ಪಕ್ಷದಿಂದ ಆರಂಭವಾದ ಇವರ ರಾಜಕೀಯ ಜೀವನದಲ್ಲಿ ಎರಡು ಬಾರಿ ಲೋಕಸಭಾ ಮತ್ತು ಒಂದು ಭಾರಿ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಯುರ್‌ಕೇರ್ ವಂಚನೆ ಪ್ರಕರಣ, ಇಂಥವರ ವಿರುದ್ಧ ಕಠಿಣ ಕ್ರಮ ಅಗತ್ಯ
ದಕ್ಷಿಣ ಭಾರತದ ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲಿಯೇ ಹಲವು ಚಿತ್ರಗಳಲ್ಲಿ ನಟಿಸಿ ಸ್ಚಾರ್ ನಟಿಯೆಂದು ಹೆಸರು ಪಡೆದವರು ಜಯಪ್ರದಾ. ಇದಾದ ನಂತರ ಜಯಪ್ರದಾ ಹಿಂತಿರುಗಿ ನೋಡಲಿಲ್ಲ.
ಸಾಹಸಸಿಂಹ ವಿಷ್ಣುವರ್ಧನ್ ಅವರ ‘ಈ ಬಂಧನ’ ಚಿತ್ರದ ಮೂಲಕ ಕನ್ನಡಕ್ಕೆ ಮರು ಎಂಟ್ರಿ ಮಾಡಿದ್ದ ಇವರು ನಟ ದರ್ಶನ್ ಅಭಿನಯದ ಐತಿಹಾಸಿಕ ಚಿತ್ರಕ್ರಾಂತಿವೀರ ‘ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಮಿಂಚಿದ್ದರು. ಕನ್ನಡದಲ್ಲಿ ಇವರು ನಟಿಸಿದ ಮೊದಲ ಚಿತ್ರ ಡಾ.ರಾಜಕುಮಾರ್‌ರವರು ಅಭಿನಯಿಸಿದ ಸನಾದಿ ಅಪ್ಪಣ್ಣ’, ಕವಿರತ್ನ ಕಾಳಿದಾಸ’ (Kaviratna Kalidasa) ಸೂಪರ್ಹಿಟ್ ಎನಿಸಿದ್ದವು. ಡಾ. ರಾಜ್ ಅವರ ಕೊನೆಯ ಚಿತ್ರ ‘ಶಬ್ಧವೇದಿ’ಯಲ್ಲೂ ಕೂಡ ಇವರೇ ನಾಯಕಿಯಾಗಿ ನಟಿಸಿದ್ದು ವಿಶೇಷ.