Site icon Vistara News

Agniveer: ಹುತಾತ್ಮ ʼಅಗ್ನಿವೀರʼನ ಕುಟುಂಬಕ್ಕೆ 1.08 ಕೋಟಿ ರೂ. ಪರಿಹಾರ; ರಾಹುಲ್‌ ಗಾಂಧಿ ಆರೋಪ ಠುಸ್‌!

Agniveer

ಕರ್ತವ್ಯದ ವೇಳೆ ಕಳೆದ ವರ್ಷ ಮೃತಪಟ್ಟಿದ್ದ ಮಹಾರಾಷ್ಟ್ರದ (maharastra) ಅಗ್ನಿವೀರ್ (agniveer) ಅಕ್ಷಯ್ ಗವಾಟೆ (Agniveer Akshay Gawate) ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 1.08 ಕೋಟಿ ರೂಪಾಯಿ ನೆರವು ನೀಡಲಾಗಿದೆ ಎಂದು ಸೋಮವಾರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇದರಿಂದಾಗಿ, ಅಗ್ನಿವೀರ್‌ ಯೋಜನೆಯಡಿ ಆಯ್ಕೆಯಾದವರು ಸತ್ತರೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಸಂಸತ್‌ನಲ್ಲಿ ಆರೋಪ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮುಖಭಂಗ ಅನುಭವಿಸಿದಂತಾಗಿದೆ.

ಲೋಕಸಭೆಯಲ್ಲಿ (loksabha) ರಕ್ಷಣಾ ಸಚಿವ ರಾಜನಾಥ್ ಸಿಂಗ್ (rajnath singh) ಅವರು ಕರ್ತವ್ಯದ ವೇಳೆಯಲ್ಲಿ ಪ್ರಾಣ ತ್ಯಾಗ ಮಾಡುವ ಅಗ್ನಿವೀರನಿಗೆ 1 ಕೋಟಿ ರೂಪಾಯಿ ಪರಿಹಾರ ಸಿಗುತ್ತದೆ ಎಂದು ಹೇಳಿಕೆ ನೀಡಿದ ಬಳಿಕ ಈ ಹೇಳಿಕೆ ಹೊರಬಿದ್ದಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಗ್ನಿಪಥ್ ಮಿಲಿಟರಿ ನೇಮಕಾತಿ ಯೋಜನೆಯನ್ನು ಉಲ್ಲೇಖಿಸಿ ಸರ್ಕಾರವು ಅಗ್ನಿವೀರರನ್ನು “ಬಳಸಿ-ಎಸೆಯುವ ಕಾರ್ಮಿಕರು” ಎಂದು ಪರಿಗಣಿಸುತ್ತದೆ. ಅವರಿಗೆ “ಹುತಾತ್ಮ” ಸ್ಥಾನಮಾನವನ್ನೂ ನೀಡುವುದಿಲ್ಲ ಎಂದು ತೀವ್ರವಾಗಿ ಆರೋಪಿಸಿದ್ದರು. ಅನಂತರ ರಾಜನಾಥ್ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಪಿಂಪಲ್ಗಾಂವ್ ಸರೈ ಮೂಲದ ಅಗ್ನಿವೀರ್ ಅಕ್ಷಯ್ ಗವಾಟೆ ಅವರು 2023ರ ಅಕ್ಟೋಬರ್ 21ರಂದು ಸಿಯಾಚಿನ್‌ನಲ್ಲಿ ಕರ್ತವ್ಯದ ವೇಳೆ ಮೃತಪಟ್ಟಿದ್ದರು. ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ಷಯ್ ಅವರ ತಂದೆ ಲಕ್ಷ್ಮಣ ಗವಾಟೆ, ಅಕ್ಷಯ್ ನಿಧನದ ಅನಂತರ ವಿಮಾ ರಕ್ಷಣೆಯಾಗಿ 48 ಲಕ್ಷ ರೂ., 50 ಲಕ್ಷ ರೂ. ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ 10 ಲಕ್ಷ ರೂ ದೊರೆತಿದೆ ಎಂದರು. ಅಕ್ಷಯ್ ಸಹೋದರಿಗೆ ಸರ್ಕಾರಿ ನೌಕರಿ ನೀಡುವಂತೆ ಅವರು ಮನವಿ ಮಾಡಿದರು.

ಇದನ್ನೂ ಓದಿ: Narendra Modi: ರಾಹುಲ್‌ ಗಾಂಧಿ ಥರ ಆಡ್ಬೇಡಿ; ಗಂಭೀರವಾಗಿರಿ: ಎನ್‌ಡಿಎ ಸಂಸದರಿಗೆ ಮೋದಿ ಕಿವಿಮಾತು

2022ರ ಜೂನ್ 14ರಂದು ಘೋಷಿಸಲಾದ ಅಗ್ನಿಪಥ್ ಯೋಜನೆಯು 17 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ಕೇವಲ ನಾಲ್ಕು ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಲ್ಲಿ ಶೇಕಡಾ 25 ರಷ್ಟು ಜನರನ್ನು ಇನ್ನೂ 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ. ಸರ್ಕಾರವು ಇದಕ್ಕಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿದೆ.

ರಾಹುಲ್ ಆರೋಪ ಸುಳ್ಳು ಎಂದಿದ್ದ ಭಾರತೀಯ ಸೇನೆ

ಸಿಯಾಚಿನ್‌ನಲ್ಲಿ ಮೃತಪಟ್ಟಿರುವ ಭಾರತೀಯ ಸೈನ್ಯದ ʼಅಗ್ನಿವೀರʼನಿಗೆ ಸಂದ ಹಾಗೂ ಸಲ್ಲಲಿರುವ ಆರ್ಥಿಕ ನೆರವಿನ ವಿವರಗಳನ್ನು ಸೈನ್ಯಾಧಿಕಾರಿಗಳು ತಿಳಿಸಿದ್ದು, ರಾಹುಲ್‌ ಗಾಂಧಿ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಈ ಮೊದಲೇ ಹೇಳಿದ್ದರು.

ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಗ್ನಿವೀರನ ಕುಟುಂಬಕ್ಕೆ ನೀಡಲಾಗುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಭಾರತೀಯ ಸೈನ್ಯ ಸ್ಪಷ್ಟನೆ ನೀಡಿತ್ತು. ಮೃತರ ಕುಟುಂಬದವರಿಗೆ ಪರಿಹಾರವನ್ನು ಸೈನಿಕ ಸೇವೆಯ ಸಂಬಂಧಿತ ನಿಯಮಗಳ ಮೂಲಕವೇ ನೀಡಲಾಗುತ್ತಿದೆ ಎಂದು ಹೇಳಿತ್ತು. ಮೃತ ಅಗ್ನಿವೀರರ ಕುಟುಂಬದವರಿಗೆ 48 ಲಕ್ಷ ರೂ. ವಿಮಾ ಹಣದ ಮೊತ್ತ, 44 ಲಕ್ಷ ರೂ. ಪರಿಹಾರ, ಅಗ್ನಿವೀರ್‌ನಿಂದ ಸೇವಾ ನಿಧಿ ಕೊಡುಗೆ ಮತ್ತು ಸರ್ಕಾರದಿಂದ ಇಷ್ಟೇ ಪ್ರಮಾಣದ ಹೊಂದಾಣಿಕೆಯ ಕೊಡುಗೆ ಸಂಚಿತ ಬಡ್ಡಿಯೊಂದಿಗೆ ಕೊಡಲಾಗುತ್ತದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿತ್ತು.

ಸೈನಿಕನ ಮರಣದ ದಿನಾಂಕದಿಂದ ನಾಲ್ಕು ವರ್ಷಗಳು ಪೂರ್ಣಗೊಳ್ಳುವವರೆಗಿನ ಉಳಿದ ಸೇವಾವಧಿಯ ವೇತನವನ್ನು ಸಹ ಇದು ಒಳಗೊಂಡಿದೆ. ಪ್ರಸ್ತುತ ಪ್ರಕರಣದಲ್ಲಿ ಈ ಮೊತ್ತ 13 ಲಕ್ಷ ರೂ. ಗಿಂತ ಹೆಚ್ಚು ಇದೆ. ಇನ್ನು ಸಶಸ್ತ್ರ ಪಡೆಗಳ ಯುದ್ಧ ಅಪಘಾತ ನಿಧಿಯಿಂದ 8 ಲಕ್ಷ ರೂ. ಹೆಚ್ಚುವರಿ ಕೊಡುಗೆಯನ್ನು ಸಂಬಂಧಿಕರಿಗೆ ನೀಡಲಾಗುತ್ತದೆ. ತಕ್ಷಣದ ಪರಿಹಾರವಾಗಿ ಒದಗಿಸಲು ಸೇನಾ ಯೋಧರ ಪತ್ನಿಯರ ಕಲ್ಯಾಣ ಸಂಘ (AWWA) 30 ಸಾವಿರ ರೂ. ಆರ್ಥಿಕ ನೆರವು ನೀಡುತ್ತಿದೆ. ಹೀಗಾಗಿ ಒಟ್ಟಾರೆ ಮೊತ್ತ ₹ 1.13 ಕೋಟಿ ದಾಟಲಿದೆ ಎಂದು ಸೇನೆ ತಿಳಿಸಿತ್ತು.

ಅಗ್ನಿವೀರ್‌ಗಳ ಸೇವಾ ನಿಯಮಗಳ ಪ್ರಕಾರ ಮರಣಹೊಂದಿದ, ಯುದ್ಧದಲ್ಲಿ ಗಾಯಗೊಂಡವರಿಗೆ ಅಧಿಕೃತವಾದ ಪರಿಹಾರಗಳು ಇವುಗಳನ್ನು ಒಳಗೊಂಡಿರುತ್ತವೆ. ಕೊಡುಗೆ ರಹಿತ ವಿಮಾ ಮೊತ್ತ 48 ಲಕ್ಷ ರೂ., ಅಗ್ನಿವೀರ್‌ ಸೇವಾ ನಿಧಿ ಶೇ. 30 ಮತ್ತು ಸರ್ಕಾರ ನೀಡುವ ಸಮಾನ ಹೊಂದಾಣಿಕೆಯ ಕೊಡುಗೆ ಮತ್ತು ಅದಕ್ಕೆ ಬಡ್ಡಿ. ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ​​(AWWA) ನಿಂದ 30 ಸಾವಿರ ರೂ. ತಕ್ಷಣದ ಆರ್ಥಿಕ ನೆರವು ಎಂದು ಸೇನೆ ಈ ಹಿಂದೆಯೇ ತಿಳಿಸಿತ್ತು.

Exit mobile version