Site icon Vistara News

Anupam Kher: ಪ್ರಾಮಾಣಿಕ ವ್ಯಕ್ತಿ ಸಹಿಸಿಕೊಳ್ಳಲೇಬೇಕು; ಉ.ಪ್ರ ಹಿನ್ನಡೆ ಕುರಿತು ಅನುಪಮ್ ಖೇರ್‌ ಟ್ವೀಟ್

Anupam Kher

ಲೋಕಸಭೆ ಚುನಾವಣೆ 2024ರ (Loksabha election-2024) ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಬಿಜೆಪಿ (Bjp) ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗಳಿಸಿದರೂ ಉತ್ತರ ಪ್ರದೇಶದಲ್ಲಿ (uttarpradesh) ಪಕ್ಷಕ್ಕೆ ಭಾರಿ ಆಘಾತವಾಗಿದೆ. ಅಯೋಧ್ಯೆ ಇರುವ ಫೈಜಾಬಾದ್ (Faizabad) ಸೇರಿದಂತೆ ಹಲವು ಕ್ಷೇತ್ರಗಳನ್ನು ಅದು ಸ್ಥಾನಗಳನ್ನು ಕಳೆದುಕೊಂಡಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ರಾಮಮಂದಿರವನ್ನು (rammandir) ನಿರ್ಮಿಸಿದರೂ ಬಿಜೆಪಿ ಅಲ್ಲಿ ಹಿನ್ನಡೆ ಕಂಡಿದೆ.

ಈ ಕುರಿತು ಬಾಲಿವುಡ್ ನಟ (Bollywood actor) ಮತ್ತು ಬಿಜೆಪಿ ಬೆಂಬಲಿಗ ಅನುಪಮ್ ಖೇರ್ (Anupam Kher) ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಫಲಿತಾಂಶದ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕಭಿ ಕಭಿ ಸೋಚ್ತಾ ಹೂಂ ಕಿ ಇಮಾಂದಾರ್ ವ್ಯಕ್ತಿ ಕೋ ಬಹೋತ್ ಝಾದಾ ಇಮಾಂದಾರ್ ನಹೀ ಹೋನಾ ಚಾಹಿಯೇ. ಜಂಗಲ್ ಮೇ ಸೀಧೇ ತಾನೆ ವಾಲೇ ಪೇಡ್ ಹೇ ಸಬ್ಸೇ ಪೆಹಲೇ ಕಾತೇ ಜಾತೇ ಹೈ. ಬಹುತ್ ಝಾದಾ ಇಮಾಂದಾರ್ ವ್ಯಕ್ತಿ ಕೋ ಹೇ ಸಬ್ಸೇ ಝ್ಯಾದಾ ಕಷ್ಟ ಉಠನೇ ಪಡತೇ ಹೈ. ಪರ್ ಫಿರ್ ಭಿ ವೋ ಅಪ್ನಿ ಇಮಾಂದಾರಿ ನಹೀ ಛೋಡ್ತಾ. ಇಸ್ಲಿಯೇ ಕರೋಡೋ ಲೋಗೋ ಕೆ ಲಿಯೇ ಪ್ರೇರಣಾ ಕಾ ಸ್ತೋತ್ರ ಬಂತ ಹೈ” ಎಂದು ಅವರು ಹೇಳಿದ್ದಾರೆ.


ಇದರ ಅನುವಾದ ಇಂತಿದೆ. ಕೆಲವೊಮ್ಮೆ ಪ್ರಾಮಾಣಿಕ ವ್ಯಕ್ತಿ ತುಂಬಾ ಪ್ರಾಮಾಣಿಕವಾಗಿರಬಾರದು ಎಂದು ನಾನು ಭಾವಿಸುತ್ತೇನೆ. ನೇರವಾದ ತೊಗಟೆಯನ್ನು ಹೊಂದಿರುವ ಮರವನ್ನು ಸಾಮಾನ್ಯವಾಗಿ ಮೊದಲು ಕತ್ತರಿಸಲಾಗುತ್ತದೆ. ಪ್ರಾಮಾಣಿಕ ವ್ಯಕ್ತಿ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಡೆತಡೆಗಳ ಹೊರತಾಗಿಯೂ, ಅವನು ತನ್ನ ಪ್ರಾಮಾಣಿಕತೆಯನ್ನು ಬಿಟ್ಟುಕೊಡುವುದಿಲ್ಲ. ಅದಕ್ಕಾಗಿಯೇ ಅವರು ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Election Results 2024: ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು!


ಈ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಯ ಸತತ ಮೂರನೇ ಗೆಲುವಿಗೆ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ: ಜನರು ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ. ಈ ಪ್ರೀತಿಗಾಗಿ ನಾನು ಜನತಾ ಜನಾರ್ದನರಿಗೆ ನಮಸ್ಕರಿಸುತ್ತೇನೆ. ಜನರ ಆಶೋತ್ತರಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ. ನಮ್ಮ ಎಲ್ಲಾ ಕಾರ್ಯಕರ್ತರ ಶ್ರಮಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಅಸಾಧಾರಣ ಪ್ರಯತ್ನಗಳಿಗೆ ಪದಗಳು ಎಂದಿಗೂ ನ್ಯಾಯವನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

Exit mobile version