ವಿಧಾನ ಪರಿಷತ್: ಬಿಡಿಎ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ನ ಮರಿತಿಬ್ಬೇಗೌಡ ಹಾಗೂ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸದನದಲ್ಲೇ (Assembly Session) ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡರು.
ಬಿಡಿಎಯಲ್ಲಿ ಅಕ್ರಮವಾಗಿದೆ ಎಂಬ ವಿಚಾರವಾಗಿ ವಿಧಾನಪರಿಷತ್‌ಬಲ್ಲಿ ಮರಿತಿಬ್ಬೇಗೌಡ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವ ಮುರುಗೇಶ್ ನಿರಾಣಿ, ಯಾವುದೇ ಅಕ್ರಮ ಆಗಿಲ್ಲ ಎಂದರು.
ನಿರಾಣಿ ಮಾತಿಗೆ ಸಿಟ್ಟಾದ ಮರಿತಿಬ್ಬೇಗೌಡ, ಉತ್ತರ ಕೊಡೋಕೆ ಯೋಗ್ಯತೆ ಇಲ್ಲ ನಿನಗೆ ಎಂದು ಏಕ ವಚನದಲ್ಲಿ ಬೈದರು. ಮರಿತಿಬ್ಬೇಗೌಡ ಮಾತಿಗೆ ನಿರಾಣಿ ಅಕ್ರೋಶ ವ್ಯಕ್ತಪಡಿಸಿ, ನಿನಗೆ ಯೋಗ್ಯತೆ ಇಲ್ಲ. ಏನೇನೋ ಮಾತಾಡ್ತೀಯಾ ಎಂದರು.
ಇದನ್ನೂ ಓದಿ: ಹಣ ಇಲ್ಲವೆಂದು JDS ಟಿಕೆಟ್ ಕೈತಪ್ಪಿದೆ: HDK ವಿರುದ್ಧ ಮರಿತಿಬ್ಬೇಗೌಡ ವಾಗ್ದಾಳಿ
ಮರಿತಿಬ್ಬೇಗೌಡ ವರ್ತನೆಗೆ ಆಕ್ರೋಶಗೊಂಡ ಸಭಾಪತಿ ಬಸವರಾಜ ಹೊರಟ್ಟಿ, ಉತ್ತರ ಕೊಡೊದು ಬೇಡ ಎಂದು ಸಚಿವರನ್ನು ಕೂರಿಸಿದರು. ಸಭಾಪತಿ ಮಾತಿಗೆ ಆಕ್ರೋಶಗೊಂಡ ಮರಿತಿಬ್ಬೇಗೌಡ, ಸಭಾಪತಿ ಮುಂಭಾಗಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದರು.