Site icon Vistara News

Bypolls For 13 Seats: 7 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ಇಂದು ನಡೆಯುತ್ತಿದೆ ಮರುಚುನಾವಣೆ; ಬಲಾಬಲ ಹೇಗಿದೆ?

Bypolls for 13 Seats

ಏಳು ರಾಜ್ಯಗಳ 13 ಅಸೆಂಬ್ಲಿ ಕ್ಷೇತ್ರಗಳಿಗೆ ಇಂದು ಉಪಚುನಾವಣೆ (Bypolls For 13 Seats) ನಡೆಯುತ್ತಿದೆ. ಇದು ಲೋಕಸಭಾ ಚುನಾವಣೆಯ (Lok Sabha election) ಅನಂತರ ನಡೆಯುವ ಮೊದಲ ಚುನಾವಣೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಬಹುಮತ ಕಡಿಮೆಯಾಗಿದ್ದು, ಪ್ರತಿಪಕ್ಷಗಳು ಶಕ್ತಿಯನ್ನು ಪ್ರದರ್ಶಿಸಿವೆ.

ಬಿಜೆಪಿ (BJP) 240 ಸ್ಥಾನಗಳನ್ನು ಗೆದ್ದುಕೊಂಡರೆ ಇಂಡಿಯಾ ಮೈತ್ರಿಕೂಟವು (INDIA alliance) 232 ಸ್ಥಾನಗಳನ್ನು ಗಳಿಸಿತು. 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು.

ಯಾವ ಕ್ಷೇತ್ರಗಳಲ್ಲಿ ಮತದಾನ?

ಪಶ್ಚಿಮ ಬಂಗಾಳದ ರಾಯಂಜ್, ರಣಘತ್ ದಕ್ಷಿಣ, ಬಾಗ್ಡಾ, ಮತ್ತು ಮಾನಿಕ್ತಾಲಾ, ಉತ್ತರಾಖಂಡದ ಬದ್ರಿನಾಥ್ ಮತ್ತು ಮಂಗ್ಲೌರ್, ಪಂಜಾಬ್ ನ ಜಲಂಧರ್ ವೆಸ್ಟ್, ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಘರ್, ಬಿಹಾರದ ರುಪೌಲಿ, ಮಧ್ಯಪ್ರದೇಶದ ಅಮರ್ವಾರಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಇದರಲ್ಲಿ ನಾಲ್ಕು ರಾಜ್ಯಗಳನ್ನು ಇಂಡಿಯಾ ಮೈತ್ರಿ ಕೂಟ ಆಳುತ್ತಿದ್ದರೆ, ಉಳಿದ ರಾಜ್ಯಗಳಲ್ಲಿ ಬಿಜೆಪಿ ಅಥವಾ ಎನ್‌ಡಿಎ ಸರ್ಕಾರವಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಸೇರಿದಂತೆ ಅನೇಕ ಅನುಭವಿಗಳು ಮತ್ತು ಕೆಲವು ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಚುನಾವಣೆ ಚುನಾವಣೆಯನ್ನು ಎದುರಿಸಲಿದ್ದಾರೆ.


ಯಾಕೆ ಈ ಉಪಚುನಾವಣೆ ?

ಕೆಲವು ಕ್ಷೇತ್ರಗಳ ಸದಸ್ಯರು ಸಾವನ್ನಪ್ಪಿದ್ದು ಅಥವಾ ರಾಜೀನಾಮೆಯಿಂದ ಖಾಲಿಯಾಗಿರುವುದರಿಂದ ಮರು ಚುನಾವಣೆ ನಡೆಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ಟಿಎಂಸಿ ಲೋಕಸಭಾ ಚುನಾವಣೆಯಲ್ಲಿ ತನ್ನ ಕಾರ್ಯಕ್ಷಮತೆಯಲ್ಲಿ ಲಾಭ ಮಾಡಿಕೊಳ್ಳಲು ನೋಡುತ್ತಿದೆ. ಆದರೆ ಸಂಸತ್ತಿನ ಚುನಾವಣೆಯ ಸಮಯದಲ್ಲಿ ಮೇಲುಗೈ ಸಾಧಿಸಿದ್ದ ನಾಲ್ಕು ಕ್ಷೇತ್ರಗಳಲ್ಲಿ ತನ್ನ ಮಹತ್ವದ ಮುನ್ನಡೆ ಸಾಧಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ.

2022ರ ಫೆಬ್ರವರಿಯಲ್ಲಿ ಟಿಎಂಸಿ ಶಾಸಕ ಸಾಧನ್ ಪಾಂಡೆ ಅವರ ಸಾವಿನಿಂದ ಮಣಿಕ್ತಾಲಾ ಗೆ ಮರುಚುನಾವಣೆ ಅಗತ್ಯವಾಗಿತ್ತು. ಟಿಎಂಸಿ ಈ ಸ್ಥಾನಕ್ಕೆ ಈಗ ಪಾಂಡೆ ಅವರ ಪತ್ನಿ ಸುಪ್ತಿಯನ್ನು ಕಣಕ್ಕಿಳಿಸಿದೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮೂವರು ಮಾಜಿ ಶಾಸಕರನ್ನು ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಬಿಜೆಪಿಯ ಹೋಶಿಯಾರ್ ಸಿಂಗ್ ವಿರುದ್ಧ ಡೆಹ್ರಾದಿಂದ ಸ್ಪರ್ಧಿಸುತ್ತಿದ್ದಾರೆ.
ಉತ್ತರಾಖಂಡದ ಮಾಂಗ್ಲಾರ್ ಕ್ಷೇತ್ರವು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದು ಬಿಎಸ್ಪಿ ಶಾಸಕ ಸರ್ವಾತ್ ಕರೀಮ್ ಅನ್ಸಾರಿ ಅವರ ಸಾವಿನಿಂದ ತೆರವಾದ ಕ್ಷೇತ್ರವಾಗಿದೆ. ಈ ಸ್ಥಾನವನ್ನು ಎಂದಿಗೂ ಗೆದ್ದಿಲ್ಲದ ಬಿಜೆಪಿ ಗುಜ್ಜರ್ ನಾಯಕ ಕಾರ್ತಾರ್ ಸಿಂಗ್ ಭದಾನಾ ಅವರನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ: Pralhad Joshi: ರೈತರ ಸಂಕಷ್ಟಕ್ಕೆ ಸ್ಪಂದಿಸಲಾಗದ ಬಲಹೀನ ರಾಜ್ಯ ಸರ್ಕಾರ: ಪ್ರಲ್ಹಾದ್‌ ಜೋಶಿ ಆಕ್ರೋಶ

ಪಂಜಾಬ್‌ನ ಜಲಂಧರ್ ವೆಸ್ಟ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕಠಿಣ ಪರೀಕ್ಷೆಯಾಗಿದೆ. ಎಎಪಿ ಮೊಹಿಂದರ್ ಭಗತ್ ಅವರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಸುರಿಂದರ್ ಕೌರ್ ಅವರನ್ನು ಸ್ಪರ್ಧೆಗೆ ಇಳಿಸಿದೆ.
ಮರು ಚುನಾವಣೆಯ ಮತ ಎಣಿಕೆ ಜುಲೈ 13ರಂದು ನಡೆಯಲಿದೆ.

Exit mobile version