Site icon Vistara News

ಮತ್ತೆರಡು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌; ದೇಶಾದ್ಯಂತ ಜಾತಿ ಗಣತಿ, ಸರ್ಕಾರಿ ಹುದ್ದೆ ಭರ್ತಿ ಭರವಸೆ

Mallikarjuna Kharge

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಮತದಾರರನ್ನು ಸೆಳೆಯಲು ಈಗಾಗಲೇ 3 ಗ್ಯಾರಂಟಿಗಳನ್ನು (Congress Guarantee) ಘೋಷಿಸಿರುವ ಕಾಂಗ್ರೆಸ್‌ ಇದೀಗ, 4 ಮತ್ತು 5ನೇ ಗ್ಯಾರಂಟಿಗಳನ್ನು ಘೋಷಿಸಿದೆ. ಕಾರ್ಮಿಕರಿಗಾಗಿ ‘ಶ್ರಮಿಕ ನ್ಯಾಯ’ ಮತ್ತು ‘ಸಹಭಾಗಿತ್ವದ ನ್ಯಾಯ’ ಯೋಜನೆಯನ್ನು ಘೋಷಣೆ ಮಾಡಿದ್ದು, ಪ್ರತಿ ನ್ಯಾಯ ಯೋಜನೆಯಲ್ಲಿ ಐದು ಭರವಸೆಗಳು ಇವೆ.

ಈ ಬಗ್ಗೆ ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಹಿತಿ ನೀಡಿದ್ದಾರೆ. ಮಣಿಪುರದಿಂದ ಆರಂಭವಾಗಿದ್ದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ನಾಳೆ ಮುಂಬೈನಲ್ಲಿ ಕೊನೆಗೊಳ್ಳಲಿದೆ. ಈಗಾಗಲೇ ಯುವ ನ್ಯಾಯ, ರೈತ ನ್ಯಾಯ, ನಾರಿ ನ್ಯಾಯ ಮೂಲಕ 15 ಭರವಸೆ ನೀಡಿದ್ದೇವೆ. 4ನೇ ಗ್ಯಾರಂಟಿಯಾಗಿ ‘ಶ್ರಮಿಕ ನ್ಯಾಯ’ ಹಾಗೂ 5ನೇ ಗ್ಯಾರಂಟಿಯಾಗಿ ಸಹಭಾಗಿತ್ವ ನ್ಯಾಹ ಘೋಷಣೆ ಮಾಡುತ್ತಿದ್ದೇವೆ. ಹಿಂದುಳಿದ ವರ್ಗಗಳು, ಬಡವರಿಗೆ ಅನುಕೂಲವಾಗಲು ಈ ಗ್ಯಾರಂಟಿಗಳನ್ನು ಘೋಷಿಸಲಾಗಿದೆ ಎಂದರು.

ಬಡ ಮತ್ತು ಶ್ರೀಮಂತರ ನಡುವೆ ಇರುವ ಅಂತರ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ. ಜಾತಿಗಣತಿ ಮಾಡುವ ಗ್ಯಾರಂಟಿ ನೀಡುತ್ತಿದ್ದ, ಇದು ಸಮುದಾಯಗಳ ಅಭಿವೃದ್ಧಿ ವಿಚಾರಕ್ಕೆ ಅನುಕೂಲವಾಗಲಿದೆ. ಶಿಕ್ಷಣ ಮತ್ತು ಸಾಮಾಜಿಕವಾಗಿ ಯೋಜನೆ ಕೊಡಲು ಅನುಕೂಲವಾಗಲಿದೆ. ಕರ್ನಾಟಕವು ಈಗಾಗಲೇ ಜಾತಿಗಣತಿ ವರದಿ ಸ್ವೀಕಾರ ಮಾಡಿದೆ, ಆದರೆ ಮೋದಿ ಮಾತ್ರ ಜಾತಿಗಣತಿಗೆ ವಿರೋಧ ಇದ್ದಾರೆ. ಜಾತಿಯಿಂದ ಹೊರಬರುವುದು ಮೋದಿಗೆ ಇಷ್ಟವಿಲ್ಲ. ಮೋದಿ ಹಿಂದುಳಿದ ಸಮುದಾಯಕ್ಕೆ ಸೇರಿದ್ದರೂ ಇದಕ್ಕೆ ವಿರೋಧ ಮಾಡುತ್ತಾರೆ. ಆದರೆ, ನಾವು ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿಗಣತಿ ಮಾಡುವ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದರು.

ಕೇಂದ್ರ ಸರ್ಕಾರ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡುತ್ತಿದೆ. ಆದರೆ, ನಾವು ಅಧಿಕಾರಕ್ಕೆ ಬಂದರೆ ಖಾಲಿ ಇರುವ ಸರ್ಕಾರಿ ಉದ್ಯೋಗ ಭರ್ತಿ ಮಾಡುವ ಗ್ಯಾರಂಟಿ ನೀಡುತ್ತೇವೆ ಎಂದರು.

ಇದನ್ನೂ ಓದಿ | Lok Sabha Election 2024: ಕರ್ನಾಟಕದಲ್ಲಿ ಏ. 26, ಮೇ 7ರಂದು 2 ಹಂತದಲ್ಲಿ ಮತದಾನ; ಯಾವ ಜಿಲ್ಲೆಯಲ್ಲಿ ಯಾವಾಗ?

ಮೋದಿಗೆ ಬಡವರ ಮೇಲೆ ಕಾಳಜಿ ಇಲ್ಲ, ಶ್ರೀಮಂತರ ಪರವಾಗಿ ಇದ್ದಾರೆ. ನಾನು ಕಾರ್ಮಿಕ ಸಚಿವನಾಗಿದ್ದಾಗ ತಂದ ಯೋಜನೆಗಳಿಂದ ನಮ್ಮ ಕಾರ್ಯಕರ್ತರೇ ನನ್ನ ವಿರುದ್ಧ ಪ್ರತಿಭಟನೆ ಮಾಡಿದರು. ಆದರೆ ನಾನು ಅದಕ್ಕೆ ಭಯ ಪಡಲಿಲ್ಲ. ನಾನು ಅವರನ್ನು ಕರೆದು ಮಾತನಾಡಿ ಮನವೊಲಿಸಿದೆ. ಕಲಬುರಗಿಯಲ್ಲಿ ದೊಡ್ಡ ಆಸ್ಪತ್ರೆ ಮತ್ತು ನಾಲ್ಕು ಕಾಲೇಜು ಕಟ್ಟಿದ್ದೇವೆ. AIIMS ಶುರು ಮಾಡಿ ಎಂದು ಮೋದಿ ಬಳಿ ಮನವಿ ಮಾಡಿದೆ, ಆದರೆ ಸಿದ್ದರಾಮಯ್ಯ ಸಪೋರ್ಟ್ ಮಾಡುತ್ತಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮೊದಲು ಆ ಕೆಲಸ ಶುರುವಾಗಿತ್ತು ಎಂದು ಅಸಮಾಧಾನ ಹೊರಹಾಕಿದರು.

ಶ್ರಮಿಕ ನ್ಯಾಯದ ಐದು ಭರವಸೆಗಳು

ಭಾಗೀದಾರರ ನ್ಯಾಯದ ಐದು ಗ್ಯಾರಂಟಿಗಳು

Exit mobile version