Site icon Vistara News

DK Shivakumar: ʻಬೊಂಬಾಟ್ ಭೋಜನʼದಲ್ಲಿ ಆತ್ಮೀಯ ಸ್ನೇಹಿತ‌‌ ಸಿಹಿಕಹಿ ಚಂದ್ರು ಅಡುಗೆ ಸವಿದ ಡಿ.ಕೆ ಶಿವಕುಮಾರ್

DK Shivakumar Sihi Kahi Chandru

ಬೆಂಗಳೂರು: ಚಂದನವನ, ಕಿರುತೆರೆ ಖ್ಯಾತ ನಟ ಸಿಹಿಕಹಿ ಚಂದ್ರು (Sihikahi Chandru) ನಡೆಸಿಕೊಡುವ ಬೊಂಬಾಟ್ ಭೋಜನ (Bombat Bhojana) ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಭಾಗಿಯಾಗಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ್ ʻʻನನ್ನ ಆತ್ಮೀಯ ಸ್ನೇಹಿತ‌‌ ಪಾಕ ಪ್ರವೀಣರೂ ಆಗಿರುವ ಚಂದ್ರು ಅವರ ಕೈರುಚಿಯ ಅಡುಗೆ ಸವಿದು ಬಹಳ ಕಾಲವಾಗಿತ್ತು, ಅದಕ್ಕೆ ಕಾಲ ಕೈಗೂಡಿರುವುದು ಖುಷಿಯ ಸಂಗತಿʼʼ‌ ಎಂದು ಟ್ವಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ರಾಜಕೀಯ ಒತ್ತಡಗಳ ನಡುವೆಯೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಡಿ.ಕೆ. ಶಿವಕುಮಾರ್, ಗೆಳೆಯನ ಕೈ ರುಚಿಯನ್ನು ಸವಿದಿದ್ದಾರೆ. ಇದೀಗ ಸಿಹಿ ಕಹಿ ಚಂದ್ರು ಅವರು ಕೂಡ ತಮ್ಮ ಇನ್‌ಸ್ಟಾದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್‌ ಟ್ವೀಟ್‌ ಮಾಡಿ ʻʻನನ್ನ ಆತ್ಮೀಯ ಸ್ನೇಹಿತ‌‌ ಹಾಗೂ ನಟ ಸಿಹಿಕಹಿ‌ ಚಂದ್ರು ಅವರು ನಡೆಸಿಕೊಡುವ ʻಬೊಂಬಾಟ್ ಭೋಜನʼ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ರುಚಿಕರ ಆಹಾರ ಸವಿದೆ. ಪಾಕ ಪ್ರವೀಣರೂ ಆಗಿರುವ ಚಂದ್ರು ಅವರ ಕೈರುಚಿಯ ಅಡುಗೆ ಸವಿದು ಬಹಳ ಕಾಲವಾಗಿತ್ತು, ಅದಕ್ಕೆ ಕಾಲ ಕೈಗೂಡಿರುವುದು ಖುಷಿಯ ಸಂಗತಿʼʼಎಂದು ಬರೆದುಕೊಂಡಿದ್ದಾರೆ.

ಸಿಹಿಕಹಿ ಚಂದ್ರು ಮತ್ತು ಡಿ.ಕೆ.ಶಿವಕುಮಾರ್ ಆತ್ಮೀಯ ಸ್ನೇಹಿತರು. ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ಡಿಕೆಶಿ ಕುಳಿತಾಗ ಚಂದ್ರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನೆಚ್ಚಿನ ಗೆಳೆಯನ ಬಗ್ಗೆ ಹೆಮ್ಮೆಯ ಮಾತುಗಳನ್ನೂ ಅವರು ಆಡಿದ್ದರು. ಡಿಕೆ ಶಿವಕುಮಾರ್ ಹಾಗೂ ಸಿಹಿ ಕಹಿ ಚಂದ್ರು ಇಬ್ಬರಿಗೂ ಒಂದು ಆತ್ಮೀಯ ಸಂಬಂಧವಿದೆ.

ಇದನ್ನೂ ಓದಿ: Weekend With Ramesh: ಶಂಕರ್‌ ನಾಗ್‌ಗೆ ಕರ್ನಾಟಕದ ಜನತೆಯ ಮೇಲಿದ್ದ ಕಾಳಜಿ ಬಗ್ಗೆ ವಿವರಿಸಿದ ಸಿಹಿ ಕಹಿ ಚಂದ್ರು

ಸಿಹಿಕಹಿ ಚಂದ್ರು ನಡೆಸಿಕೊಂಡು ಬರುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ಈ ಕಾರ್ಯಕ್ರಮದ ವಿಶೇಷತೆ ಅಂದರೆ ಬಯಲೂಟ, ಮನೆಯೂಟ, ಸವಿಯೂಟ, ನಮ್ಮೂರ ಊಟ, ಅತಿಥಿ ದೇವೋಭವ ಎಂಬ ವಿಭಾಗಗಳಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಆರೋಗ್ಯ ಆಹಾರ ಹಾಗೂ ಅಂಗೈಯಲ್ಲಿ ಆರೋಗ್ಯ ಎಂಬ ಹೆಸರಿನಲ್ಲಿ ಮನೆಮದ್ದುಗಳ ಕುರಿತಾಗಿಯೂ ಮಾಹಿತಿ ನೀಡಲಾಗುತ್ತದೆ.

ವೈದ್ಯರಾದ ಗೌರಿ ಸುಬ್ರಹ್ಮಣ್ಯ ಮನೆಮದ್ದು ಮಾಹಿತಿ ನೀಡಿದರೆ, ಎಂ.ಎನ್ ನರಸಿಂಹಮೂರ್ತಿ ಟೈಮ್ ಪಾಸ್ ಜೋಕ್ಸ್ ನಡೆಸಿಕೊಡುತ್ತಾರೆ. ಖುಷಿ ಚಂದ್ರಶೇಖರ್ ಬ್ಯೂಟಿ ಟಿಪ್ಸ್ ಹೇಳಿದರೆ, ಅಲ್ಲದೇ ಈ ಪಾಕಶಾಲೆಯಲ್ಲಿ ಮೂಡಿ ಬಂದ ಭೋಜನದ ವಿವರವನ್ನು ಒಳಗೊಂಡಂತಹ ಪುಸ್ತಕವನ್ನೂ ಸಿಹಿಕಹಿ ಚಂದ್ರು ಹೊರ ತಂದಿದ್ದಾರೆ.

ಇದನ್ನೂ ಓದಿ: Comedy khiladi Nayana: ಮೊದಲ ಮುಗುವಿನ ನಿರೀಕ್ಷೆಯಲ್ಲಿರುವ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

ಕಾರ್ಯಕ್ರಮದ ಸಾರಥಿ, ಸಿಹಿ ಕಹಿ ಚಂದ್ರು ಈ ಯಶಸ್ಸಿನ ಬಗ್ಗೆ ಈ ಹಿಂದೆ ಮಾತನಾಡಿದ್ದರು. “ನಾನು ಈ ಸೀಸನ್‌ನಲ್ಲಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಆಯಾ ಊರಿನ ಕೆಲವು ಮನೆಗಳಿಗೆ ಹಾಗೂ ಹೋಟೆಲ್‌ಗಳಿಗೆ ಭೇಟಿ ನೀಡಿ, ಅಲ್ಲಿನ ವಿಶೇಷ ಖಾದ್ಯ ತಿಂದಿದ್ದೇನೆ. ಹೋದ ಕಡೆಯಲ್ಲಾ ಸಿಗುತ್ತಿರುವ ಜನಮನ್ನಣೆಗೆ ಮನಸ್ಸು ತುಂಬಿ ಬಂದಿದೆ. ಸಾವಿರ ಕಂತಿಗೆ ದೊಡ್ಡ ಸಮಾರಂಭ ಆಯೋಜಿಸುವ ಯೋಚನೆಯಿದೆ ಎಂದಿದ್ದರು.

Exit mobile version