Site icon Vistara News

Himanta Biswa Sarma: ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಜನರಿಗೆ ಹೆಚ್ಚು ಸೂಕ್ತ: ಹಿಮಂತ ಬಿಸ್ವಾ ಶರ್ಮಾ

Himanta Sarma

Hindus Don't Indulge In Communalism, Only One Religion Does That; Says Himanta Biswa Sarma

ಅಸ್ಸಾಂ: ಕಾಂಗ್ರೆಸ್ (congress) ಪಕ್ಷ ಪಾಕಿಸ್ತಾನದಲ್ಲಿ (pakistan) ಚುನಾವಣೆ (election) ಗೆಲ್ಲುವ ತಯಾರಿ ಮಾಡಿದಂತಿದೆ. ರಾಹುಲ್ ಗಾಂಧಿ (rahul gandhi) ಅವರು ಪ್ರಧಾನಿ (PM) ಅಭ್ಯರ್ಥಿಯಾಗಲು ಸೂಕ್ತವೇ ಎಂದು ಪ್ರಶ್ನಿಸಿರುವ ಅಸ್ಸಾಂ (assam) ಮುಖ್ಯಮಂತ್ರಿ (cm) ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಟೀಕಿಸಿ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ಸಂಭಾವ್ಯ ಉಮೇದುವಾರಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಪಪ್ಪುಗೆ ಉತ್ತಮ ಅಭ್ಯರ್ಥಿ ಎಂದು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆ ಭಾರತಕ್ಕಿಂತ ಪಾಕಿಸ್ತಾನದ ಹಿತಾಸಕ್ತಿಗಳೊಂದಿಗೆ ಹೆಚ್ಚು ಹೊಂದಿಕೆಯಾಗಿದೆ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನದಲ್ಲಿ ಚುನಾವಣೆ ಗೆಲ್ಲುವ ರೀತಿಯಲ್ಲಿ ಸಿದ್ಧವಾಗಿದೆ. ನಾವು ಪ್ರಣಾಳಿಕೆಯನ್ನು ಓದಿದ್ದೇವೆ ಮತ್ತು ಓದಿದ ಅನಂತರ ಈ ಪ್ರಣಾಳಿಕೆಯು ಪಾಕಿಸ್ತಾನಕ್ಕೆ ಹೆಚ್ಚು ಮತ್ತು ಭಾರತಕ್ಕೆ ಕಡಿಮೆ ಎಂದು ತೀರ್ಮಾನಿಸಿದೆವು ಎಂದು ತಿಳಿಸಿದರು.

ಇದನ್ನೂ ಓದಿ: LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

ದೇಶದ ಆರ್ಥಿಕತೆ ನಾಶಪಡಿಸುವ ಗುರಿ

ಕಾಂಗ್ರೆಸ್ ಪಕ್ಷವು ಸಾಮಾನ್ಯ ಜನರ ಸಂಪನ್ಮೂಲಗಳನ್ನು ಕಸಿದುಕೊಂಡು ದೇಶದ ಆರ್ಥಿಕತೆಯನ್ನು ನಾಶಪಡಿಸುವ ಪ್ರಣಾಳಿಕೆಯನ್ನು ಮಾಡಿದೆ. ಆದ್ದರಿಂದ ನಾವು ಕಾಂಗ್ರೆಸ್ ಪ್ರಣಾಳಿಕೆಯನ್ನು ಸರಿಯಾದ ರೀತಿಯಲ್ಲಿ ವ್ಯಾಖ್ಯಾನಿಸಿದ್ದೇವೆ ಮತ್ತು ನಾನು ಈ ಪ್ರಣಾಳಿಕೆಯು ತುಷ್ಟೀಕರಣವಲ್ಲದೆ ಬೇರೇನೂ ಅಲ್ಲ ಎಂಬುದನ್ನು ತೋರಿಸಲು ಸಾರ್ವಜನಿಕ ಚರ್ಚೆಗೆ ಬರುವಂತೆ ಸವಾಲು ಹಾಕುವುದಾಗಿ ಹೇಳಿದರು.

ಲೋಕಸಭೆ ಚುನಾವಣೆ 2024ರ ಪ್ರಯುಕ್ತ ಕಾಂಗ್ರೆಸ್ ಪಕ್ಷವು ತನ್ನ ‘ನ್ಯಾಯ ಪತ್ರ’ ಚುನಾವಣಾ ಪ್ರಣಾಳಿಕೆಯನ್ನು ಏಪ್ರಿಲ್ 5ರಂದು ಬಿಡುಗಡೆ ಮಾಡಿತು. ಇದರ ಕುರಿತು ಪ್ರಧಾನಮಂತ್ರಿಯವರು ಸರಿಯಾಗಿ ಹೇಳಿದ್ದಾರೆ. ಈ ದೇಶದ ಸಂಪನ್ಮೂಲಗಳಲ್ಲಿ ಎಲ್ಲರಿಗೂ ಹಕ್ಕಿದೆ ಎಂದು ಹೇಳಿದ್ದರು. ಆದರೆ ದೇಶದ ಸಂಪನ್ಮೂಲಗಳಲ್ಲಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಮೊದಲ ಹಕ್ಕು ಎಂದು ಹೇಳಿರುವುದಕ್ಕೆ ಕಾಂಗ್ರೆಸ್ ಪಕ್ಷವೇ ಉತ್ತರಿಸಬೇಕು, ನಾವಲ್ಲ. ಈ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ವಿವರಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಪ್ರಣಾಳಿಕೆಯು “ತಾಯಿ ಮತ್ತು ಸಹೋದರಿಯರ ಚಿನ್ನ” ತೆಗೆದುಕೊಂಡು ಆ ಸಂಪತ್ತನ್ನು ಹಂಚುವ ಬಗ್ಗೆ ಮಾತನಾಡುತ್ತದೆ ಎಂದು ಪ್ರಧಾನಿ ಮೋದಿ ಏಪ್ರಿಲ್ 21ರಂದು ನಡೆದ ರಾಲಿಯಲ್ಲಿ ಹೇಳಿದ ಅನಂತರ ಶರ್ಮಾ ಈ ಹೇಳಿಕೆ ನೀಡಿದ್ದಾರೆ.

ಮೋದಿ ಏನು ಹೇಳಿದ್ದರು?

ಏಪ್ರಿಲ್ 21ರಂದು ನಡೆದ ರಾಲಿಯಲ್ಲಿಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನ ಪ್ರಣಾಳಿಕೆಯು ತಾಯಿ ಮತ್ತು ಸಹೋದರಿಯರ ಚಿನ್ನ ತೆಗೆದುಕೊಂಡು ಆ ಸಂಪತ್ತನ್ನು ಹಂಚುವ ಬಗ್ಗೆ ಮಾತನಾಡುತ್ತದೆ. ಅವರ ಮಂಗಳಸೂತ್ರವೂ ಅದರಲ್ಲಿ ಸೇರಿದೆ. ಚಿನ್ನದ ಬೆಲೆಯ ಪ್ರಶ್ನೆಯಲ್ಲ, ಅದು ಅವಳ ಜೀವನದ ಕನಸುಗಳಿಗೆ ಸಂಬಂಧಿಸಿದೆ. ಅದನ್ನು ನಿಮ್ಮ ಪ್ರಣಾಳಿಕೆಯಲ್ಲಿ ಕಸಿದುಕೊಳ್ಳುವ ಬಗ್ಗೆ ಹೇಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಅವರ ಸರ್ಕಾರವಾಗಿದ್ದಾಗ, ದೇಶದ ಸಂಪತ್ತಿನ ಮೇಲೆ ಮುಸಲ್ಮಾನರಿಗೆ ಮೊದಲ ಹಕ್ಕಿದೆ. ಸಂಪತ್ತನ್ನು ಯಾರಿಗೆ ಹಂಚುತ್ತೀರಿ, ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತೀರಿ, ನಿಮ್ಮ ದುಡಿಮೆಯ ಹಣವನ್ನು ನುಸುಳುಕೋರರಿಗೆ ಹಂಚುತ್ತೀರಿ ಎಂದು ಹೇಳಿದ್ದರು. ಇದು ಸ್ವೀಕಾರಾರ್ಹವೇ? ತಾಯಿಯ, ಸಹೋದರಿಯರ ಚಿನ್ನವನ್ನು ಲೆಕ್ಕ ಹಾಕಿ, ಆನಂತರ ಸಂಪತ್ತಿನ ಮೊದಲ ಹಕ್ಕು ಮುಸಲ್ಮಾನರದ್ದು ಎಂದು ಹೇಳಿದವರಿಗೆ ಸಂಪತ್ತನ್ನು ಹಂಚುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತಿದೆ ಎಂದು ಹೇಳಿದ್ದರು.

2006ರ ಡಿಸೆಂಬರ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ದೇಶದ ಸಂಪನ್ಮೂಲಗಳ ಮೇಲೆ ಮೊದಲು ಹಕ್ಕು ಪಡೆಯಬೇಕು ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದರು.

Exit mobile version