Site icon Vistara News

Actor Upendra: ನನಗೆ ಗೊತ್ತಿಲ್ಲ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ, ಅತಿ ಬುದ್ವಂತ್ರು! ಹೀಗೆ ಅಂದಿದ್ಯಾಕೆ ಉಪ್ಪಿ?

I don't know, if you know, let me know Actor Upendra Tweet war

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ಅವರು ಸಖತ್‌ ಸುದ್ದಿಯಲ್ಲಿದ್ದಾರೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ನಟ ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಯೊಂದನ್ನು ಎತ್ತಿ ಸಂಚಲನ ಮೂಡಿಸಿದ್ದರು. ಈ ಬಗ್ಗೆ ಭಾರಿ ಪರ ಮತ್ತು ವಿರೋಧ ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ನಡೆದಿದ್ದು, ಇದೀಗ ಮತ್ತೆ ಉಪ್ಪಿ ಖಡಕ್‌ ಆಗಿ ಟ್ವೀಟ್‌ ಮಾಡಿದ್ದಾರೆ.

ಉಪ್ಪಿ ಮೊದಲಿಗೆ ಟ್ವೀಟ್‌ ಮಾಡಿದ್ದೇನು?

“ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು
ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?!
ಏಕೆಂದು ಬಲ್ಲವರು ತಿಳಿಸುತ್ತೀರಾ?ಎಂದು ಟ್ವೀಟ್‌ ಮಾಡಿದ್ದರು. ಈ ಬಗ್ಗೆ ಸಾರ್ವಜನಿಕರು ಉಪ್ಪಿಗೆ ತಲೆ ಕೆಟ್ಟಿದೆಯಾ ಎಂದು ಕಮೆಂಟ್‌ ಮೂಲಕ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಒಬ್ಬರು ʻʻಸ್ವಲ್ಪ ಅರ್ಥ ಮಾಡ್ಕೊಳಿ ಸ್ವಾಮಿ. ಮತಯಂತ್ರಗಳನ್ನು ಮತಗಟ್ಟೆಗಳಿಂದ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ಯಬೇಕು, ಅದರ ಜತೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಇತ್ಯಾದಿ ಇರುತ್ತೆ ಅಲ್ವಾ? ಇಷ್ಟೆಲ್ಲಾ ಮಾಡೋಕ್ಕೆ 2 ದಿನ ಬೇಕಲ್ವಾ ಸ್ವಾಮಿ?ʼʼಎಂದು ಕಮೆಂಟ್‌ ಮಾಡಿದರೆ, ಇನ್ನೊಬ್ಬರು ʻʻನಿಮ್ಮ ಸಿನಿಮಾ ಶೂಟಿಂಗ್ ಮುಗಿದ ದಿನವೇ ರಿಲೀಸ್‌ ಮಾಡ್ತೀರಾ? ಏಕೆಂದು ತಿಳಿಸುವಿರಾ ಸ್ವಾಮಿ?ʼʼಎಂದು ಕಮೆಂಟ್‌ ಮಾಡಿದ್ದಾರೆ.

ʻʻತಾಂತ್ರಿಕ ದೋಷದಿಂದ ಮತ್ತು ಬೇರೆ ಕಾರಣಗಳಿಂದ ಮತದಾನ ನಿಂತರೆ ಮರುಮತದಾನ ಮಾಡಲಿಕ್ಕೆ ಸಮಯ ಬೇಕಲ್ಲವೇ?ʼʼಎಂದು ಕಮೆಂಟ್‌ ಮಾಡಿದ್ದಾರೆ. ಹೀಗೆ ಪೋಸ್ಟ್‌ ಹಾಕಿದ ಬೆನ್ನಲ್ಲೇ ನಟ ಉಪ್ಪಿಗೆ ಸಾವರ್ಜನಿಕರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದಾದ ನಂತರ ಮತ್ತೆ ಉಪ್ಪಿ ತಮ್ಮ ಟ್ವೀಟ್‌ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

ಉಪೇಂದ್ರ ಅವರ ಎರಡನೇ ಟ್ವೀಟ್‌

ಉಪ್ಪಿ ತಮ್ಮ ಟ್ವೀಟ್‌ನಲ್ಲಿ ʻʻಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….ಅಬ್ಬಬ್ಬಾ ಏನು ಕಾಮೆಂಟ್ಸ್‌ಗಳು ?!ವಾರೆ ವಾಹ್! ವ್ಯಾಪಾರಿ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಮೆಂಟ್ ಮಾಡಿ ನೋಡೋಣ. ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….!ʼʼಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Priyanka Upendra | ʻಪ್ರಜೆಯೇ ಪ್ರಭು’ ಎಂದು ಪ್ರಜಾಕೀಯಕ್ಕೆ ಸಾಥ್‌ ಕೊಟ್ರಾ ಪ್ರಿಯಾಂಕಾ ಉಪೇಂದ್ರ?

ಈ ಬಗ್ಗೆ ನೆಟ್ಟಿಗರು ಕೂಡ ಖಡಕ್‌ ಪ್ರತಿಕ್ರಿಯೆ ನೀಡಿದ್ದು ಒಬ್ಬರು ʻನಿಮ್ಮದೂ ರಾಜಕೀಯ ಪಕ್ಷನೇ, ಪ್ರಜಾಕೀಯ ಅಂತ ಹೆಸರು ಹೇಳಿದ್ದು ಕೂಡಲೇ ಅದು ಚೇಂಜ್ ಆಗಲ್ಲ.. ಡಿಜಿಟಲ್ ಕ್ಯಾಮೆರಾ, ಹೈ ಟೆಕ್‌ನಾಲಜಿ ಮಾಡಿ ಮಾಡುವ ಸಿನೆಮಾ ಆಗಿದ್ರೆ ಯಾಕೆ ಟೈಂ ತಗೊಂಡು ರಿಲೀಸ್ ಮಾಡ್ತೀರಾʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಇನ್ನೊಬ್ಬರು ʻʻಮೊದಲು ಚುನಾವಣೆ ವ್ಯವಸ್ಥೆ ಅರ್ಥ ಮಾಡಿಕೊಳ್ಳಿ. ಎಲ್ಲಿಯಾದರೂ ಮತದಾನಕ್ಕೆ ತೊಂದರೆ ಆದರೆ ಎರಡು ದಿನ ಬಿಟ್ಟು ಮರು ಮತದಾನ ನಡೆಸಬೇಕು. ಇದುವೇ ಮುಖ್ಯ ಕಾರಣʼʼಎಂದು ಸಲಹೆ ನೀಡಿದ್ದಾರೆ.

Exit mobile version