Site icon Vistara News

Opposition Leader: 10 ವರ್ಷ ಬಳಿಕ ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ! ಇವರಿಗೆ ಸಿಗುವ ಸವಲತ್ತುಗಳೇನು?

Leader of the Opposition

ಲೋಕಸಭೆ ಚುನಾವಣೆ (loksabha election) ಫಲಿತಾಂಶ ಹೊರಬಿದ್ದು ಹದಿನೈದು ದಿನ ಕಳೆದಿದೆ. ಈಗ ಭಾರಿ ಚರ್ಚೆಯಲ್ಲಿರುವ ವಿಷಯ ವಿರೋಧ ಪಕ್ಷದ ನಾಯಕನ (Opposition Leader) ಸ್ಥಾನದ್ದು. ಯಾಕೆಂದರೆ 10 ವರ್ಷಗಳ ಬಳಿಕ ದೇಶದ ಕೆಳಮನೆಯಲ್ಲಿ (loksabha) ಪ್ರತಿಪಕ್ಷದ ನಾಯಕ ತನ್ನ ಸ್ಥಾನವನ್ನು ಅಲಂಕರಿಸಲಿದ್ದಾರೆ. 2014ರಿಂದ ಈ ಹುದ್ದೆ ಖಾಲಿಯಿತ್ತು. ಆದರೆ ಈ ಬಾರಿ ಕಾಂಗ್ರೆಸ್ (congress) ಸಾಕಷ್ಟು ಸ್ಥಾನಗಳನ್ನು ಗಳಿಸಿರುವುದರಿಂದ ವಿರೋಧ ಪಕ್ಷದ ನಾಯಕನ ಆಯ್ಕೆ ಶೀಘ್ರದಲ್ಲಿ ನಡೆಯಲಿದೆ.

ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಸಂಸದರ ಸಂಖ್ಯೆ ಒಟ್ಟು ಲೋಕಸಭೆ ಸದಸ್ಯರ ಪೈಕಿ ಶೇ.10ಕ್ಕಿಂತ ಕಡಿಮೆ ಇತ್ತು. ವಿಶೇಷವೆಂದರೆ, ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ದೇಶದಲ್ಲಿ ಎಂಟು ಬಾರಿ ಇಂತಹ ಘಟನೆ ನಡೆದಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳು ಇಲ್ಲಿದೆ.

ವಿರೋಧ ಪಕ್ಷದ ಮೊದಲ ನಾಯಕ

ಪಂಡಿತ್ ಜವಾಹರಲಾಲ್ ನೆಹರೂ ಪ್ರಧಾನಿ ಆಗಿದ್ದ ಮೊದಲ, ಎರಡನೇ ಮತ್ತು ಮೂರನೇ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಹುದ್ದೆ ಖಾಲಿ ಉಳಿದಿತ್ತು. ನಾಲ್ಕನೇ ಲೋಕಸಭೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ್ದು ರಾಮ್ ಸುಭಾಗ್ ಅವರು ಈ ಸ್ಥಾನ ಪಡೆದರು.

ಎಂಟು ಬಾರಿ ಸ್ಥಾನ ಖಾಲಿಯಾಗಿತ್ತು

ಐದು, ಏಳು ಮತ್ತು ಎಂಟನೇ ಲೋಕಸಭೆಯಲ್ಲಿ ಈ ಹುದ್ದೆ ಖಾಲಿ ಉಳಿದಿತ್ತು. 16ನೇ ಲೋಕಸಭೆ ಚುನಾವಣೆ 2014 ಮತ್ತು 17ನೇ ಲೋಕಸಭೆ 2019ರಲ್ಲಿ ವಿರೋಧ ಪಕ್ಷಗಳು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. 18ನೇ ಲೋಕಸಭೆಯಲ್ಲಿ ಪ್ರಪ್ರಥಮ ಬಾರಿಗೆ ನರೇಂದ್ರ ಮೋದಿ ವಿರುದ್ಧ ಅಧಿಕೃತವಾಗಿ ಪ್ರತಿಪಕ್ಷ ನಾಯಕನನ್ನು ನೇಮಿಸುವ ಅವಕಾಶ ವಿಪಕ್ಷಗಳಿಗೆ ಸಿಕ್ಕಿದೆ. ಲೋಕಸಭೆಯಲ್ಲಿ ಒಟ್ಟು ಎಂಟು ಬಾರಿ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಉಳಿದಿತ್ತು.

10 ವರ್ಷಗಳ ಅನಂತರ ಕಾಂಗ್ರೆಸ್‌ಗೆ ಅವಕಾಶ

2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 240 ಸ್ಥಾನಗಳನ್ನು ಪಡೆದುಕೊಂಡಿದೆ. ಆದರೆ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) 292 ಲೋಕಸಭಾ ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಪಡೆದುಕೊಂಡಿದೆ. ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಪಡೆಯಲು ಶಕ್ತವಾಗಿತ್ತು. ಆದರೆ ಈ ಬಾರಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವಷ್ಟು ಸ್ಥಾನಗಳನ್ನು ಪಡೆದಿದೆ.

ಇದನ್ನೂ ಓದಿ: Petrol Diesel Price Hike: ಬಿಜೆಪಿಯವರು ಪ್ರತಿಭಟನೆ ಮಾಡಬೇಕಿರೋದು ಕೇಂದ್ರದ ವಿರುದ್ಧ: ಸಿಎಂ ತಿರುಗೇಟು

ವಿರೋಧ ಪಕ್ಷದ ನಾಯಕನಿಗೆ ಸಿಗುವ ಸೌಲಭ್ಯಗಳೇನು?

ವಿರೋಧ ಪಕ್ಷದ ನಾಯಕನ ಹುದ್ದೆಯು ಕ್ಯಾಬಿನೆಟ್ ಸಚಿವರಿಗೆ ಸಮಾನವಾಗಿದೆ. ಅವರು ಕೇಂದ್ರ ಸಚಿವರಿಗೆ ಸಮಾನವಾದ ಸಂಬಳ, ಭತ್ಯೆಗಳು ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಾರೆ. ವಸತಿ ಮತ್ತು ಚಾಲಕನೊಂದಿಗೆ ಕಾರನ್ನು ಒದಗಿಸಲಾಗುತ್ತದೆ. ವಿರೋಧ ಪಕ್ಷದ ನಾಯಕರಿಗೂ ಸಿಬ್ಬಂದಿ ಸಿಗುತ್ತಾರೆ. ವಿರೋಧ ಪಕ್ಷದ ನಾಯಕರು ಸಾರ್ವಜನಿಕ ಖಾತೆಗಳು, ಸಾರ್ವಜನಿಕ ಉದ್ಯಮಗಳು ಮತ್ತು ಅಂದಾಜುಗಳಂತಹ ಪ್ರಮುಖ ಸಮಿತಿಗಳ ಸದಸ್ಯರಾಗಿರುತ್ತಾರೆ. ಅವರು ಹಲವಾರು ಇತರ ಜಂಟಿ ಸಂಸದೀಯ ಸಮಿತಿಗಳ ಸದಸ್ಯರೂ ಆಗಿರುತ್ತಾರೆ.

ಸಿಬಿಐ, ಎನ್‌ಎಚ್‌ಆರ್‌ಸಿ, ಕೇಂದ್ರ ಜಾಗೃತ ಆಯೋಗ, ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರನ್ನು ನೇಮಿಸುವ ಆಯ್ಕೆ ಸಮಿತಿಗಳಲ್ಲಿ ವಿರೋಧ ಪಕ್ಷದ ನಾಯಕನನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ಸಂಸತ್ತಿನಲ್ಲಿ ಸರ್ಕಾರದ ನೀತಿಗಳನ್ನು ಟೀಕಿಸುವ ಸ್ವಾತಂತ್ರ್ಯ ವಿರೋಧ ಪಕ್ಷದ ನಾಯಕನಿಗೆ ಇರುತ್ತದೆ.

Exit mobile version