ಬಳ್ಳಾರಿ: ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ. ಸಂವಿಧಾನದ ಉಳಿಸುವ ಚುನಾವಣೆಯಾಗಿದೆ (Lok Sabha Election 2024) ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ತಿಳಿಸಿದರು.
ನಗರದ ಬಳ್ಳಾರಿ ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿಗಳ ಮತ್ತು ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮಾಜ, ವರ್ಗದ ಕಲ್ಯಾಣಕ್ಕಾಗಿ ದುಡಿದ ಪಕ್ಷ ಕಾಂಗ್ರೆಸ್. ಸಮಾನ ಮನಸ್ಕರು ಒಂದಾಗಿ ಪಕ್ಷ ಗೆಲ್ಲಿಸೋಣ. ಸಮ ಸಮಾಜ ಕಟ್ಟೋಣ ಎಂದು ಅವರು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ತಮಗೆ ಮತ ನೀಡಿ ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ
ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಶಾಸಕ ನಾರಾ ಭರತ್ ರೆಡ್ಡಿ, ಮುಖಂಡರಾದ ಕೆ.ಎಸ್.ಎಲ್. ಸ್ವಾಮಿ, ಮುಂಡರಗಿ ನಾಗರಾಜ್, ಮಾನಯ್ಯ ಸೇರಿದಂತೆ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
ಕಮ್ಮ ಸಮುದಾಯದ ಸಭೆಯಲ್ಲಿ ಮತಯಾಚನೆ
ಬಳ್ಳಾರಿಯ ಕಮ್ಮ ಸಮುದಾಯದ ಸಭೆಯಲ್ಲಿ ಮತಯಾಚಿಸಿದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಈ. ತುಕಾರಾಂ, ತಮಗೆ ಈ ಬಾರಿಯ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಇದನ್ನೂ ಒದಿ: World Malaria Day: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ?
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಮುಖಂಡ ಬಿ.ಎಂ. ಪಾಟೀಲ್ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.