Site icon Vistara News

Lok Sabha Election 2024: ಸ್ಯಾಂಡಲ್‌ವುಡ್‌ ತಾರೆಯರು ಎಲ್ಲೆಲ್ಲಿ ವೋಟ್‌ ಹಾಕ್ತಾರೆ?

Lok Sabha Election 2024 sandalwood celebs where do cast their votes

ಬೆಂಗಳೂರು: ಕರ್ನಾಟಕ ಸೇರಿದಂತೆ (Lok Sabha Election 2024) ದೇಶದ ಒಟ್ಟು 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಹಬ್ಬ (Voting) ರಂಗೇರಿದೆ. ಎರಡನೇ ಹಂತದಲ್ಲಿ ಒಟ್ಟು 88 ಲೋಕಸಭಾ ಕ್ಷೇತ್ರಗಳಲ್ಲಿ (Lok sabha election 2024) ಇಂದು ಮತದಾನಕ್ಕೆ ಮತದಾರ ಸಜ್ಜಾಗಿದ್ದು, ಕೇರಳ (Kerala) ದ ಎಲ್ಲಾ 20 ಕ್ಷೇತ್ರಗಳು, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ 8 ಕ್ಷೇತ್ರಗಳು, ಅಸ್ಸಾಂ ಮತ್ತು ಬಿಹಾರಗಳ 5 ಕ್ಷೇತ್ರಗಳು, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದ 2, ಜಮ್ಮು-ಕಾಶ್ಮೀರ, ಮಣಿಪುರ, ತ್ರಿಪುರಗಳಲ್ಲಿ ತಲಾ 1 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಬೆಂಗಳೂರಿನಲ್ಲೇ ಬಹುತೇಕ ಸೆಲೆಬ್ರೆಟಿಗಳು ವಾಸವಿದ್ದಾರೆ. ಹಾಗಾಗಿ ಸಾಕಷ್ಟು ಜನ ತಮ್ಮ ನಿವಾಸದ ಬಳಿ ಇರುವ ಮತಗಟ್ಟೆಗಳಲ್ಲಿ ಹಕ್ಕು ಚಲಾವಣೆ ಮಾಡಲಿದ್ದಾರೆ. ನಟ ದರ್ಶನ್ ಆರ್‌. ಆರ್‌ ನಗರದ ಮೌಂಟ್ ಕಾರ್ಮೆಲ್ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ. ಈಗಾಗಲೇ ನಟ ಗೋಪಾಲ್ ದೇಶಪಾಂಡೆ ಮತದಾನ ಮಾಡಿದ್ದಾರೆ. ಕಲಾ ದಂಪತಿಗಳದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಬೆಂಗಳೂರು ಉತ್ತರ, ಯಶವಂತಪುರ ಕ್ಷೇತ್ರದಲ್ಲಿ ವೋಟ್‌ ಹಾಕಿದರು. ಚಂದನ್ ಶೆಟ್ಟಿ ನಾಗರಾಬಾವಿಯಲ್ಲಿ ಮತದಾನ ಮಾಡಿದ್ದಾರೆ.

ರಾಘಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬ ಸದಸ್ಯರು ಸದಾಶಿವನಗರದ ಪೂರ್ಣ ಪ್ರಜ್ಞಾ ಎಜುಕೇಶನ್ ಸ್ಕೂಲ್‌ನಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ. ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ವೋಟ್ ಮಾಡಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ ಚಲಾಯಿಸಲು ಕತ್ರಿಗುಪ್ಪೆ BTL ವಿದ್ಯಾವಾಹಿನಿ ಶಾಲೆಯ ಮತಗಟ್ಟೆಗೆ ತೆರಳಲಿದ್ದಾರೆ.

ಇದನ್ನೂ ಓದಿ: Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

ಗಣೇಶ್, ದಿಗಂತ್, ಪ್ರೇಮ್ ದಂಪತಿ ಆರ್‌ ಆರ್ ನಗರ, ಕುಂದಾಪುರದ ಕೆರಾಡಿ ಶಾಲೆಯಲ್ಲಿ ರಿಷಬ್ ಶೆಟ್ಟಿ, ಉಡುಪಿಯಲ್ಲಿ ರಕ್ಷಿತ್ ಶೆಟ್ಟಿ, ಅರಸೀಕೆರೆಯಲ್ಲಿ ಧನಂಜಯ್ ಮತ ಚಲಾಯಿಸಲಿದ್ದಾರೆ.
ಮಾಳವಿಕಾ ಅವಿನಾಶ್,ವಸಿಷ್ಠ ಸಿಂಹ, ಹರಿಪ್ರಿಯಾ, ಅಮೂಲ್ಯ, ಅವಿನಾಶ್‌ ಆರ್‌ ಆರ್‌​ನಗರದಲ್ಲಿ,
ಸೃಜನ್ ಲೋಕೇಶ್, ಪೂಜಾ ಗಾಂಧಿ, ದುನಿಯಾ ವಿಜಯ್ ಕತ್ರಿಗುಪ್ಪೆ.

ಅನಂತ್ ನಾಗ್: ಮಲ್ಲೇಶ್ವರಂ, ​ಧ್ರುವ ಸರ್ಜಾ: ತ್ಯಾಗರಾಜನಗರ (ಕೆಆರ್​.ರೋಡ್​, ಶಾಸ್ತ್ರಿ ನಗರ) ಶ್ರೀಮುರುಳಿ: ವಸಂತ ನಗರ ಪ್ರಶಾಂತ್​ನೀಲ್​: ವಸಂತ ನಗರ, ಮಾಲಾಶ್ರೀ: ಶಿವಾಜಿನಗರ ರಾಜ್ ಬಿ.ಶೆಟ್ಟಿ: ಉಡುಪಿ ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ) ಆಶಿಕಾ ರಂಗನಾಥ್: ತುಮಕೂರು ಚಿಕ್ಕಣ್ಣ: ಮೈಸೂರು ವಿನೋದ್ ರಾಜ್: ಸೋಲದೇವನ ಹಳ್ಳಿ ದೊಡ್ಡಣ್ಣ: ಬಿದರುಕಲ್ಲು ಮತ ಚಲಾಯಿಸಲಿದ್ದಾರೆ.

Exit mobile version