ಹೊಸದಿಲ್ಲಿ: ಲೋಕಸಭಾ ಚುನಾವಣೆ 2024ರಲ್ಲಿ (Lok Sabha Election 2024) ಈ ಬಾರಿ ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಹೋರಾಡುತ್ತಿದ್ದು, ಸಣ್ಣ ಪಕ್ಷಗಳನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡಿವೆ. ಹಿಂದಿನ ಚುನಾವಣೆಯಲ್ಲಿ ಎರಡು ಬಾರಿ ಅಧಿಕಾರಕ್ಕೆ ಏರಿರುವ ಎನ್ಡಿಎಯನ್ನು (NDA) ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ (congress) ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟವನ್ನು (India alliance) ರಚಿಸಲಾಗಿದೆ. ಅದೇ ರೀತಿ ಎನ್ಡಿಎ ಕೂಡ ತನ್ನ ಸಾಮರ್ಥ್ಯವನ್ನು ವೃದ್ಧಿಸಲು ಕೆಲವು ಪಕ್ಷಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ.
ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾದ ಬಳಿಕ ಎನ್ಡಿಎ ಕೂಡ ಹಳೆಯ ಮತ್ತು ಹೊಸ ಘಟಕಗಳನ್ನು ಸೇರಿಸಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್ಡಿಎ) ನವ ಭಾರತವನ್ನು (N-New India), ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ( D-Developed Nation) ಮಾಡಲು ಬಯಸುವ ಆಕಾಂಕ್ಷೆಯುಳ್ಳ ಭಾರತದ ಜನರು (A-Aspiration of People of India) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂಡಿಯಾ ಮೈತ್ರಿ ಕೂಟ ರಚನೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಘೋಷಿದ್ದರು.
ಇದನ್ನೂ ಓದಿ: CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್ ಘೋಷಣೆ
ಇಂಡಿಯಾ
2024ರ ಲೋಕಸಭೆ ಚುನಾವಣೆಗಾಗಿ ವಿರೋಧ ಪಕ್ಷಗಳು ಒಗ್ಗೂಡಿ ರಚಿಸಿದ ಮೈತ್ರಿ ಕೂಟ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು, ಸಂವಿಧಾನವನ್ನು ರಕ್ಷಿಸುವುದು, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವುದು ಇದರ ಮುಖ್ಯ ಉದ್ದೇಶ ಎಂದು ಘೋಷಿಸಿದೆ.
ಇಂಡಿಯಾ ಒಕ್ಕೂಟದಲ್ಲಿವೆ 26 ಪಕ್ಷಗಳು
ಕಾಂಗ್ರೆಸ್ ನೇತೃತ್ವದಲ್ಲಿ 26 ವಿರೋಧ ಪಕ್ಷಗಳು ಒಗ್ಗೂಡಿವೆ. ಅವುಗಳೆಂದರೆ:
- – ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ)
- – ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)
- – ಆಮ್ ಆದ್ಮಿ ಪಕ್ಷ (ಎಎಪಿ)
- – ರಾಷ್ಟ್ರೀಯ ಜನತಾ ದಳ (RJD)
- – ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)
- – ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಶರದ್ ಪವಾರ್ ಬಣ
- – ಶಿವಸೇನೆ (UBT)
- – ಸಮಾಜವಾದಿ ಪಕ್ಷ (SP)
- – ರಾಷ್ಟ್ರೀಯ ಲೋಕದಳ (RLD)
- – ಅಪ್ನಾ ದಳ (ಕಾಮೆರವಾಡಿ)
- – ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್ (NC)
- – ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP)
- – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ)
- – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)
- – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್
- – ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP)
- – ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK)
- – ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ)
- – ಕೊಂಗುನಾಡು ಮಕ್ಕಳ್ ದೇಸಿಯ ಕಚ್ಚಿ (KMDK)
- – ಮನಿತನೇಯ ಮಕ್ಕಳ್ ಕಚ್ಚಿ (ಎಂಎಂಕೆ)
- – ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
- – ಕೇರಳ ಕಾಂಗ್ರೆಸ್ (ಎಂ)
- – ಕೇರಳ ಕಾಂಗ್ರೆಸ್ (ಜೋಸೆಫ್)
ಎನ್ಡಿಎ ಬಣದಲ್ಲಿ 38 ಪಕ್ಷಗಳು
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಡಳಿತಾರೂಢ ಎನ್ಡಿಎಯ 38 ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿದೆ. ಮೈತ್ರಿಯಲ್ಲಿ ಭಾರತೀಯ ಜನತಾ ಪಕ್ಷದ ಬಹುದೊಡ್ಡ ಶಕ್ತಿಯಾಗಿದೆ.
ಎನ್ಡಿಎ ಘಟಕದಲ್ಲಿ ಇವರು ಪಕ್ಷಗಳು ಹೀಗಿವೆ:
-ಭಾರತೀಯ ಜನತಾ ಪಕ್ಷ
- – ಶಿವಸೇನೆ (ಏಕನಾಥ್ ಶಿಂಧೆ ಬಣ)
- – ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎನ್ಸಿಪಿ (ಅಜಿತ್ ಪವಾರ್ ಬಣ)
- – ಜನತಾ ದಳ ಸಂಯುಕ್ತ (ನಿತೀಶ್ ಕುಮಾರ್)
- – ಜೆಡಿಎಸ್ (ದೇವೇಗೌಡ)
- – ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಪಶುಪತಿ ಕುಮಾರ್ ಪರಸ್ ಬಣ)
- – ಅಪ್ನಾ ದಲ್ (ಸೋನೆಲಾಲ್)
- -ನ್ಯಾಷನಲ್ ಪೀಪಲ್ಸ್ ಪಾರ್ಟಿ
- – ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ನೈಫಿಯು ರಿಯೊ)
- – ಜಾರ್ಖಂಡ್ ವಿದ್ಯಾರ್ಥಿಗಳ ಒಕ್ಕೂಟ
- – ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ
- – ಮಿಜೋ ನ್ಯಾಷನಲ್ ಫ್ರಂಟ್
- – ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ
- – ನಾಗಾ ಪೀಪಲ್ಸ್ ಫ್ರಂಟ್
- – ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ),
- -ಅಸೋಮ್ ಗಣ ಪರಿಷತ್
- – ಪಟ್ಟಾಲಿ ಮಕ್ಕಳ್ ಕಚ್ಚಿ
- – ತಮಿಳು ಮಾನಿಲ ಕಾಂಗ್ರೆಸ್
- – ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್
- – ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಓಂ ಪ್ರಕಾಶ್ ರಾಜಭರ್)
- – ಶಿರೋಮಣಿ ಅಕಾಲಿ ದಳ (ಸಂಯುಕ್ತ)
- – ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ
- – ಜನನಾಯಕ ಜನತಾ ಪಾರ್ಟಿ
- – ಪ್ರಹಾರ್ ಜನಶಕ್ತಿ ಪಾರ್ಟಿ
- – ರಾಷ್ಟ್ರೀಯ ಸಮಾಜ ಪಕ್ಷ
- – ಜನ ಸುರಾಜ್ಯ ಶಕ್ತಿ ಪಾರ್ಟಿ
- – ಕುಕಿ ಪೀಪಲ್ಸ್ ಅಲೈಯನ್ಸ್ (ಮಣಿಪುರ)
- – ಯುನೈಟೆಡ್ ಡೆಮಾಕ್ರಟಿಕ್ ಪಕ್ಷ
- – ಹಿಲ್ ಸ್ಟೇಟ್ ಪೀಪಲ್ಸ್, ಡೆಮಾಕ್ರಟಿಕ್ ಪಾರ್ಟಿ
- – ನಿಶಾದ್ ಪಾರ್ಟಿ
- – ಅಖಿಲ ಭಾರತ ಎನ್ ಆರ್ ಕಾಂಗ್ರೆಸ್
- – ಹಿಂದೂಸ್ತಾನ್ ಅವಾಮ್ ಮೋರ್ಚಾ
- – ಜನಸೇನಾ ಪಕ್ಷ
- – ಹರಿಯಾಣ ಲೋಕ್ಹಿತ್ ಪಾರ್ಟಿ
- -ಭಾರತ ಧರ್ಮ ಜನ ಸೇನೆ
- -ಕೇರಳ ಕಾಮರಾಜ್ ಕಾಂಗ್ರೆಸ್
- – ಪುಟ್ಟಿಯ ತಮಿಳಗಂ
- – ಲೋಕ ಜನಶಕ್ತಿ ಪಕ್ಷ
- – ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್