Site icon Vistara News

Lok Sabha Election 2024: ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಸಲು ಶಿವರಾಮ ಹೆಬ್ಬಾರ್ ಮನವಿ

Yallapura MLA Shivaram Hebbar voting in Arabail village

ಯಲ್ಲಾಪುರ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ್ ತಾಲೂಕಿನ ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಅರಬೈಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಇದನ್ನೂ ಓದಿ: Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

ಬಳಿಕ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿರುವುದು ಸಂತಸದ ಸಂಗತಿಯಾಗಿದೆ. ಜಾತಿ, ಧರ್ಮ, ಭಿನ್ನಾಭಿಪ್ರಾಯಗಳ ಹೊರತಾಗಿ ರಾಜ್ಯದ ಜನತೆ ಸಾಂಘಿಕವಾದ ಚುನಾವಣೆ ನಡೆಯಲು ನಿರ್ಣಯಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಮನವಿ ಮಾಡಬಯಸುವುದೇನೆಂದರೆ, 3 ತಿಂಗಳುಗಳ ಸುದೀರ್ಘ ನೀತಿ ಸಂಹಿತೆ ಜಾರಿಯು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. ಕರಾವಳಿ ಮಲೆನಾಡು ಪ್ರದೇಶದಲ್ಲಿ 5 ತಿಂಗಳುಗಳ ಕಾಲ ವ್ಯಾಪಕ ಮಳೆಯಾಗುವುದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಇಂದಿಗೆ ಚುನಾವಣೆ ಪೂರ್ಣಗೊಳ್ಳುವುದರಿಂದ, ಈ ಸಂದರ್ಭವನ್ನು ಪರಿಗಣಿಸಿ ನೀತಿ ಸಂಹಿತೆಯನ್ನು ಸಡಿಲಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡಬೇಕಿದೆ ಎಂದರು.

ಇದನ್ನೂ ಓದಿ: Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

ಈ ಸಂದರ್ಭದಲ್ಲಿ ಶಾಸಕರ ಪತ್ನಿ ವನಜಾಕ್ಷಿ ಹೆಬ್ಬಾರ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Exit mobile version