ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ (MLC Election) ಘೋಷಣೆಯಾಗಿದ್ದರಿಂದ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಪರಿಷತ್‌ನ ಆರು ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ರಣತಂತ್ರ ರೂಪಿಸುತ್ತಿದ್ದು, ಈ ನಡುವೆ ಜಯನಗರ 3ನೇ ಬ್ಲಾಕ್‌ನ ಹೋಟೆಲ್ ಪೈ ವೈಸ್ರಾಯ್‌ನಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತೆ ಸಭೆ ಶುಕ್ರವಾರ ನಡೆಯಿತು.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತೆ ಸಭೆ ನಡೆಯಿತು.
ಇದನ್ನೂ ಓದಿ | R Ashok: ಪೊಲೀಸ್ ಇಲಾಖೆ ಸತ್ತಿದೆಯೋ ಬದುಕಿದೆಯೋ ತಿಳಿಯುತ್ತಿಲ್ಲ: ಆರ್.ಅಶೋಕ್ ಆಕ್ರೋಶ
ಸಭೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ವಿಧಾನಪರಿಷತ್ ಸದಸ್ಯರಾದ ಕೆ. ಎ. ತಿಪ್ಪೇಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯರಾದ ಡಾ. ಟಿ. ಎ. ಶರವಣ, ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್, ಬೆಂಗಳೂರು ದಕ್ಷಿಣ ಶಾಸಕರಾದ ಎಂ.ಕೃಷ್ಣಪ್ಪ , ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ್, ವಿಧಾನ ಪರಿಷತ್ ಸದಸ್ಯರು ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಅ. ದೇವೇಗೌಡ ಉಪಸ್ಥಿತರಿದ್ದರು.
ಜೂನ್ 3ಕ್ಕೆ ಮತದಾನ
ರಾಜ್ಯದ ಮೂರು ಶಿಕ್ಷಕರ ಕ್ಷೇತ್ರಗಳಿಗೆ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ವಿಧಾನಪರಿಷತ್ ಚುನಾವಣೆ ನಡೆಯಲಿದ್ದು, ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ ವೇಳಾಪಟ್ಟಿ
- ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಮೇ 16, 2024
- ನಾಮಪತ್ರ ಪರಿಶೀಲನೆ: ಮೇ 17, 2024
- ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: ಮೇ 20, 2024
- ಮತದಾನ: ಜೂನ್ 03, 2024
- ಫಲಿತಾಂಶ: ಜೂನ್ 06, 2024
ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
- ಈಶಾನ್ಯ ಪದವೀಧರರ ಕ್ಷೇತ್ರ: ಅಮರ್ ನಾಥ್ ಪಾಟೀಲ್(ಬಿಜೆಪಿ)
- ನೈರುತ್ಯ ಪದವೀಧರರ ಕ್ಷೇತ್ರ: ಡಾ. ಧನಂಜಯ ಸರ್ಜಿ (ಬಿಜೆಪಿ)
- ಬೆಂಗಳೂರು ಪದವೀಧರರ ಕ್ಷೇತ್ರ: ಅ. ದೇವೇಗೌಡ (ಬಿಜೆಪಿ)
- ಆಗ್ನೇಯ ಶಿಕ್ಷಕರ ಕ್ಷೇತ್ರ: ವೈ.ಎ. ನಾರಾಯಣಸ್ವಾಮಿ (ಬಿಜೆಪಿ)
- ದಕ್ಷಿಣ ಶಿಕ್ಷಕರ ಕ್ಷೇತ್ರ: ವಿವೇಕಾನಂದ.ಕೆ (ಜೆಡಿಎಸ್)
- ನೈಋತ್ಯ ಶಿಕ್ಷಕರ ಕ್ಷೇತ್ರ: ಸಿ.ಎಲ್.ಭೋಜೇಗೌಡ (ಜೆಡಿಎಸ್)
ಅಖಾಡದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು
- ನೈಋತ್ಯ ಶಿಕ್ಷಕರ ಕ್ಷೇತ್ರ: ಕೆ.ಕೆ ಮಂಜುನಾಥ್
- ದಕ್ಷಿಣ ಶಿಕ್ಷಕರ ಕ್ಷೇತ್ರ: ಮರತಿಬ್ಬೇಗೌಡ
- ಆಗ್ನೇಯ ಶಿಕ್ಷಕರ ಕ್ಷೇತ್ರ: ಡಿ.ಟಿ.ಶ್ರೀನಿವಾಸ್
- ಈಶಾನ್ಯ ಪದವೀಧರ ಕ್ಷೇತ್ರ: ಡಾ.ಚಂದ್ರಶೇಖರ ಪಾಟೀಲ
- ನೈಋತ್ಯ ಪದವೀಧರ ಕ್ಷೇತ್ರ: ಆಯನೂರು ಮಂಜುನಾಥ್ಬೆಂ
- ಬೆಂಗಳೂರು ಪದವೀಧರ ಕ್ಷೇತ್ರ: ರಾಮೋಜಿ ಗೌಡ