Site icon Vistara News

Anubhav Mohanty: ನಟಿ ವರ್ಷಾ ಜತೆಗಿನ ʻನಿಷ್ಪ್ರಯೋಜಕʼ ದಾಂಪತ್ಯ ಅಂತ್ಯ ಎಂದ ಸಂಸದ ಮೊಹಂತಿ!

MP Anubhav Mohanty receives decree of divorce

ಒಲಿವುಡ್ (ಒಡಿಶಾ) (Ollywood actor) ನಟ ಮತ್ತು ಸಂಸದ ಅನುಭವ್ ಮೊಹಂತಿ ಅವರು ನಟಿ-ಪತ್ನಿ ವರ್ಷಾ ಪ್ರಿಯದರ್ಶಿನಿ (Varsha Priyadarshini) ಜತೆ 10 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇದೀಗ ಈ ಜೋಡಿ ಅಧಿಕೃತವಾಗಿ ವಿಚ್ಛೇದನ ಪಡೆದಿದೆ. ಮದುವೆಯಾಗಿ 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ಮೊಹಾಂತಿ ಅವರಿಗೆ ವಿಚ್ಛೇದನದ ತೀರ್ಪು ಸಿಕ್ಕಿದೆ. ಇದೀಗ ಟ್ವೀಟ್‌ನಲ್ಲಿ ತಮ್ಮ ದಾಂಪತ್ಯ ಜೀವನವನ್ನು ನಿಷ್ಪ್ರಯೋಜಕ, ಅರ್ಥಹೀನ, ಹೃದಯಹೀನ, ನೋವಿನ ಮತ್ತು ಸುಳ್ಳಿನಿಂದ ಕೂಡಿತ್ತು ಎಂದು ಬರೆದುಕೊಂಡಿದ್ದಾರೆ.

ಅನುಭವ್ ಮೊಹಂತಿ ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡು ʻ“ನನಗಾಗಿ ಮತ್ತು ನನ್ನ ಕುಟುಂಬದ ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ನಿಷ್ಪ್ರಯೋಜಕ, ಅರ್ಥಹೀನ, ಹೃದಯಹೀನ, ನೋವಿನ ಮತ್ತು ಸುಳ್ಳಿನಿಂದ ಕೂಡಿದ ಈ ದಾಂಪತ್ಯ ಜೀವನಕ್ಕೆ ಅಂತ್ಯ ಸಿಕ್ಕಿದೆ. ವಿಚ್ಛೇದನದ ತೀರ್ಪು ಸಿಕ್ಕಿತು. ನಾನು ಅವಳ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ. ಇದರಲ್ಲಿ ಯಾವುದೇ ಅಪರಾಧವಿಲ್ಲ. ಹ್ಯಾಪಿ ರೋಸ್ ಡೇʼʼ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ವರ್ಷಾ ಪ್ರಿಯದರ್ಶಿನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ದಂಪತಿ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿದ್ದ ಕಟಕ್ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಇದೀಗ ವಿಚ್ಛೇದನದ ತೀರ್ಪು ಸಿಕ್ಕಿದೆ ಎಂದು ಅನುಭವ್ ಮೊಹಂತಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Esha Deol: ನೀನಲ್ಲ, ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ; ನಟಿ ಇಶಾ ಡಿಯೋಲ್‌ ಡಿವೋರ್ಸ್

ಸಂಸದ ಅನುಭವ್ ಮೊಹಂತಿ ಎಕ್ಸ್‌

ನಟ-ರಾಜಕಾರಣಿ ಅನುಭವ್ ಮೊಹಂತಿ ಪತ್ನಿ ವರ್ಷಾ ಪ್ರಿಯದರ್ಶಿನಿಯಿಂದ ವಿಚ್ಛೇದನವನ್ನು ಕೋರಿ ಜುಲೈ 2020 ರಲ್ಲಿ ದೆಹಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮಾರ್ಚ್ 2021ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಪ್ರಕರಣವನ್ನು ಕಟಕ್‌ನ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಪ್ರಿಯದರ್ಶಿನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಆಗಸ್ಟ್ 2020ರಲ್ಲಿ ಪ್ರಿಯದರ್ಶಿನಿ ಅವರು ಕಟಕ್‌ನ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಮಹಿಳೆಯರ ರಕ್ಷಣೆ ಕಾಯ್ದೆ, 2005ರ ಅಡಿಯಲ್ಲಿ ಅವರು ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು. ಮನೆ ಬಾಡಿಗೆ ಮತ್ತು ನಿರ್ವಹಣೆಗಾಗಿ ಮಾಸಿಕ 70,000 ರೂ. ಮೊತ್ತವನ್ನು ನೀಡುವಂತೆ ಒತ್ತಾಯಿಸಿದ್ದರು.

ಸಂಸದ ಅನುಭವ್ ಮೊಹಂತಿ ಅವರು 2013ರಲ್ಲಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ಒಂದು ದಶಕದಿಂದಲೂ ಒಡಿಯಾ ಚಲನಚಿತ್ರಗಳಲ್ಲಿ ಪ್ರಸಿದ್ಧ ನಟರಾಗಿದ್ದರು. 2014ರಲ್ಲಿ ರಾಜ್ಯಸಭಾ ಸಂಸದರಾದರು. 2019ರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರಪಾರ ಲೋಕಸಭಾ ಕ್ಷೇತ್ರದಿಂದ ಬೈಜಯಂತ್ ಪಾಂಡಾ ವಿರುದ್ಧ ಗೆದ್ದಿದ್ದರು.

Exit mobile version