ಯೂಸುಫ್ ಪಠಾಣ್ (Yusuf Pathan), ಅಸಾದುದ್ದೀನ್ ಓವೈಸಿ (Asaduddin Owaisi) ಮತ್ತು ಇಕ್ರಾ ಚೌಧರಿ (Iqra Choudhary) ಸೇರಿದಂತೆ ಒಟ್ಟು 24 ಮುಸ್ಲಿಂ ಸಂಸದರು (Muslim MPs) ಈ ಬಾರಿ ಲೋಕಸಭಾ ಚುನಾವಣೆಯನ್ನು (Lok Sabha Election 2024) ಗೆದ್ದು ಸಂಸತ್ತಿಗೆ ಪ್ರವೇಶಿಸಿದ್ದಾರೆ. 2019ರಲ್ಲಿ ಚುನಾವಣೆಯಲ್ಲಿ ಒಟ್ಟು 115 ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಬಾರಿ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 78 ಮುಸ್ಲಿಮರು ಚುನಾವಣೆ ಕಣದಲ್ಲಿದ್ದರು.
ಮೊದಲ ಪ್ರಯತ್ನದಲ್ಲೇ ಯಶಸ್ಸು
ರಾಜಕೀಯ ಪ್ರವೇಶಿಸಿದ ಬಳಿಕ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದ ಕ್ರಿಕೆಟಿಗ- ರಾಜಕಾರಣಿ ಯೂಸುಫ್ ಪಠಾಣ್ ಅವರು ತೃಣಮೂಲ ಕಾಂಗ್ರೆಸ್ ನಲ್ಲಿ ಟಿಕೆಟ್ ಪಡೆದು ಪಶ್ಚಿಮ ಬಂಗಾಳದ ಬರ್ಹಾಂಪುರದಿಂದ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಅವರನ್ನು ಕೆಳಗಿಳಿಸಿದ್ದಾರೆ.
ಉತ್ತರ ಪ್ರದೇಶದ ಸಹರಾನ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಮ್ರಾನ್ ಮಸೂದ್ ಕೂಡ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.
ಕಿರಿಯ ಸಂಸದ
ಕೈರಾನಾದಲ್ಲಿ ಸಮಾಜವಾದಿ ಪಕ್ಷದ ಇಕ್ರಾ ಚೌಧರಿ ಕಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ. ಇವರು ಬಿಜೆಪಿಯ ಪ್ರದೀಪ್ ಕುಮಾರ್ ಅವರನ್ನು 69,116 ಮತಗಳಿಂದ ಸೋಲಿಸಿದರು.
ಅಸಾದುದ್ದೀನ್ ಓವೈಸಿ
ದಕ್ಷಿಣದಲ್ಲಿ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು 3,38,087 ಮತಗಳ ಅಂತರದಿಂದ ಭಾರತೀಯ ಜನತಾ ಪಕ್ಷದ ಫೈರ್‌ಬ್ರಾಂಡ್ ನಾಯಕಿ ಮಾಧವಿ ಲತಾ ಅವರನ್ನು ಸೋಲಿಸುವ ಮೂಲಕ ತಮ್ಮ ಹೈದರಾಬಾದ್ ಭದ್ರಕೋಟೆಯನ್ನು ಉಳಿಸಿಕೊಂಡರು. ಲಡಾಖ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ಹನೀಫಾ ಅವರು ಕಾಂಗ್ರೆಸ್‌ನ ಜಮ್ಯಾಂಗ್ ತ್ಸ್ರಿಂಗ್ ನಾಮ್ಗ್ಯಾಲ್ ಅವರನ್ನು ಸೋಲಿಸಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಮುಸ್ಲಿಂ ಸಂಸದರು
ಕಾಂಗ್ರೆಸ್‌ನಿಂದ ಧುಬ್ರಿಯಲ್ಲಿ ರಾಕಿಬುಲ್ ಹುಸೇನ್, ಕಿಶನ್‌ಗಂಜ್ ನಲ್ಲಿ ಮೊಹಮ್ಮದ್ ಜಾವೇದ್, ಕತಿಹಾರ್ ನಲ್ಲಿ ತಾರಿಕ್ ಅನ್ವರ್, ವಡಕರ(3)ರಲ್ಲಿ ಶಾಫಿ ಪರಂಬಿಲ್, ಸಹರಾನ್ಪುರ್(1)ರಲ್ಲಿ ಇಮ್ರಾನ್ ಮಸೂದ್, ಮಲ್ದಹಾ ದಕ್ಷಿಣ(8)ದಲ್ಲಿ ಇಶಾ ಖಾನ್ ಚೌಧರಿ, ಲಕ್ಷದ್ವೀಪ (1)ರಲ್ಲಿ ಮುಹಮ್ಮದ್ ಹಮದುಲ್ಲಾ ಸಯೀದ್
ಸಮಾಜವಾದಿ ಪಕ್ಷ
ಕೈರಾನಾ (2)ರಲ್ಲಿ ಇಕ್ರಾ ಚೌಧರಿ, ರಾಂಪುರ(7)ರಲ್ಲಿ ಮೊಹಿಬ್ಬುಲ್ಲಾ, ಸಂಭಾಲ್(8)ರಲ್ಲಿ ಜಿಯಾ ಉರ್ ರೆಹಮಾನ್, ಗಾಜಿಪುರ (75)ರಲ್ಲಿ ಅಫ್ಜಲ್ ಅನ್ಸಾರಿ
ಟಿಎಂಸಿ
ಜಂಗೀಪುರ (9) ಖಲೀಲೂರ್ ರಹಮಾನ್, ಬಹರಂಪುರ (10) ಪಠಾಣ್ ಯೂಸುಫ್, ಮುರ್ಷಿದಾಬಾದ್ (11) ಅಬು ತಾಹರ್ ಖಾನ್, ಬಸಿರ್ಹತ್ (18) ಎಸ್ಕೆ ನೂರುಲ್ ಇಸ್ಲಾಂ, ಉಲುಬೇರಿಯಾ (26) ಸಜ್ದಾ ಅಹಮದ್
ಐಯುಎಂಎಲ್
ಮಲಪ್ಪುರಂ (6) ಇ.ಟಿ. ಮೊಹಮ್ಮದ್ ಬಶೀರ್, ಪೊನ್ನಾನಿ (7) ಡಿ.ಆರ್. ಎಂಪಿ ಅಬ್ದುಸ್ಸಮದ್ ಸಮದಾನಿ, ರಾಮನಾಥಪುರ (35) ನವಸ್ಕನಿ ಕೆ
ಎಐಎಂಐಎಂ
ಹೈದರಾಬಾದ್ (9) ಅಸಾದುದ್ದೀನ್ ಓವೈಸಿ
ಇದನ್ನೂ ಓದಿ: Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!
ಇಂದ್
ಬಾರಾಮುಲ್ಲಾ(1)ಅಬ್ದುಲ್ ರಶೀದ್ ಶೇಖ್, ಲಡಾಖ್ (1) ಮೊಹಮ್ಮದ್ ಹನೀಫಾ
ಎನ್ ಸಿ
ಶ್ರೀನಗರ (2) ಅಗಾ ಸೈಯದ್ ರುಹುಲ್ಲಾ ಮೆಹದಿ, ಅನಂತನಾಗ್-ರಾಜೌರಿ(3) ಮಿಯಾನ್ ಅಲ್ತಾಫ್ ಅಹ್ಮದ್