Site icon Vistara News

Naseeruddin Shah: ಮೋದಿ ಮುಸ್ಲಿಮರ ಟೋಪಿ ಧರಿಸಬೇಕೆಂದ ನಾಸಿರುದ್ದೀನ್ ಶಾ! ನಿಮ್ಮ ಅಭಿಪ್ರಾಯವೇನು?

Naseeruddin Shah

ನವದೆಹಲಿ: ಲೋಕಸಭೆ ಚುನಾವಣೆ 2024ರ (loksabha election-2024) ಬಳಿಕ ಮೂರನೇ ಬಾರಿಗೆ ಅಧಿಕಾರಕ್ಕೆ ಏರಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಅವರು ಯಾವಾಗಲೂ ಟೋಪಿಯನ್ನು ಇಷ್ಟಪಡುತ್ತಾರೆ ಎಂದು ತೋರುತ್ತದೆ. ಆದರೆ ನಾನು ಅವರನ್ನು ಮುಸ್ಲಿಮರು ಹಾಕುವ ಟೋಪಿಯಲ್ಲಿ (skullcap) ನೋಡಲು ಇಷ್ಟಪಡುವುದಾಗಿ ನಟ (actor) ನಾಸಿರುದ್ದೀನ್ ಶಾ (Naseeruddin Shah) ಹೇಳಿದ್ದಾರೆ.

ಸಂವಾದವೊಂದರಲ್ಲಿ ಮಾತನಾಡಿದ ಅವರು, ಭಾರತೀಯ ಮುಸ್ಲಿಮರಿಗೆ ತೋರಿಸುವ ಸಲುವಾಗಿ ನಾನು ಪ್ರಧಾನಿ ಮೋದಿಯನ್ನು ಟೋಪಿಯಲ್ಲಿ ನೋಡಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ. ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮೋದಿ 3.0 ಕ್ಯಾಬಿನೆಟ್‌ನಲ್ಲಿ ಮುಸ್ಲಿಂ ಪ್ರಾತಿನಿಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾ, ಇದು ಖಿನ್ನತೆಯನ್ನುಂಟು ಮಾಡುತ್ತದೆ. ಆದರೆ ಆಶ್ಚರ್ಯವೇನಿಲ್ಲ. ಮುಸ್ಲಿಮರ ಮೇಲಿನ ದ್ವೇಷವನ್ನು ಇದು ತೋರುತ್ತದೆ ಎಂದರು.

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ದೇಶದಲ್ಲಿ ಮುಸ್ಲಿಮರಿಗೆ ಆತಂಕವಿದೆ ಎಂದು ಹೇಳಿದ್ದಾರೆ. ಇದು ನಾವು ಆತಂಕ ಪಡುವ ವಿಷಯ. ಇದು ಕೇವಲ ಹಿಂದೂಗಳು ಅಥವಾ ಮುಸ್ಲಿಮರು ಮಾತ್ರ ಮಾಡುವ ಕೆಲಸವಲ್ಲ. ಇದು ನಾವು ಒಟ್ಟಾಗಿ ಮಾಡಬೇಕಾದ ಕೆಲಸ ಎಂದು ಹೇಳಿದರು.

ಇದನ್ನೂ ಓದಿ: Tamilisai Soundararajan: ವೇದಿಕೆ ಮೇಲೆಯೇ ತಮಿಳ್‌ಸಾಯಿಗೆ ಅಮಿತ್‌ ಶಾ ಭರ್ಜರಿ ಕ್ಲಾಸ್;‌ ವಿಡಿಯೊ ನೋಡಿ

ಮೋದಿ ಅವರು ಒಂದು ದಿನ ಮುಸ್ಲಿಮರು ಧರಿಸುವ ಟೋಪಿಯಲ್ಲಿ ನೋಡಲು ನಾನು ಬಯಸುತ್ತೇನೆ. ಮುಸ್ಲಿಮರು ಧರಿಸುವ ಟೋಪಿ ಧರಿಸುವುದು ಒಂದು ಸೌಹಾರ್ದದ ಸೂಚಕವಾಗಿದೆ. ಒಂದು ಸಮಾರಂಭದಲ್ಲಿ ಅವರು ಮೌಲ್ವಿಯವರು ನೀಡಿದ ಈ ಟೋಪಿಯನ್ನು ಧರಿಸಲು ನಿರಾಕರಿಸಿದ್ದನ್ನು ಸ್ಮರಣೆಯಿಂದ ಅಳಿಸಿ ಹಾಕುವುದು ಕಷ್ಟ. ನಾನು ನಿಮ್ಮಿಂದ ಪ್ರತ್ಯೇಕವಾಗಿಲ್ಲ ಎಂದು ಅವರು ಮನವರಿಕೆ ಮಾಡಿದರೆ ಈ ದೇಶದ ಮುಸ್ಲಿಮರಿಗೆ ಇದು ಒಂದು ದೊಡ್ಡ ಸಹಾಯ ಎಂದು ನಾನು ಭಾವಿಸುತ್ತೇನೆ ಎಂದು ನಾಸಿರುದ್ದೀನ್ ಶಾ ಹೇಳಿದರು.


ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಅನಂತರ ಸತತ ಮೂರನೇ ಬಾರಿಗೆ ಗೆದ್ದ ಎರಡನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. 2024ರ ಜೂನ್ 5ರಂದು ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡುವ ನಿರ್ಣಯವನ್ನು ಎನ್‌ಡಿಎ ಸರ್ವಾನುಮತದಿಂದ ಅಂಗೀಕರಿಸಿತು. ನರೇಂದ್ರ ಮೋದಿ ಅವರು ಜೂನ್ 9ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Exit mobile version