Site icon Vistara News

Pawan Kalyan: ಪವನ್ ಕಲ್ಯಾಣ್ ಗಾಳಿಯಲ್ಲ ಬಿರುಗಾಳಿ ಎಂದ ಮೋದಿ! ಮೋದಿ ಇರುವವರೆಗೆ ದೇಶ ತಲೆಬಾಗುವುದಿಲ್ಲ ಎಂದ ಪವನ್‌!

Modi 3.0 Cabinet

ನವದೆಹಲಿ: ಸಂಸತ್ತಿನಲ್ಲಿ (Parliament) ಶುಕ್ರವಾರ (Pawan Kalyan) ನಡೆದ ಎನ್ ಡಿ ಎ (NDA) ಮೈತ್ರಿ ಕೂಟದ ಸಭೆಯಲ್ಲಿ ತೆಲುಗು ದೇಶಂ ಪಕ್ಷವು (TDP) ಎನ್ ಡಿ ಎ ಮೈತ್ರಿಕೂಟದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಇಲ್ಲಿ ಕುಳಿತಿರುವ ವ್ಯಕ್ತಿ ಗಾಳಿಯಲ್ಲ, ಬಿರುಗಾಳಿ ಎಂದು ತೆಲುಗು ನಟ (Telugu actor), ರಾಜಕಾರಣಿ ಪವನ್ ಕಲ್ಯಾಣ್ ( Pawan Kalyan) ಅವರ ಕುರಿತಾಗಿ ಹಾಸ್ಯ ಚಟಾಕಿ ಹಾರಿಸಿದರು.

ಪವನ್ ಕಲ್ಯಾಣ್ ಕುರಿತು ನರೇಂದ್ರ ಮೋದಿ ಮಾಡಿರುವ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ (social media) ಭಾರಿ ವೈರಲ್ (Viral Video) ಆಗಿದೆ. ನಟ ಪವನ್ ಕಲ್ಯಾಣ್ ಅವರ ಸಾಕಷ್ಟು ಅಭಿಮಾನಿಗಳು ಪ್ರಧಾನಿ ಅವರ ಈ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ, ಪವನ್ ಕಲ್ಯಾಣ್ ಅವರ ಸಿನಿಮಾಗಳ ‘ಮೊದಲ ದಿನದ ಮೊದಲ ಶೋ’ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾರೆ.


ಈ ನಡುವೆ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಮಾತನಾಡಿದರು.

ನರೇಂದ್ರ ಮೋದಿ ಅವರಿಗೆ ಪಕ್ಷದ ಪರವಾಗಿ ಧನ್ಯವಾದ ಅರ್ಪಿಸಿದ ಪವನ್ ಕಲ್ಯಾಣ್, ನರೇಂದ್ರ ಮೋದಿ ಅವರು 15 ವರ್ಷಗಳ ಕಾಲ ಪ್ರಧಾನಿಯಾಗಿರುತ್ತಾರೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದನ್ನು ನೆನಪಿಸಿಕೊಂಡರು. ಚಂದ್ರಬಾಬೂಜಿ ನಿಮ್ಮ ಭವಿಷ್ಯ ನಿಜವಾಯಿತು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.


ಅವರು ತಮ್ಮ ಮಾತು ಮುಂದುವರಿಸುತ್ತಾ, ಮೋದಜೀ ನೀವು ನಿಜವಾಗಿಯೂ ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದ್ದೀರಿ. ನೀವು ದೇಶದ ಪ್ರಧಾನಿಯಾಗಿರುವವರೆಗೆ ನಮ್ಮ ದೇಶವು ಯಾರಿಗೂ ಎಂದಿಗೂ ತಲೆಬಾಗುವುದಿಲ್ಲ. ನಿಮ್ಮ ನಾಯಕತ್ವದಲ್ಲಿ ಪ್ರಬಲವಾದ ಹಿಮಾಲಯವು ಎಂದಿಗೂ ತಲೆಬಾಗುವುದಿಲ್ಲ. ಭಾರತವು ಎಂದಿಗೂ ತಲೆಬಾಗುವುದಿಲ್ಲ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಾಮಾಕ್ಯದಿಂದ ದ್ವಾರಕಾದವರೆಗೆ ನಿಮ್ಮ ನಾಯಕತ್ವದಲ್ಲಿ ಕೆಲಸ ಮಾಡಲು ನಾವು ನಿಜವಾಗಿಯೂ ಹೆಮ್ಮೆಪಡುತ್ತೇವೆ ಎಂದರು.

ಇದನ್ನೂ ಓದಿ: Narendra Modi: ಪ್ರಮಾಣವಚನಕ್ಕೂ ಮೊದಲು ಅಡ್ವಾಣಿಯ ಆಶೀರ್ವಾದ ಪಡೆದ ನರೇಂದ್ರ ಮೋದಿ!

ನಿಮ್ಮ ಹಿಂದೆ ನಾವೆಲ್ಲರೂ ಸೇರುತ್ತೇವೆ. ದೇಶ ಸೇವೆ ಮಾಡಲು ನೀವು ನಮ್ಮನ್ನು ಪ್ರೇರೇಪಿಸಿದ ರೀತಿ ಮತ್ತು ನಿಮ್ಮ ನಡೆ- ನುಡಿ, ನೀವು ನಮಗೆ ತೋರಿದ ಅಭಿವೃದ್ಧಿಯ ರೀತಿಯಿಂದ ದೇಶಪ್ರೇಮ ನಮ್ಮಲ್ಲಿ ಮೂಡಿದೆ ಎಂದು ಹೇಳಿದರು.

ನಿಮ್ಮ ಮಾರ್ಗದರ್ಶನ ಮತ್ತು ಬೆಂಬಲದ ಅಡಿಯಲ್ಲಿಈ ಗೆಲುವು ಸಾಧ್ಯವಾಯಿತು. ವಿಧಾನಪರಿಷತ್ ಚುನಾವಣೆಯಲ್ಲಿ ಶೇ.91ರಷ್ಟು ಯಶಸ್ಸು ಸಾಧಿಸಿದ್ದೇವೆ, ನಾವೆಲ್ಲರೂ ನಿಮಗೆ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಅನೇಕ ಬಿಜೆಪಿ ಸಂಸದರು ಉಪಸ್ಥಿತರಿದ್ದರು.

Exit mobile version