Site icon Vistara News

Ashwini Puneeth Rajkumar: ಅಶ್ವಿನಿ ಪುನೀತ್ ಬಗ್ಗೆ ಕೀಳು ಮಟ್ಟದ ಪೋಸ್ಟ್; ಅಪ್ಪು ಅಭಿಮಾನಿಗಳಿಂದ ಗೃಹ ಸಚಿವರಿಗೆ ದೂರು

Ashwini Puneeth Rajkumar Appu fans complain to Home Minister

ತುಮಕೂರು: ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ (Ashwini Puneeth Rajkumar)  ಬಗ್ಗೆ ಕೀಳು ಮಟ್ಟದ ಪೋಸ್ಟ್ (Post) ಮಾಡಿದವರ ವಿರುದ್ಧ ಕ್ರಮ ಹೆಚ್ಚಾಗುತ್ತಲೇ ಇದೆ. ಸಿನಿಮಾ ರಂಗದ ಅನೇಕರು ಪೋಸ್ಟ್ ವಿರುದ್ಧ ಧ್ವನಿ ಎತ್ತಿದ್ದಾರೆ. ಈಗ ಅಪ್ಪು ಫ್ಯಾನ್ಸ್ ಗೃಹ ಸಚಿವರನ್ನು ಭೇಟಿ ಮಾಡಿ, ಕ್ರಮಕ್ಕಾಗಿ ಒತ್ತಾಯ ಮಾಡಿದ್ದಾರೆ. ಸಚಿವ ಪರಮೇಶ್ವರ್ (parameshwara) ಅವರು ಕಾನೂನು ಕ್ರಮ ತೆಗೆದುಕೊಳ್ಳಲು ಇವತ್ತೇ ಸೂಚನೆ ಕೊಡುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅಭಿಮಾನಿ ಬಳಗ ತುಮಕೂರು ತಾಲೂಕು ಹಾಗೂ ಜಿಲ್ಲಾ ಘಟಕ ಜಿ.ಪರಮೇಶ್ವರ್ ಅವರಿಗೆ ದೂರು ನೀಡಲಾಗಿದೆ. ದೂರಿನ ಸಾರಾಂಶ ಹೀಗಿದೆ: ʻʻಪುನೀತ್ ರಾಜ್‌ಕುಮಾರ್ ಅವರು ಕನ್ನಡ ನಾಡಿಗೆ ಸಲ್ಲಿಸಿರುವ ಸೇವೆ ಎಂದಿಗೂ ಅಪಾರ ಹಾಗೂ ಚಿರಸ್ಮರಣೀಯ. ಅವರ ಜನಪ್ರಿಯತೆ ಎಂದಿಗೂ ಇಂದಿಗೂ ಅಜರಾಮರ. ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅವರು ಕನ್ನಡ ನಾಡಿಗೆ ಮುಕುಟಮಣಿಯಂತೆ ಇದ್ದುದು ಕನ್ನಡ ನಾಡಿನ ಸಮಸ್ತ ಅಭಿಮಾನಿಗಳಿಗೆ ತಿಳಿದಿರುವ ವಿಷಯ. ಇಂತಹ ಮನೆಯಿಂದ ಬಂದಂತಹ ಕರ್ನಾಟಕ ಪುನೀತ್ ರಾಜ್‌ಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್‌ರಾಜ್‌ ಕುಮಾರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ʻಗಜಪಡೆʼ, ʻಪೊರ್ಕಿʼ, ʻದಾಸʼ, ʻಕಿಂಗ್ ಡಿಬಾಸ್‌ʼ ಹಾಗೂ ಇನ್ನೂ ಮುಂತಾದ ಅನೇಕ ಹೆಸರುಗಳಲ್ಲಿ ಅವರನ್ನು ತೇಜೋವಧೆ ಮಾಡಲಾಗಿದೆ. ಇದರಿಂದ ರಾಜಕುಮಾರ್, ಪುನೀತ್ ರಾಜಕುಮಾ‌ರ್‌ ಅವರ ಅಭಿಮಾನಿಗಳ ಮನಸ್ಸಿಗೆ ಭರಿಸಲಾಗದ ನೋವನ್ನು ಉಂಟುಮಾಡಲಾಗಿದೆ. ಆದ್ದರಿಂದ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ʻಗಜಪಡೆʼ, ʻಪೊರ್ಕಿʼ, ʻದಾಸʼ, ʻಕಿಂಗ್ ಡಿಬಾಸ್ʼ ಹಾಗೂ ಇನ್ನೂ ಮುಂತಾದ ಅನೇಕ ಹೆಸರುಗಳಲ್ಲಿ ಪೇಜ್‌ಗಳಿರುವವರು, ತೇಜೋವಧೆ ಮಾಡಿರುವವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಮುಂತಾದ ಅನೇಕ ಹೆಸರುಗಳಲ್ಲಿ ಪೇಜ್‌ಗಳಿದ್ದು ಅವರ ವಿರುದ್ಧವೂ ಕೂಡ ತುರ್ತಾಗಿ ಕಠಿಣ ಕ್ರಮ ಜರುಗಿಸಲು ಆದೇಶ ನೀಡಬೇಕಾಗಿ ತಮ್ಮಲ್ಲಿ ವಿನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತೇವೆʼʼ ಎಂದು ಮನವಿ ಮಾಡಲಾಗಿದೆ.

ಇದನ್ನೂ ಓದಿ: Ashwini Puneeth Rajkumar: ಪುನೀತನ ಮಡದಿ ಅನಾಥಳಲ್ಲ ಎಂದು ಜಗ್ಗೇಶ್‌ ಆಕ್ರೋಶ!

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪರಮೇಶ್ವರ್ ಅವರು ಮನವಿ ಸ್ವೀಕರಿಸಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಪರಮೇಶ್ವರ್‌ ಅವರು ಮಾತನಾಡಿ ʻʻಆದಷ್ಟು ಶೀಘ್ರವಾಗಿ ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲು ಇವತ್ತೆ ಸೂಚನೆ ಕೊಡುತ್ತೇನೆ. ಯಾವ ಕಿಡಿಗೇಡಿಗಳನ್ನು ಕಾನೂನು ಚೌಕಟ್ಟಿಗೆ ತರದೇ ಬಿಡಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ.

ಏನಿದು ಘಟನೆ?

ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್​ಸಿಬಿ ಸೋಲುತ್ತಿದೆ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಕೀಳು ಮಟ್ಟದ ಟ್ವೀಟ್ ಮಾಡಿತ್ತು. ಆರ್​ಸಿಬಿ ಸೋಲುವುದಕ್ಕೂ, ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೂ ಏನು ಸಂಬಂಧ? ಎಂದು ಅಪ್ಪು ಫ್ಯಾನ್ಸ್‌ ಆಕ್ರೋಶ ಹೊರಹಾಕಿ, ಈಗಾಗಲೇ ಅಪ್ಪು ಫ್ಯಾನ್ಸ್‌ ಕಾನೂನು ಕ್ರಮ ಮುಂದಾಗಿದ್ದರು.

Exit mobile version