Site icon Vistara News

Rahul Gandhi: ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಗೆ ಇರುವ ಅಧಿಕಾರ ಏನೇನು?

Rahul Gandhi

ಇಂಡಿಯಾ ಮೈತ್ರಿ ಕೂಟವು (India alliance) ಎನ್‌ಡಿಎ (NDA) ಸರ್ಕಾರದ ವಿರುದ್ಧ ಕಾಂಗ್ರೆಸ್ (congress) ನಾಯಕ ರಾಹುಲ್ ಗಾಂಧಿ (rahul gandhi) ಅವರನ್ನು ಲೋಕಸಭೆಯ (loksabha) ವಿರೋಧ ಪಕ್ಷದ ನಾಯಕರನ್ನಾಗಿ (Leader of the Opposition) ನೇಮಿಸಿದೆ. ವಿರೋಧ ಪಕ್ಷದ ನಾಯಕನಿಗೆ ಸಂಸತ್ತಿನಲ್ಲಿ ಕೆಲವು ಅಧಿಕಾರಗಳಿವೆ. ಹತ್ತು ವರ್ಷಗಳ ಬಳಿಕ ಕಾಂಗ್ರೆಸ್ ಈ ಬಾರಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆದಿದೆ.

2014 ಮತ್ತು 2019ರಲ್ಲಿ ಲೋಕಸಭೆಯಲ್ಲಿ ಶೇ.10ಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್‌ನ ಇದೀಗ ಹತ್ತು ವರ್ಷಗಳ ಬಳಿಕ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ವಿರೋಧ ಪಕ್ಷಕ್ಕೆ ಕನಿಷ್ಠ 55 ಸ್ಥಾನಗಳ ಅಗತ್ಯವಿದೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 99 ಸ್ಥಾನಗಳನ್ನು ಗಳಿಸಿತು.

ವಿರೋಧ ಪಕ್ಷದ ನಾಯಕ ಸಾಂವಿಧಾನಿಕ ಹುದ್ದೆಯಲ್ಲದಿದ್ದರೂ, ಪ್ರಮುಖ ನೇಮಕಾತಿಗಳನ್ನು ಒಳಗೊಂಡಿರುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೆಲವು ಅಧಿಕಾರಗಳನ್ನು ಹೊಂದಿದೆ. ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಈ ಅಧಿಕಾರ ಚಲಾಯಿಸುವ ಅವಕಾಶ ಸಿಕ್ಕಿದೆ.

ವಿರೋಧ ಪಕ್ಷದ ನಾಯಕನಿಗೆ ಯಾವ ಅಧಿಕಾರವಿದೆ?

ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ನಿರ್ಣಾಯಕ ಸಂಸದೀಯ ಸಮಿತಿಗಳ ಸದಸ್ಯರಾಗಿರಲಿದ್ದಾರೆ. ಅವರು ಹಲವಾರು ಜಂಟಿ ಸಂಸದೀಯ ಸಮಿತಿಗಳು, ಸಾರ್ವಜನಿಕ ಖಾತೆಗಳ ಸಮಿತಿಗಳು, ಸಾರ್ವಜನಿಕ ಉದ್ಯಮ ಸೇರಿದಂತೆ ಹಲವು ಸಮಿತಿಗಳ ಸದಸ್ಯರಾಗಿರುತ್ತಾರೆ. ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸುವ ವಿಚಾರದಲ್ಲಿಯೂ ಅವರ ಮಾತಿಗೆ ಪ್ರಾಮುಖ್ಯತೆ ಇರುತ್ತದೆ.

ಇದಲ್ಲದೆ ಶಾಸನಬದ್ಧ ಸಂಸ್ಥೆಗಳಾದ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್, ಸೆಂಟ್ರಲ್ ಇನ್ಫಾರ್ಮೇಶನ್ ಕಮಿಷನ್, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್, ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ ಆಫ್ ಇಂಡಿಯಾ, ಲೋಕಪಾಲ್ ಮತ್ತು ಹೆಚ್ಚಿನವುಗಳ ಮುಖ್ಯಸ್ಥರನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿರುವ ಕೆಲವು ಸಮಿತಿಗಳ ಸದಸ್ಯರಾಗಿಯೂ ಸಹ ರಾಹುಲ್ ಗಾಂಧಿ ಅರ್ಹರಾಗಿದ್ದಾರೆ.

ಗಾಂಧಿ ಕುಟುಂಬದ ಮೂರನೇ ಸದಸ್ಯ

ರಾಹುಲ್ ಗಾಂಧಿ ಅವರು ಗಾಂಧಿ ಕುಟುಂಬದ ಮೂರನೇ ಸದಸ್ಯರಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಿಗಿಂತ ಮೊದಲು ಅವರ ಅವರ ತಾಯಿ ಸೋನಿಯಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಈ ಅಧಿಕಾರ ನಿಭಾಯಿಸಿದ್ದರು. ರಾಜೀವ್ ಗಾಂಧಿ ಅವರು 1989- 1990ರವರೆಗೆ ಈ ಹುದ್ದೆಯಲ್ಲಿದ್ದರೆ, ಸೋನಿಯಾ 1999ರಿಂದ 2004ರವರೆಗೆ ಈ ಅಧಿಕಾರ ವಹಿಸಿಕೊಂಡಿದ್ದರು.

ಉತ್ತರ ಪ್ರದೇಶದ ರಾಯ್ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿಯವರು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಹೆಚ್ಚುವರಿ ಸಂಬಳ ಮತ್ತು ಭತ್ಯೆ ಪಡೆಯಲಿದ್ದಾರೆ.

ಇದನ್ನೂ ಓದಿ: Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ


Exit mobile version