Site icon Vistara News

Raksha Khadse: ಅಂದು ಪಂಚಾಯಿತಿ ಸದಸ್ಯೆ, ಇಂದು ಕೇಂದ್ರ ಸಚಿವೆ! ಯಾರು ಈ ರಕ್ಷಾ ಖಡ್ಸೆ?

Raksha Khadse

ಪ್ರಧಾನಿ (PM) ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ರಚನೆಯಾದ 3.0 ಸರಕಾರದ ಸಚಿವಾಲಯದಲ್ಲಿ (3.0 cabinet Ministry) ಈಗ ಎಲ್ಲರ ಗಮನ ಸೆಳೆದಿರುವುದು ಬಿಜೆಪಿ (BJP) ಯುವ ಸಂಸದೆ (MP) ರಕ್ಷಾ ಖಡ್ಸೆ (Raksha Khadse). ಮಹಾರಾಷ್ಟ್ರದ (maharastra) ರೇವರ್ (Raver) ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಬಿಜೆಪಿಯ ರಕ್ಷಾ ಖಡ್ಸೆ , 2024ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 3 ಲಕ್ಷ ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ಶರದ್ ಪವಾರ್ ಬಣದ ಎನ್‌ಸಿಪಿ ನಾಯಕ ಹಾಗೂ ತಳಮಟ್ಟದಲ್ಲಿ ಜನ ಸಂಪರ್ಕಕ್ಕೆ ಹೆಸರುವಾಸಿಯಾದ ಏಕ್‌ನಾಥ್‌ ಖಡ್ಸೆ ಅವರ ಸೊಸೆಯಾಗಿರುವ ರಕ್ಷಾ ಅವರ ಕಠಿಣ ಪರಿಶ್ರಮ ಮತ್ತು ನಿರಂತರ ವಿಜಯಿಯಾಗಿರುವುದಕ್ಕೆ ಕೊಡುಗೆಯಾಗಿ ಅವರನ್ನು ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಚಿವಾಲಯದಲ್ಲಿ ಸೇರ್ಪಡೆಗೊಳಿಸಲಾಗಿದೆ.

ಎನ್‌ಡಿಎ ಜೊತೆ ವಿವಿಧ ಪಕ್ಷಗಳ ಮೈತ್ರಿ ಬಳಿಕ ಹೊಸ ರಾಜಕೀಯ ಬೆಳವಣಿಗೆಗಳ ನಿರೀಕ್ಷೆಯ ಮಧ್ಯೆ ಮಹಾರಾಷ್ಟ್ರದ ಹಲವಾರು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರೂ ರಕ್ಷಾ ಖಡ್ಸೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಮಹಾರಾಷ್ಟ್ರದ ರೇವರ್‌ನಲ್ಲಿ ಎರಡು ಬಾರಿ ಬಿಜೆಪಿ ಸಂಸದರಾಗಿದ್ದ ಅವರು ಈ ಬಾರಿಯ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ರಕ್ಷಾ ಖಡ್ಸೆ ತಮ್ಮ ಹ್ಯಾಟ್ರಿಕ್ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಚಿವಾಲಯಕ್ಕೆ ಸೇರಿದ್ದಾರೆ.


ರಾಜಕೀಯ ಪ್ರವೇಶ

2013ರಲ್ಲಿ ಪತಿ ನಿಖಿಲ್ ಖಡ್ಸೆ ನಿಧನದ ಬಳಿಕ ರಕ್ಷಾ ಖಡ್ಸೆ ಅವರು ತಮ್ಮ ವೈಯಕ್ತಿಕ ವರ್ಚಸ್ಸಿನ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಇಬ್ಬರು ಸಣ್ಣ ಮಕ್ಕಳೊಂದಿಗೆ ರಾಜಕೀಯ ಜವಾಬ್ದಾರಿ ಹೊತ್ತ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಇದು ಅವರ ವೈಯಕ್ತಿಕ ಜೀವನ ಮತ್ತು ರಾಜಕೀಯ ಜವಾಬ್ದಾರಿಗಳೊಂದಿಗೆ ಸಮತೋಲನಗೊಳಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿತ್ತು.

ರಕ್ಷಾ ಖಡ್ಸೆ ಮಧ್ಯಪ್ರದೇಶದ ಖೇಟಿಯಾದಲ್ಲಿ ಜನಿಸಿದರು. ಅವರ ರಾಜಕೀಯ ಜೀವನವು ತಳಮಟ್ಟದಲ್ಲಿ ಪ್ರಾರಂಭವಾಯಿತು. ಕೊಥಡಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅವರು ಬಳಿಕ ಜಲ್ಗಾಂವ್ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು.

ಯಶಸ್ಸಿನ ಪಯಣ

ಸ್ಥಳೀಯ ರಾಜಕಾರಣದಲ್ಲಿ ಅವರ ಆರಂಭಿಕ ಯಶಸ್ಸು 2014ರ ಲೋಕಸಭಾ ಚುನಾವಣೆಯಲ್ಲಿ ಸಂಸತ್ ಸದಸ್ಯರಾಗಿ (ಸಂಸದ) ಚುನಾವಣೆಗೆ ನಿಲ್ಲಲು ಪ್ರೇರಣೆಯಾಯಿತು. ಎನ್‌ಸಿಪಿಯ ಮನೀಶ್ ಜೈನ್‌ ಅವರನ್ನು 3,18,608 ಮತಗಳ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದರು. 16ನೇ ಲೋಕಸಭೆಯ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾದ ಅವರಿಗೆ ಆಗ 26 ವರ್ಷ.

2019ರ ಲೋಕಸಭಾ ಚುನಾವಣೆಯಲ್ಲಿ ಖಡ್ಸೆ ಎರಡನೇ ಬಾರಿಗೆ ರೇವರ್ ಲೋಕಸಭೆಯ ಸಂಸದರಾಗಿ ಮತ್ತೆ ಆಯ್ಕೆಯಾದರು. ಆಗ ಅವರು ಕಾಂಗ್ರೆಸ್‌ನ ಉಲ್ಹಾಸ್ ಪಾಟೀಲ್ ಅವರನ್ನು 3,35,882 ಮತಗಳಿಂದ ಸೋಲಿಸಿದರು.

2024ರ ಲೋಕಸಭಾ ಚುನಾವಣೆಯಲ್ಲಿ, ಅವರು ತಮ್ಮ ರೇವರ್ ಸ್ಥಾನವನ್ನು ಉಳಿಸಿಕೊಂಡರು. ಹತ್ತಿರದ ಎನ್‌ಸಿಪಿ ಶರಾದ್ ಪವಾರ್ ಬಣದ ಅಭ್ಯರ್ಥಿಯನ್ನು 2,72,183 ಮತಗಳ ಅಂತರದಿಂದ ಸೋಲಿಸಿದರು.

ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್‌, ದೇವೇಗೌಡ ಅವರ ಆಶೀರ್ವಾದ ಪಡೆದ ಮೋದಿ

ಆಸಕ್ತಿ, ಉದ್ದೇಶ

ರಕ್ಷಾ ಅವರ ಎಕ್ಸ್ ಪ್ರೊಫೈಲ್ ಪ್ರಕಾರ ಅವರಿಗೆ ಮಹಿಳಾ ಸಬಲೀಕರಣ, ಮಕ್ಕಳ ಶಿಕ್ಷಣ ಮತ್ತು ರೈತರ ಕಲ್ಯಾಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಖಡ್ಸೆ ಅವರ ರಾಜಕೀಯ ಆದ್ಯತೆಗಳು ಜಲ್ಗಾಂವ್ ಪ್ರದೇಶದಲ್ಲಿನ ನೀರಿನ ಕೊರತೆಯನ್ನು ಪರಿಹರಿಸುವುದು ಮತ್ತು ರಸ್ತೆ ಸಂಪರ್ಕವನ್ನು ಸುಧಾರಿಸುವುದು. ಮೂಲಸೌಕರ್ಯ ಮತ್ತು ಶಿಕ್ಷಣಕ್ಕೆ ಅವಶ್ಯಕವೆಂದು ಅವರು ನಂಬಿಕೆ. ರೇವರ್‌ನಲ್ಲಿ ನೀರಾವರಿ ಸ್ಥಾವರಕ್ಕೆ ಧನಸಹಾಯವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version