ಬೆಂಗಳೂರು: ಆಗಿಂದಾಗ್ಗೆ ಬಿಜೆಪಿ ನಾಯಕರ ವಿರುದ್ಧ ಟೀಕೆಗಳ ಸುರಿಮಳೆ ಮಾಡುವ ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆಯು ಇದೀಗ ವ್ಯಾಲೆಂಟೈನ್ಸ್ ದಿನವನ್ನು ಆಧಾರವಾಗಿಸಿಕೊಂಡು ಬಿಜೆಪಿಯ 12 ನಾಯಕರ ಕಾಲೆಳೆದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಆರಂಭಿಸಿ ಎಲ್ಲ ಬಗ್ಗೆಯೂ ವಿಶೇಷ ಕಾರ್ಟೂನ್ ಬರೆಸಿರುವ ಕಾಂಗ್ರೆಸ್, ಭ್ರಷ್ಟಾಚಾರ, ಪ್ರಚೋದನಾತ್ಮಕ ಭಾಷಣಗಳ ಕುರಿತು ಟೀಕಿಸಿದೆ.