ನವದೆಹಲಿ: ಲೋಕಸಭೆಯಲ್ಲಿ (lok sabha) ವಿಪಕ್ಷ ನಾಯಕ, ಕಾಂಗ್ರೆಸ್ (congress) ಸಂಸದ (MP) ರಾಹುಲ್ ಗಾಂಧಿ (rahul gandhi) ಅವರು ನೀಡಿರುವ ‘ಹಿಂಸಾತ್ಮಕ ಹಿಂದೂ’ ಹೇಳಿಕೆಗೆ (Violent Hindu Remark) ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತೀಯ ಜನತಾ ಪಕ್ಷ (BJP) ಮಾಜಿ ವಕ್ತಾರೆ ನುಪುರ್ ಶರ್ಮಾ (Nupur Sharma) ಅವರು, ಹಿಂದೂಗಳು ಹಿಂಸಾತ್ಮಕವಾಗಿದ್ದರೆ ಹಿಂದೂ ಸನಾತನಿ ಮಗಳಾದ ನಾನು ನನ್ನದೇ ದೇಶದಲ್ಲಿ ಸ್ವಾತಂತ್ರ್ಯ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಗಾಜಿಯಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಧರ್ಮಕ್ಕಾಗಿ ತುಂಬಾ ಏನೂ ಮಾಡುತ್ತಿಲ್ಲ. ಈ ಧರ್ಮ ನನ್ನದು ಮಾತ್ರ ಅಲ್ಲ. ಇದು ಎಲ್ಲರಿಗೂ ಸೇರಿದೆ. ನಾನು ಈ ಧರ್ಮದ ಒಬ್ಬ ರಕ್ಷಕನಾಗಿದ್ದೇನೆ ಎಂಬುದು ಸಹ ಉದ್ದೇಶವಲ್ಲ. ಆದರೆ ಹಿಂದೂ ಸನಾತನಿಗಳಿಗೆ ವಿಶ್ವದಲ್ಲಿ ಬೇರೆ ಯಾವುದೇ ರಾಷ್ಟ್ರವಿಲ್ಲ ಎಂದರು.
ಉನ್ನತ ಸ್ಥಾನಗಳಲ್ಲಿರುವ ಜನರು ಹಿಂದೂಗಳು ಹಿಂಸಾತ್ಮಕರು, ಹಿಂದೂಗಳಾದ ಸನಾತನಿಗಳನ್ನು ಅಳಿಸಿ ಹಾಕಬೇಕು ಎಂದು ಹೇಳುವಾಗ ನಾನು ಎರಡು ವಿಷಯಗಳನ್ನು ಹೇಳಬಯಸುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ನಾನು ನೋಡಿರುವುದು ಸನಾತನವನ್ನು ಮುಗಿಸುವ ಪ್ರಯತ್ನ. ವಾಟ್ಸಾಪ್ ಅಥವಾ ಫೇಸ್‌ಬುಕ್‌ನಲ್ಲಿ ಏನೇನೋ ಬರೆಯಲಾಗುತ್ತಿದೆ. ಸನಾತನಿಗಳ ವಿರುದ್ಧದ ಪಿತೂರಿಯನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: OPS News: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಅರ್ಹರಿಗೆ ಒಪಿಎಸ್, ಪ್ರಸ್ತಾವನೆ ಸಲ್ಲಿಕೆಗೆ ಆದೇಶ
ಇಲ್ಲಿ ಭಗವದ್ ಕಥೆಯನ್ನು ಕೇಳಲು ಬಂದಿದ್ದೀರಿ. ಈ ಪರಿಸರದಲ್ಲಿ ನಾನು ಏನನ್ನೂ ಹೇಳುವುದಿಲ್ಲ. ಆದರೆ ನಾವು ಒಟ್ಟಿಗೆ ಸೇರಿಕೊಳ್ಳಬೇಕು, ಒಂದಾಗಬೇಕು ಎಂದು ಮಾತ್ರ ಹೇಳುತ್ತೇನೆ. ನಾನು ಉಸಿರಾಡುವವರೆಗೂ ನಾನು ಮಗಳು ಅಥವಾ ಮಗ ಅಥವಾ ನಿಮ್ಮ ಮನೆಯವರಂತೆ ನನ್ನನ್ನು ನೋಡಲು ನೀವು ಬಯಸುತ್ತೀರಿ. ಅದಕ್ಕಾಗಿ ನಾನು ನಿಮ್ಮ ಪರವಾಗಿ ನಿಲ್ಲುತ್ತೇನೆ. ನಾನು ನನ್ನ ಧ್ವನಿಯನ್ನು ಎತ್ತುತ್ತೇನೆ ಎಂದರು.
ರಾಹುಲ್ ಗಾಂಧಿ ಏನು ಹೇಳಿದ್ದರು?
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ತಮ್ಮ “ಹಿಂಸಾತ್ಮಕ ಹಿಂದೂ” ಹೇಳಿಕೆಯೊಂದಿಗೆ ವಿವಾದವನ್ನು ಹುಟ್ಟುಹಾಕಿದರು. ಇದಕ್ಕೆ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ವ್ಯಕ್ತಪಡಿಸಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕವಾಗಿ ಕರೆಯುವುದು ಬಹಳ ಗಂಭೀರವಾದ ವಿಷಯ ಎಂದು ತಿರುಗೇಟು ನೀಡಿದ್ದರು.