ನ್ಯೂಯಾರ್ಕ್: ವಿಜ್ಞಾನಿಗಳು 800 ಕೋಟಿ ವರ್ಷಗಳಷ್ಟು ಹಳೆಯದಾದ ವೇಗದ ರೇಡಿಯೊ ಅಲೆಗಳನ್ನು ಬರ್ಸ್ಟ್ (Fast Radio Burst) ಅನ್ನು ಕಂಡುಹಿಡಿದಿದ್ದಾರೆ. ಇವು ಇಲ್ಲಿಯವರೆಗೆ ಕಂಡುಬಂದುದರಲ್ಲಿ ಅತ್ಯಂತ ಪ್ರಾಚೀನ ಮತ್ತು ದೂರದ ರೇಡಿಯೋ (Radio waves) ಅಲೆಗಳಾಗಿವೆ.
ಸೈನ್ಸ್ ಪತ್ರಿಕೆಯಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ. ಸ್ಪೆಕ್ಟ್ರೋಸ್ಕೋಪಿಯಲ್ಲಿ ಪರಿಣಿತರಾದ ಯುಸಿ ಸಾಂಟಾಕ್ರೂಜ್ ಪ್ರೊಫೆಸರ್ ಜೆ. ಕ್ಸೇವಿಯರ್ ಪ್ರೊಚಾಸ್ಕಾ, ಮ್ಯಾಕ್ವಾರಿ ವಿಶ್ವವಿದ್ಯಾಲಯದ ಸ್ಟುವರ್ಟ್ ರೈಡರ್ ಮತ್ತು ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಅಸೋಸಿಯೇಟ್ ಪ್ರೊಫೆಸರ್ ರಿಯಾನ್ ಶಾನನ್ ಅವರನ್ನು ಒಳಗೊಂಡ ಜಾಗತಿಕ ವಿಜ್ಞಾನಿಗಳ ತಂಡ ತಮ್ಮ ಸಂಶೋಧನೆಯ ಕುರಿತು ವರದಿ ಮಾಡಿದೆ. ಈ FRB ಇದೇ ತಂಡದ ಹಿಂದಿನ ರೇಡಿಯೋ ಅಲೆ ಅನ್ವೇಷಣೆಯ ದಾಖಲೆಯನ್ನು ಮೀರಿಸಿದೆ.
ರೇಡಿಯೋ ಅಲೆಗಳ ಸ್ಫೋಟದ ಮೂಲವು ವಿಶ್ವದಲ್ಲಿರುವ ಎರಡು ಅಥವಾ ಮೂರು ಗೆಲ್ಯಾಕ್ಸಿಗಳ ಗುಂಪು ಆಗಿರಬಹುದು. ಈ ಗುಂಪು ವಿಲೀನಗೊಳ್ಳುತ್ತಿದೆ. ವೇಗದ ರೇಡಿಯೊ ಸ್ಫೋಟಗಳ ಕುರಿತ ಪ್ರಸ್ತುತ ಸಿದ್ಧಾಂತಗಳನ್ನು ಈ ಅನ್ವೇಷಣೆ ಬೆಂಬಲಿಸಿದೆ. ಪ್ರಸ್ತುತ ಇರುವ ದೂರದರ್ಶಕಗಳ ಸಾಮರ್ಥ್ಯವು ಎಂಟು ಶತಕೋಟಿ ವರ್ಷ ಹಿಂದಿನ ವೇಗದ ರೇಡಿಯೊ ಸ್ಫೋಟಗಳನ್ನು ಗುರುತಿಸುವಷ್ಟು ಇದೆ ಎಂದು ತಂಡವು ತೋರಿಸಿದೆ.
SKA ವೀಕ್ಷಣಾಲಯ ಎಂಬುದು ವಿಶ್ವದ ಎರಡು ದೊಡ್ಡ ರೇಡಿಯೊ ದೂರದರ್ಶಕಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿರುವ ಸಂಸ್ಥೆಗಳ ಅಂತಾರಾಷ್ಟ್ರೀಯ ಗುಂಪು ಆಗಿದ್ದು, ಇದಕ್ಕೆ FRBಗಳು ಪ್ರಮುಖ ವೈಜ್ಞಾನಿಕ ಆಸಕ್ತಿಯಾಗಿದೆ.
ರೇಡಿಯೋ ಅಲೆಗಳು ನಮ್ಮ ಮತ್ತು ಗ್ಯಾಲಾಕ್ಸಿಗಳ ನಡುವಿನ ಪ್ರಕ್ಷುಬ್ಧ ಅಯಸ್ಕಾಂತೀಯ ಇಂಟರ್ಸ್ಟೆಲಾರ್ ಮತ್ತು ಇಂಟರ್ ಗ್ಯಾಲಕ್ಟಿಕ್ ಮಾಧ್ಯಮವನ್ನು ಅಳೆಯಲು ನಮಗೆ ಪ್ರಮುಖ ಮಾಹಿತಿಯನ್ನು ನೀಡುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆತಿಥೇಯ ನಕ್ಷತ್ರಪುಂಜದ ದೂರವನ್ನು ಗುರುತಿಸಲು ಮತ್ತು ಅಲ್ಲಿನ ಪರಿಸರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದು ನಮಗೆ ಅನುವು ಮಾಡಿಕೊಡುತ್ತದೆ. ರೇಡಿಯೋ ಮತ್ತು ಆಪ್ಟಿಕಲ್ ಡೇಟಾವನ್ನು ಹೋಲಿಸುವುದರಿಂದ ಗ್ಯಾಲಾಕ್ಸಿಗಳ ಕಾಸ್ಮಾಲಾಜಿಕಲ್ ಮಾದರಿಗಳನ್ನು ಪರೀಕ್ಷಿಸಲು, ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Research News: ಬರಲಿವೆ ಇನ್ನು ಮಳೆಯಿಂದ ವಿದ್ಯುತ್ ಉತ್ಪಾದಿಸುವ ಫಲಕಗಳು!