ಬೆಂಗಳೂರು: ಬಿಗ್ಬಾಸ್ ಒಟಿಟಿ ಕನ್ನಡ (Bigg Boss Kannada) ರಿಯಾಲಿಟಿ ಶೋ ಶನಿವಾರ ಆರಂಭವಾಗುತ್ತಿದ್ದು, ಒಬ್ಬೊಬ್ಬರೇ ಸ್ಪರ್ಧಿಗಳ ಹೆಸರು ಅನಾವರಣವಾಗುತ್ತಿದೆ. ಈಗ ಮೂರನೇ ಸ್ಪರ್ಧಿಯಾಗಿ ನಟ, ನಿರ್ದೇಶಕ ಮತ್ತು ಖಾಸಗಿ ಎಫ್ಎಂ ವಾಹಿನಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಹಾಗೂ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಆಯ್ಕೆಯಾಗಿದ್ದಾರೆ.
ಕರಾವಳಿ ಸೂಪರ್ ಸ್ಟಾರ್ ಎಂದೇ ಬಿರುದು ಪಡೆದ ರೂಪೇಶ್ ಶೆಟ್ಟಿ, ಕೋಸ್ಟಲ್ವುಡ್ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಹೆಸರು ಪಡೆದವರು. ಇದೀಗ ಇವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಕನ್ನಡದಲ್ಲಿ ನಿಶಬ್ಧ-2, ಡೇಂಜರ್ ಜೋನ್, ಪಿಶಾಚಿ-2 ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ | Mafia | ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಸಿನಿಮಾಗೆ ಎಂಟ್ರಿ
ಮೂಲತಃ ಕಾಸರಗೋಡಿನವರಾದ ರೂಪೇಶ್ ಮಂಗಳೂರಿನವರು. ಮಂಗಳೂರಿನ ನಮ್ಮ ಟಿವಿ ಎಂಬ ಚಾನೆಲ್ನಿಂದ ನಿರೂಪಕರಾಗಿದ್ದರು. ಬಳಿಕ ತುಳು ಚಿತ್ರರಂಗಕ್ಕೆ ಪ್ರವೇಶ ಕೊಟ್ಟಿದ್ದರು. 2015ರಲ್ಲಿ ಡೇಂಜರ್ ಜೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಹೆಸರು ಪಡೆದರು. ನಂತರ ಐಸ್ಕ್ರೀಮ್, ಪಿಶಾಚಿ-2, ನಿಶ್ಯಬ್ಧ ಮತ್ತು ಸ್ಮೈಲ್ ಎಂಬ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. 2018ರಲ್ಲಿ ನಾಯಕನಾಗಿ ನಟಿಸಿದ ತುಳುವಿನ ಅಮ್ಮೆರ್ ಪೊಲೀಸ್ ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಪಡೆಯಿತು. 2019ರಲ್ಲಿ ನಿರ್ದೇಶನಕ್ಕೆ ಇಳಿದು ಗಿರ್ಗಿಟ್ ತುಳು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಇತ್ತೀಚೆಗಷ್ಟೇ ಗೋವಿಂದ ಗೋವಿಂದ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದೀಗ ಕನಸುಗಳನ್ನು ಹೊತ್ತು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಬಾರಿ ಬಿಗ್ಬಾಸ್ ಸ್ಪರ್ಧಿಗಳ ಆಯ್ಕೆ ಸಿನಿಮಾ ಕ್ಷೇತ್ರ, ಪತ್ರಿಕೋದ್ಯಮ, ಕ್ರೀಡೆ, ಜ್ಯೋತಿಷ್ಯ ಸೇರಿದಂತೆ ಹಲವು ವಿಭಾಗದಿಂದ ಜನಪ್ರಿಯತೆ ಪಡೆದವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಬಿಗ್ಬಾಸ್ ಮನೆ ಶೃಂಗಾರಗೊಂಡಿದ್ದು, ಸ್ಪರ್ಧಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ ಎನ್ನಲಾಗುತ್ತಿತ್ತು.
ಇದನ್ನೂ ಓದಿ | Bigg Boss Kannada | ಕೆಲವೇ ಕ್ಷಣಗಳಲ್ಲಿ ಬಿಗ್ ಬಾಸ್ ಒಟಿಟಿ ಶುರು: ಇಲ್ಲಿದೆ ಟಾಪ್ 10 ಸ್ಪರ್ಧಿಗಳ ಮಾಹಿತಿ!