Site icon Vistara News

Kaun Banega Crorepati 15: 7 ಕೋಟಿ ರೂ. ಪ್ರಶ್ನೆಗೆ ಉತ್ತರಿಸದ ಜಸ್‌ಕರಣ್‌ ಸಿಂಗ್;‌ ನೀವು ಉತ್ತರಿಸಬಲ್ಲಿರಾ?

Kaun Banega Crorepati 15

Kaun Banega Crorepati 15: Here’s the question that Jaskaran Singh attempted for Rs 7 crore

ಮುಂಬೈ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಖ್ಯಾತ ಕೌನ್‌ ಬನೇಗಾ ಕರೋಡ್‌ಪತಿ (Kaun Banega Crorepati 15) ಶೋನಲ್ಲಿ ಪಂಜಾಬ್‌ನ ಜಸ್‌ಕರಣ್‌ ಸಿಂಗ್‌ ಅವರು ಒಂದು ಕೋಟಿ ರೂ. ಗೆಲ್ಲುವ ಮೂಲಕ 15ನೇ ಸೀಸನ್‌ನಲ್ಲಿ ಕೋಟಿ ರೂ. ಗೆದ್ದ ಮೊದಲ ಆಟಗಾರ ಎನಿಸಿದ್ದಾರೆ. ಆದರೆ, ಅವರು 7 ಕೋಟಿ ರೂ. ಮೌಲ್ಯದ ಪ್ರಶ್ನೆಗೆ ಉತ್ತರಿಸಲಾಗದೆ, ಕ್ವಿಟ್‌ ಆದ ಕಾರಣ ಅವರು ಒಂದು ಕೋಟಿ ರೂ.ಗೆ ತೃಪ್ತಿಪಡಬೇಕಾಯಿತು.

ಪ್ರಶ್ನೆ ಹೀಗಿದೆ

“ಪದ್ಮಪುರಾಣದ ಪ್ರಕಾರ, ಈ ಕೆಳಗಿನ ಯಾವ ರಾಜನು ಜಿಂಕೆಯ ಶಾಪದಿಂದಾಗಿ 100 ವರ್ಷ ಹುಲಿಯಾಗಿ ಬದುಕಿದ” ಎಂಬುದು 7 ಕೋಟಿ ರೂ.ಗೆ ಕೇಳಿದ ಪ್ರಶ್ನೆಯಾಗಿತ್ತು. ಕ್ಷೇಮಧೃತಿ, ಧರ್ಮದತ್ತ, ಮಿತಧ್ವಜ ಹಾಗೂ ಪ್ರಭಂಜನ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಆದರೆ, ಈ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿರದ ಕಾರಣ ಜಸ್‌ಕರಣ್‌ ಸಿಂಗ್‌ ಅವರು ಆಟವನ್ನು ಕ್ವಿಟ್‌ ಮಾಡಬೇಕಾಯಿತು. ಅಂದಹಾಗೆ ಇದಕ್ಕೆ ಸರಿಯಾದ ಉತ್ತರ ಪ್ರಭಂಜನ.

ರಾಜಸ್ಥಾನದ ಖಾಲ್ರಾ ನಿವಾಸಿಯಾದ, ಕೇವಲ 21 ವರ್ಷದ, ಯುಪಿಎಸ್‌ಸಿಗೆ ಸಿದ್ಧತೆ ನಡೆಸಿರುವ ಜಸ್‌ಕರಣ್‌ ಸಿಂಗ್‌ ಅವರು ಒಂದು ಕೋಟಿ ರೂ. ಗೆಲ್ಲುವ ಮೂಲಕ ಈ ಸೀಸನ್‌ನ ಮೊದಲ ಕೋಟ್ಯಧೀಶರೆನಿಸಿದ್ದಾರೆ. ಏಳು ಕೋಟಿ ರೂಪಾಯಿ ಪ್ರಶ್ನೆಯ ಕೌನ್‌ ಬನೇಗಾ ಕರೋಡ್‌ಪತಿ ಶೋ ಸೆಪ್ಟೆಂಬರ್‌ 4 ಹಾಗೂ ಸೆಪ್ಟೆಂಬರ್‌ 5ರಂದು ಪ್ರಸಾರವಾಗಿದೆ.

ಇದನ್ನೂ ಓದಿ: Amitabh Bachchan: ಭಾರತ್ ಮಾತಾ ಕಿ ಜೈ ಎಂದು ಅಮಿತಾಭ್ ಬಚ್ಚನ್ ಪೋಸ್ಟ್ ಮಾಡಿದ್ದೇಕೆ?

ಕೌನ್‌ ಬನೇಗಾ ಕರೋಡ್‌ಪತಿ ಶೋ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. 15 ಸೀಸನ್‌ಗಳನ್ನೂ ಅಮಿತಾಭ್‌ ಬಚ್ಚನ್‌ ಅವರೇ ನಡೆಸುಕೊಂಡು ಬರುತ್ತಿದ್ದು, ಭಾರತ ಮಾತ್ರವಲ್ಲ ವಿದೇಶದಲ್ಲೂ ಶೋ ಖ್ಯಾತಿ ಗಳಿಸಿದೆ. ಬಡವರು, ಪ್ರತಿಭಾವಂತರು, ಸೆಲೆಬ್ರಿಟಿಗಳು ಕೂಡ ಶೋನಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲೂ ಇದೇ ಮಾದರಿಯ ಶೋ, “ಕನ್ನಡದ ಕೋಟ್ಯಧಿಪತಿ” ಹಲವು ಸಿಸನ್‌ಗಳಲ್ಲಿ ಪ್ರಸಾರವಾಗಿದೆ.

Exit mobile version