Site icon Vistara News

Buddies : ಕಿರುತೆರೆ ನಟ ಕಿರಣ್‌ರಾಜ್ ಈಗ ಸ್ಯಾಂಡಲ್‌ವುಡ್‌ಗೆ

Buddies

ಬೆಂಗಳೂರು : ಸಾಕಷ್ಟು ರೀಲ್ಸ್‌ ಮತ್ತು ಕೆಲವೊಂದು ಗಾಸಿಪ್‌ ಮೂಲಕ ಮನೆಮಾತಾದ ನಟ ಕಿರಣ್‌ ರಾಜ್‌ ಇದೀಗ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಬರುವ ಕನ್ನಡತಿ ಧಾರವಾಹಿ ಯಾರಿಗೆ ಪರಿಚಯವಿಲ್ಲ ಹೇಳಿ? ಹರ್ಷ ಪಾತ್ರದ ಮೂಲಕ ಎಲ್ಲರ ಮನೆ ಮಾತಾದ ಈ ಹುಡುಗ ಈಗ ಸಿನಿಮಾ ಮಾಡಲು ಹೊರಟಿದ್ದಾರೆ.

ಕಿರಣ್‌ ರಾಜ್‌ ಈಗ ಸಿನಿಮಾ ಬಗ್ಗೆ ಹಂಚಿಕೊಂಡಿದ್ದು, ಅವರ ಅಭಿನಯದ ʼಬಡ್ಡೀಸ್‌ʼ ಸಿನಿಮಾ ಜೂನ್‌ 24ರಂದು ಬಿಡುಗಡೆಗೊಳ್ಳುತ್ತಿದೆ. ಅವರ ತಂದೆ ತಾಯಿ ಮತ್ತು ಕುಟುಂಬ ಖಾಸಗಿ ಹೋಟೆಲ್‌ನಲ್ಲಿ ʼಬಡ್ಡೀಸ್‌ʼ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದ್ದಾರೆ.

ಗುರುತೇಜ ಶೆಟ್ಟಿ ನಿರ್ದೇಶಕರಾಗಿದ್ದು, ದುಬೈ ನಿವಾಸಿ ಭಾರತಿ ಶೆಟ್ಟಿ ನಿರ್ಮಾಪಕರಾಗಿದ್ದಾರೆ. ಇದು ಸ್ನೇಹ ಸಾರುವ ಚಿತ್ರವಾಗಿದ್ದು, ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯುವ ಕಥೆ ಆಗಿದೆ. ನಾಯಕ ಮತ್ತು ಮೂವರು ಸ್ನೇಹಿತರ ನಡುವೆ ನಡೆಯುವ ಕಥಾ ಹಂದರ.

ನಟ ಗೋಪಾಲ್ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಒಂದೇ ಟೇಕ್‌ನಲ್ಲಿ ಈ ಚಿತ್ರದ ಹಾಡೊಂದರ ನೃತ್ಯ ನಿರ್ದೇಶನ ಮಾಡಿರುವುದಾಗಿ ನೃತ್ಯ ನಿರ್ದೇಶಕ ಧನಂಜಯ್ ತಿಳಿಸಿದರು. ಜ್ಯೂಡಿ ಸ್ಯಾಂಡಿ ‘ಬಡ್ಡೀಸ್’ ( Buddies Movie ) ಹಾಡುಗಳಿಗೆ ಸಂಗೀತ ನೀಡಿದ್ದು, ಅಮೆರಿಕ ನಿವಾಸಿ ನಿಭಾ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್‌

Exit mobile version