Site icon Vistara News

Bigg Boss Kannada | ಬಿಗ್ ಬಾಸ್ ಆಕಾಂಕ್ಷಿಗಳು ಮೋಸ ಹೋಗಬೇಡಿ! ಕಲರ್ಸ್‌ ವಾಹಿನಿಯಿಂದ ಸೂಚನೆ

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಕಾರ್ಯಕ್ರಮ (Bigg Boss Kannada) ಈ ಬಾರಿ ಮಿನಿ ಬಿಗ್ ಬಾಸ್‌ ಮೂಲಕ ಮನೆಗೆ ಬರುತ್ತಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರ ಆಗುವ ಮೊದಲೇ ವೂಟ್‌ ಸೆಲೆಕ್ಟ್‌ನಲ್ಲಿ ಬಿಗ್‌ ಬಾಸ್‌ ಮಿನಿ ಸೀಸನ್‌ ಪ್ರಸಾರವಾಗಲಿದೆ. ಈ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದ್ದು ಮಿನಿ ಸೀಸನ್‌ ಮುಗಿದ ಮೇಲೆ ಬಿಗ್ ಬಾಸ್ ಸೀಸನ್ 9 ಶುರುವಾಗಲಿದೆ.

ಆದರೆ ಪ್ರತಿ ಬಾರಿ ಕನ್ನಡದಲ್ಲಿ ಬಿಗ್ ಬಾಸ್ ಶೋ ಶುರುವಾಗುವ ಹೊತ್ತಿನಲ್ಲಿ ಕೆಲವರು ನಕಲಿ ಆಡಿಷನ್ ಮಾಡಿ ಸಾರ್ವಜನಿಕರಿಂದ ದುಡ್ಡು ವಸೂಲಿ ಮಾಡುವುದು ಸಹಜವಾಗಿದೆ. ಹೀಗಾಗಿ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಆಕಾಂಕ್ಷಿಗಳ ಗಮನಕ್ಕೆ ತರಲು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | ʻಬಿಗ್‌ ಬಾಸ್‌ʼ ಖ್ಯಾತಿಯ ದಿವ್ಯಾ ಉರುಡುಗ ಮತ್ತೆ ಸಿನಿಮಾ ಲೋಕಕ್ಕೆ  

ಬಿಗ್‌ಬಾಸ್‌ ಆಕಾಂಕ್ಷಿಗಳ ಗಮನಕ್ಕೆ ಏನಿದೆ?

ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್‌ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್‌ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಷನ್‌ ನಡೆಸಲಾಗುತ್ತಿಲ್ಲ. ಬಿಗ್‌ ಬಾಸ್‌ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ಕೊಡಿ.

ಪ್ರವೇಶ ಶುಲ್ಕ, ಠೇವಣಿ, ತರಬೇತಿ ಇಂತಹ ಯಾವುದೇ ಹೆಸರಿನಲ್ಲಿಯೂ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ. ಬಿಗ್‌ ಬಾಸ್‌ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್‌ ಕನ್ನಡ ವಾಹಿನಿ ಅಥವಾ ವೂಟ್‌ನ ಅಧಿಕೃತ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳನ್ನು ಮಾತ್ರ ಪರಿಗಣಿಸಿ ಎಂದು ಹೇಳಿದೆ.

ಇದನ್ನೂ ಓದಿ | ʼಬಿಗ್‌ ಬಾಸ್‌ʼ ಖ್ಯಾತಿಯ ದಿವ್ಯಾ ಉರುಡುಗ ಮತ್ತೆ ಸಿನಿಮಾ ಲೋಕಕ್ಕೆ  

Exit mobile version