ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಗೌಡ ಅವರು ಬಿಗ್ ಬಾಸ್ ಮನೆಯಿಂದ (BBK SEASON 10) ಹೊರಗೆ ಹೋಗಿದ್ದಾರೆ. ದೊಡ್ಮನೆಯಿಂದ ಹೊರಡುವ ವೇಳೆ ಭಾವುಕರಾಗಿ ಸ್ನೇಹಿತ್ ಕಣ್ಣೀರು ಹಾಕಿದ್ದು, ಈ ವೇಳೆ ಅವರನ್ನು ನೋಡಿ ಅವರ ಸ್ನೇಹಿತೆ ನಮ್ರತಾ ಗೌಡ ಕೂಡ ಕಣ್ಣೀರಿಟ್ಟಿದ್ದಾರೆ.
ನಮ್ರತಾ ಜತೆ ಹೆಚ್ಚು ಕ್ಲೋಸ್ ಆಗಿದ್ದ ಸ್ನೇಹಿತ್, ವಿನಯ್, ಮೈಕಲ್ ಜತೆಗೂ ಆತ್ಮೀಯರಾಗಿದ್ದರು. ಅವರು ಹೊರಡುವ ವೇಳೆ ನಮ್ರತಾ ಕಣ್ಣೀರು ಹಾಕಿದ್ದು, ಅವರನ್ನು ಸ್ನೇಹಿತ್ ಸಮಾಧಾನ ಮಾಡಿದರು. ಹೊರಡುವಾಗ ವಿನಯ್ಗೆ ಗೆದ್ದು ಬನ್ನಿ ಬ್ರೋ ಎಂದು ಹೇಳುತ್ತಾ ಭಾವುಕರಾಗಿ ಸ್ನೇಹಿತ್ ಮನೆಯಿಂದ ಆಚೆ ಹೋದರು.
2 ಬಾರಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ವೇದಿಕೆಯಲ್ಲಿ ಮಾತನಾಡಿ, ನನಗೆ ಇದು ಒಳ್ಳೆಯ ಅನುಭವ ಎಂದು ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಇದಕ್ಕೂ ಮುನ್ನಾ ನಮ್ರತಾ ನೀವು ನಿಮಗಾಗಿ ಮಾತ್ರವಲ್ಲ ಇನ್ಮುಂದೆ ನನಗಾಗಿ ಕೂಡ ಆಡಲೇಬೇಕು ಎಂದು ಸ್ನೇಹಿತ್ ಹೇಳಿದರು. ಅವರ ಪ್ರೀತಿಯ ಮಾತು ಕೇಳಿ ನಮ್ರತಾ ಭಾವುಕರಾದರು.
ಆರಂಭದಿಂದಲೂ ಸ್ನೇಹಿತ್ ಅವರು ಒಂದು ಗುಂಪಿನಲ್ಲಿ ಒಬ್ಬರಾಗಿದ್ದರು. ಹೆಚ್ಚಾಗಿ ವಿನಯ್ ಗೌಡ ಮತ್ತು ನಮ್ರತಾ ಟೀಮ್ ಜತೆಗೆ ಇದ್ದ ಅವರು, ತಮ್ಮ ವೈಯಕ್ತಿಕ ಆಟವನ್ನು ಪ್ರದರ್ಶಿಸುವಲ್ಲಿ ಎಡವಿದರು. ಎಲ್ಲದಕ್ಕಿಂತ ಹೆಚ್ಚಾಗಿ ಕಳೆದ ವಾರ ಅವರು ಕ್ಯಾಪ್ಟನ್ ಆಗಿದ್ದಾಗ ಮಾಡಿದ ಪಕ್ಷಪಾತ ಎಲ್ಲರ ಗಮನಕ್ಕೆ ಬಂತು. ಬಹುತೇಕ ಕಡೆ ಅವರು ವಿನಯ್ & ನಮ್ರತಾ ಇರುವ ಟೀಮ್‌ಗೆ ಸಹಾಯವಾಗುವಂತೆ ಮಾಡಿದರು.
ಇದನ್ನೂ ಓದಿ | BBK SEASON 10: ವಿನಯ್ ನನ್ನ ಗಂಡನ ದವಡೆ ಮುರಿದಿದ್ದ; ಕಿರುತೆರೆ ನಟಿಯ ಆರೋಪ!
ನಮ್ರತಾ ಜತೆ ಸುತ್ತಾಡಿದ್ದು ಬಿಟ್ಟರೆ ಸ್ನೇಹಿತ್ ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಎಡವಿದ್ದರು. ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಡ್ರೋನ್ ಪ್ರತಾಪ್, ಸಂಗೀತಾ ಕಣ್ಣಿಗೆ ಆದ ಪೆಟ್ಟಿಗೆ ಪರೋಕ್ಷವಾಗಿ ಸ್ನೇಹಿತ್ ಕಾರಣರಾದರು. ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿದ್ರೂ, ಮಾತನಾಡುವ ಗೋಜಿಗೆ ಸ್ನೇಹಿತ್ ಹೋಗಲಿಲ್ಲ. ಹೀಗಾಗಿ ಪ್ರೇಕ್ಷಕರು ಕೂಡ ಅಸಮಾಧಾನ ಹೊರಹಾಕಿದ್ದರು. ಇವು ಸ್ನೇಹಿತ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಲು ಕಾರಣವಾಗಿದೆ. ಸದ್ಯ ಸ್ನೇಹಿತ್ ಎಲಿಮಿನೇಷನ್‌ನಿಂದ ವಿನಯ್ ಮತ್ತು ಟೀಂಗೆ ಆಘಾತವಾಗಿದೆ.