ಹ್ಯಾಂಗ್ಝೌ: ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ (Asian Games 2023) ಪುರುಷರ ಮತ್ತು ಮಹಿಳೆಯರ 20 ಕಿ.ಮೀ ಓಟದ ನಡಿಗೆಯಲ್ಲಿ ವಿಕಾಸ್ ಸಿಂಗ್ ಮತ್ತು ಪ್ರಿಯಾಂಕಾ ಕ್ರಮವಾಗಿ 5 ಮತ್ತು 6 ನೇ ಸ್ಥಾನದಲ್ಲಿದ್ದಾರೆ. ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ತಡಿಗೋಲ್ ಅವರನ್ನೊಳಗೊಂಡ ಭಾರತೀಯ ಶೂಟಿಂಗ್ ತಂಡ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದೆ. ಈ ಮೂಲಕ ಭಾರತ ಆರನೇ ದಿನದ ಸ್ಪರ್ಧೆಯಲ್ಲಿ ಶುಭಾರಂಭ ಮಾಡಿದೆ.
10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತ 1731-50 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದು ಎರಡನೇ ಸ್ಥಾನ ಪಡೆಯಿತು. ಚೀನಾ 1736-66x ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. ಭಾರತೀಯ ತಂಡದಲ್ಲಿ ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ಸುಬ್ಬರಾಜು ತಡಿಗೋಳ್ ಇದ್ದರು. ಅಲ್ಲದೆ, ಅರ್ಹತಾ ಸುತ್ತಿನಲ್ಲಿ ಇಶಾ ಐದನೇ ಸ್ಥಾನ ಪಡೆದರೆ, ಪಾಲಕ್ ಏಳನೇ ಸ್ಥಾನ ಪಡೆದರು. ಈ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಫೈನಲ್ಗೆ ಅರ್ಹತೆ ಪಡೆದಿದೆ. ಇದು ಭಾರತದ ಪಾಲಿಗೆ ದಿನದ ಮೊದಲ ಪದಕ ಎನಿಸಿಕೊಂಡಿತು.
ಪುರುಷರ ತಂಡಕ್ಕೆ ಚಿನ್ನ
ಶುಕ್ರವಾರ ಪುರುಷರ 50 ಮೀಟರ್ ರೈಫಲ್ 3ಪಿ ತಂಡ ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದಿದೆ. ತಂಡದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಸುರೇಶ್ ಕುಸಲೆ ಮತ್ತು ಅಖಿಲ್ ಶಿಯೋರನ್ ಇದ್ದರು. ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ ಒಟ್ಟು 591-33x ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಐಶ್ವರ್ಯಾ 591-27x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅಖಿಲ್ 587-30x ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು. ಮೂವರೂ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ! ಈ ಮೂವರು ಶೂಟರ್ಗಳು ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: Asian Games 2023 : ಶೂಟಿಂಗ್ನಲ್ಲಿ ವಿಶ್ವ ದಾಖಲೆ ಬರೆದು ಚಿನ್ನದ ಪದಕ ಗೆದ್ದ ಪುರುಷರ ತಂಡ
ಸಾಕೇತ್ ಮೈನೇನಿ ಮತ್ತು ರಾಮ್ ಕುಮಾರ್ ರಾಮನಾಥನ್ ಪ್ರಸ್ತುತ ಪುರುಷರ ಡಬಲ್ಸ್ ಚಿನ್ನದ ಪದಕಕ್ಕಾಗಿ ಹೋರಾಡುತ್ತಿದ್ದಾರೆ. ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಸೆಮಿಫೈನಲ್ ಪಂದ್ಯವನ್ನು ಗೆದ್ದು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
2018 ರ ಏಷ್ಯನ್ ಕ್ರೀಡಾಕೂಟದಲ್ಲಿ, ಅಥ್ಲೆಟಿಕ್ಸ್ ವಿಭಾಗ ಭಾರತದ ಒಟ್ಟು 70 ಪದಕಗಳಲ್ಲಿ 20 ಪದಕಗಳನ್ನು (8 ಚಿನ್ನ, 9 ಬೆಳ್ಳಿ, 3 ಕಂಚು) ಕೊಡುಗೆ ನೀಡಿತ್ತು. ರಚನಾ ಕುಮಾರಿ ಮತ್ತು ತಾನ್ಯಾ ಚೌಧರಿ ಶುಕ್ರವಾರ ನಡೆಯಲಿರುವ ಮಹಿಳಾ ಹ್ಯಾಮರ್ ಥ್ರೋ ಫೈನಲ್ನಲ್ಲಿ ಕಾಣಿಸಿಕೊಳ್ಳಲಿದ್ದು, ಮನ್ಪ್ರೀತ್ ಕೌರ್ ಮತ್ತು ಕಿರಣ್ ಬಲಿಯಾನ್ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳ ನಿರೀಕ್ಷೆಯಲ್ಲಿದ್ದಾರೆ. ಏಳು ದಿನಗಳ ಸ್ಪರ್ಧೆಯಲ್ಲಿ ಒಟ್ಟು 48 ಚಿನ್ನದ ಪದಕಗಳು ಇರಲಿವೆ. ಆತಿಥೇಯ ಚೀನಾ 1986 ರಿಂದ ಪ್ರತಿ ಏಷ್ಯನ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಭಾರತದ ಫಲಿತಾಂಶಗಳು
ಅಥ್ಲೆಟಿಕ್ಸ್: ಪುರುಷರ 20 ಕಿ.ಮೀ ಓಟದ ನಡಿಗೆಯಲ್ಲಿ ವಿಕಾಸ್ ಸಿಂಗ್ ಐದನೇ ಸ್ಥಾನ ಪಡೆದರು
ಮಹಿಳೆಯರ 20 ಕಿ.ಮೀ ಓಟದ ನಡಿಗೆಯಲ್ಲಿ ಪ್ರಿಯಾಂಕಾಗೆ 5ನೇ ಸ್ಥಾನ
ಶೂಟಿಂಗ್: 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ಗೆ ಇಶಾ ಸಿಂಗ್ ಮತ್ತು ಪಾಲಕ್ ಕ್ರಮವಾಗಿ 5 ಮತ್ತು 7 ನೇ ಸ್ಥಾನ ಪಡೆದರು
ಪುರುಷರ 50 ಮೀಟರ್ ರೈಫಲ್ 3ಪಿ ವಿಭಾಗದಲ್ಲಿ ಭಾರತಕ್ಕೆ ಚಿನ್ನ
ಪುರುಷರ 50 ಮೀಟರ್ ಏರ್ ರೈಫಲ್ 3ಪಿ ಫೈನಲ್ಗೆ ಐಶ್ವರಿ ಪ್ರತಾಪ್ ಸಿಂಗ್ ತೋಮರ್ (2ನೇ ಸ್ಥಾನ), ಸ್ವಪ್ನಿಲ್ ಸುರೇಶ್ ಕುಸಾಲೆ (1ನೇ ಸ್ಥಾನ), ಅಖಿಲ್ ಶಿಯೋರನ್ (5ನೇ ಸ್ಥಾನ) ಅರ್ಹತೆ ಪಡೆದರು