1. ಲೋಕಸಭೆ ದಾಳಿಯ ಹಿಂದಿತ್ತು 18 ತಿಂಗಳ ತಯಾರಿ! ಸಂಚು ರೂಪುಗೊಂಡಿದ್ದು ಹೇಗೆ?
ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ನಡೆದ ಅಭೂತಪೂರ್ವ ಭದ್ರತಾ ಲೋಪ (Security Breach in Lok Sabha) ಘಟನೆಯ ಹಿಂದೆ ಆರೋಪಿಗಳು ಕನಿಷ್ಠ 18 ತಿಂಗಳುಗಳ ನಿಖರವಾದ ಯೋಜನೆ ಹಾಗೂ ಸಂಚು ರೂಪಿಸಿದ್ದರು. ಹಲವಾರು ಮೀಟಿಂಗ್ ನಡೆಸಿದ್ದರು ಎಂದು ಗೊತ್ತಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Security Breach in Lok Sabha: ಸಂಸತ್ತಿಗೆ ಭೇಟಿ ನೀಡಿ ಭದ್ರತಾ ಲೋಪ ಪತ್ತೆ ಹಚ್ಚಿದ್ದ ಮನೋರಂಜನ್
ಈ ಸುದ್ದಿಯನ್ನೂ ಓದಿ : Security Breach in Lok Sabha: ಭದ್ರತಾ ವೈಫಲ್ಯ; We stand with Prathap simha ಅಭಿಯಾನ ಶುರು
ಸಂಸತ್ ದಾಳಿ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
2. Karnataka Politics: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಸ್.ಟಿ. ಸೋಮಶೇಖರ್ ಸೇರಿ ಬಿಜೆಪಿಯ ಮೂವರು ಶಾಸಕರು!
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ (Karnataka Politics) ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಸಂಪರ್ಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ಶಾಸಕರು ಇದ್ದಾರೆ ಎಂಬ ಸುದ್ದಿಗಳಿಗೆ ಈಗ ಪುಷ್ಟಿ ಸಿಕ್ಕಿದೆ. ಬುಧವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ (Congress Legislature Party meeting) ಬಿಜೆಪಿಯ ಮೂವರು ರೆಬೆಲ್ ಶಾಸಕರು ಹಾಜರಾಗಿದ್ದಾರೆ. ಅವರ ಈ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಹಾಗೂ ಎಂಎಲ್‌ಸಿ ಎಚ್. ವಿಶ್ವನಾಥ್ (ST Somashekar Shivaram Hebbar and MLC H Vishwanath) ಭಾಗಿಯಾಗಿದ್ದಾರೆ. ಆದರೆ, ನಾವು ಹೋಗಿದ್ದು ಊಟಕ್ಕಷ್ಟೇ ಎಂದು ಹೇಳಿಕೆ ನೀಡಿದ್ದಾರೆ. ಈ ನಡುವೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (Opposition leader R Ashok) ಸಹ ಪ್ರತಿಕ್ರಿಯೆ ನೀಡಿದ್ದು, ಸೋಮಶೇಖರ್ ನನಗೆ ಹೇಳಿಯೇ ಊಟಕ್ಕೆ ಹೋಗಿದ್ದರು ಎಂದು ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ: ST Somashekhar: ಕಾಂಗ್ರೆಸ್ ಸಿಎಲ್‌ಪಿಗೆ ಹೋಗಿಲ್ಲ; ಔತಣಕೂಟಕ್ಕಷ್ಟೇ ಹೋಗಿದ್ದೆ ಎಂದ ಎಸ್.ಟಿ. ಸೋಮಶೇಖರ್
3. 2024ರ ಚುನಾವಣೆಯಲ್ಲಿ ಮೋದಿ ಮತ್ತಷ್ಟು ಸ್ಟ್ರಾಂಗ್! ಹೊಸ ಸಮೀಕ್ಷೆ ಪ್ರಕಾರ ಎನ್‌ಡಿಎಗೆ ಸಿಗುವ ಸೀಟೆಷ್ಟು?
ಹೊಸದಿಲ್ಲಿ: ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸರಕಾರ ಸಜ್ಜಾಗಿರುವಂತೆ ತೋರುತ್ತಿದೆ. ಇಟಿಜಿ ಸಂಸ್ಥೆ ಹಾಗೂ ಟೈಮ್ಸ್ ನೌ ಚಾನೆಲ್ ನಡೆಸಿರುವ ಸಮೀಕ್ಷೆಗಳು (ETG Survey 2024 Lok Sabha) ಇದನ್ನು ಸೂಚಿಸಿವೆ. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. llahabad High Court: ಮಥುರಾ ಕೃಷ್ಣ ಜನ್ಮ ಭೂಮಿ ಸರ್ವೇಗೆ ಹೈಕೋರ್ಟ್ ಅನುಮತಿ
ಅಲಹಾಬಾದ್: ಕೃಷ್ಣಜನ್ಮಭೂಮಿ ಮಂದಿರದ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿ ಸಂಕೀರ್ಣದ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ (Allahabad HC) ಅನುಮತಿ ನೀಡಿದೆ (Sri Krishna Janmabhoomi-Shahi Idgah Masjid dispute). ಈ ಮೂಲಕ ಬಹು ವರ್ಷದ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಜಸ್ಟೀಸ್ ಮಯಾಂಕ್ ಕುಮಾರ್ ಜೈನ್ ಮಹತ್ವದ ಆದೇಶ ನೀಡಿ, ಸಮೀಕ್ಷೆ ನಡೆಸಲು ಕಮಿಷನರ್ ತಂಡ ರಚನೆ ಮಾಡಲು ಸೂಚಿಸಿದ್ದಾರೆ. ಭಗವಾನ್ ಕೃಷ್ಣ ಜನಿಸಿದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನುವುದು ಹಿಂದೂ ಅರ್ಜಿದಾರರ ವಾದವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. Belagavi Winter Session: ನಾಲ್ಕು ಏರ್‌ಪೋರ್ಟ್‌ಗಳಿಗೆ ನಾಮಕರಣ; ಟಿಪ್ಪು ಹೆಸರಿಡಲು ಕೈ ಶಾಸಕ ಆಗ್ರಹ
ಬೆಳಗಾವಿ: ರಾಜ್ಯದ ನೂತನ ನಾಲ್ಕು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಕುರಿತ ನಿರ್ಣಯಕ್ಕೆ ವಿಧಾನಸಭೆಯಲ್ಲಿ (Belagavi Winter Session) ಸರ್ವಾನುಮತದ ಅಂಗೀಕಾರ ನೀಡಲಾಗಿದೆ. ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ವಿಜಯಪುರ ನಿಲ್ದಾಣಗಳಿಗೆ ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲು ನಿರ್ಧರಿಸಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. Karnataka Holiday List 2024: ರಾಜ್ಯದ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿ ಬಿಡುಗಡೆ
ಬೆಂಗಳೂರು: 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿಯನ್ನು (Karnataka Holiday List 2024) ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಈ ಬಗ್ಗೆ ರಾಜ್ಯ ಪತ್ರ ಹೊರಡಿಸಲಾಗಿದ್ದು, ಈ ಪಟ್ಟಿಯಲ್ಲಿ ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು, ಪ್ರಮುಖ ಹಬ್ಬಗಳು ಹಾಗೂ ಮಹಾನ್ ವ್ಯಕ್ತಿಗಳ ಜಯಂತಿಗಳು ಸೇರಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. Year Ender 2023: ಈ ವರ್ಷ ಗೆದ್ದು ಬೀಗಿದ ಸ್ಟಾರ್ ನಟರ ಚಿತ್ರಗಳಿವು
ಬೆಂಗಳೂರು: 2023ರಲ್ಲಿ (Year Ender 2023) ಹಲವಾರು ಸಿನಿಮಾಗಳು ಬಿಡುಗಡೆಯಾಗಿವೆ. 2022ರಲ್ಲಿ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ನಮ್ಮ ಚಂದನವನದ ಕೊಡುಗೆ ಅಪಾರವಾಗಿದೆ. ಅದಕ್ಕೆ ಮುಖ್ಯ ಕಾರಣ ಕೆಜಿಎಫ್ ಚಾಪ್ಟರ್ 2 ಆಗಿದೆ. ದಕ್ಷಿಣ ಭಾರತದ ಸಿನಿಮಾಗಳಾದ ಆರ್‌ಆರ್‌ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಕೊಡುಗೆಯೇ ಸುಮಾರು ಶೇಕಡ 50ರಷ್ಟಿದೆ. ಆದರೆ ಈ ವರ್ಷ ದಕ್ಷಿಣ ಭಾರತದ ಕೊಡುಗೆ ಶೇಕಡ 44ಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. 2023ರಲ್ಲಿ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಬಿಬಿಎಂಪಿ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಅನುಮೋದನೆ: 500 ಕೋಟಿ ರೂ. ಉಳಿತಾಯ!
ಬೆಳಗಾವಿ: ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರವಾಗಿದ್ದ ಬಿಬಿಎಂಪಿ ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕಕ್ಕೆ (BBMP and Other Laws Amendment Bill) ಮೇಲ್ಮನೆಯಲ್ಲೂ (Belagavi Winter Session) ಗುರುವಾರ ಅನುಮೋದನೆ ಸಿಕ್ಕಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಸದನದಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. Karnataka Weather : ನಾಳೆ ಮಳೆ ಮಾಯ; ನಾಡಿದ್ದು ಪೂರ್ತಿ ಮಳೆಮಯ!
ಬೆಂಗಳೂರು: ಬುಧವಾರ (ಡಿ.13) ರಾಜ್ಯಾದ್ಯಂತ ಒಣಹವೆ (Dry weather) ಇದ್ದು, ವಿಜಯಪುರದಲ್ಲಿ ಕಡಿಮೆ ಉಷ್ಣಾಂಶ 11.8 ಡಿ.ಸೆ ದಾಖಲಾಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆಯೇ ಮುಂದುವರಿಯಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಪೆಟ್ರೋಲ್ ದರದ ಚಿಂತೆ ಬಿಟ್ಹಾಕಿ; ಈ ಯುವಕನ ಐಡಿಯಾ ಫಾಲೋ ಮಾಡಿ!
ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಸೇರಿದಂತೆ ಇಂಧನಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಆದರೆ ಈ ಯುವಕನಿಗೆ ಬೆಲೆ ಏರಿಕೆಯ ಚಿಂತೆ ಇಲ್ಲ. ಪ್ರಯಾಣಕ್ಕಾಗಿ ಆತ ಉತ್ತಮ ಮಾರ್ಗ ಕಂಡುಕೊಂಡಿದ್ದಾನೆ. ಸದ್ಯ ಆತನ ಐಡಿಯ ಜನರ ಗಮನ ಸೆಳೆದಿದೆ. ಆತನ ರಸ್ತೆಯಲ್ಲಿ ಸಂಚರಿಸುತ್ತಿರುವ ವಿಡಿಯೊ ವೈರಲ್ ಆಗಿದೆ (Viral Video). ಅಷ್ಟಕ್ಕೂ ಆ ವಿಡಿಯೊದಲ್ಲಿ ಏನಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ