Site icon Vistara News

WPL 2023 : ಆರ್​ಸಿಬಿ ಗೆಲುವಿಗೆ 189 ರನ್​ ಸವಾಲು, 68 ರನ್​ ಬಾರಿಸಿದ ಲಾರಾ ವೋಲ್ವರ್ತ್​

189 runs challenge for RCB victory, Laura Wolworth scored 68 runs

#image_title

ಮುಂಬಯಿ: ಮಹಿಳೆಯರ ಪ್ರೀಮಿಯರ್​ ಲೀಗ್​ನ 16ನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಜಯಂಟ್ಸ್​​ ತಂಡ ಎದುರಾಳಿ ಆರ್​ಸಿಬಿಗೆ 189 ರನ್​ಗಳ ಗೆಲುವಿನ ಸವಾಲೊಡ್ಡಿದೆ. ಗುಜರಾತ್​ ತಂಡದ ಪರ ಆರಂಭಿಕ ಬ್ಯಾಟರ್​ ಲಾರಾ ವೋಲ್ವರ್ತ್​​ (68) ಅರ್ಧ ಶತಕ ಬಾರಿಸಿದರೆ ಆಶ್ಲೀ ಗಾರ್ಡ್ನರ್​ (41) ದೊಡ್ಡ ಮೊತ್ತ ಪೇರಿಸಲು ನೆರವಾದರು ಶ್ರೇಯಾಂಕ ಪಾಟೀಲ್​ (17 ರನ್​ಗಳಿಗೆ 2 ವಿಕೆಟ್​) ಬಿಟ್ಟರೆ ಉಳಿದ ಬೌಲರ್​ಗಳು ಗುಜರಾತ್​ ತಂಡದ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದರು.

ಇಲ್ಲಿನ ಬ್ರಬೊರ್ನ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಗುಜರಾತ್​ ತಂಡದ ನಾಯಕಿ ಸ್ನೇಹಾ ರಾಣಾ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ತಕ್ಕುದಾಗಿ ಆಡಿದ ತಂಡದ ಸದಸ್ಯರು ನಿಗದಿತ 20 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 188 ರನ್​ ಬಾರಿಸಿತು.

ಬ್ಯಾಟಿಂಗ್ ಆರಂಭಿಸಿದ ಗುಜರಾತ್ ತಂಡ ಉತ್ತಮ ಅರಂಭ ಪಡೆಯಿತು. ಸೋಫಿ ಡಂಕ್ಲಿ 16 ರನ್​ ಬಾರಿಸಿದ ಔಟಾಗಿರುವ ಹೊರತಾಗಿಯೂ ಮೊದಲ ವಿಕೆಟ್​ಗೆ 27 ರನ್​ ಬಾರಿಸಿತು. ಬಳಿಕ ಆಡಲು ಬಂದ ಸಬ್ಬಿನೇನಿ ಮೇಘನಾ ನಿಧಾನಗತಿಯಲ್ಲಿ ಆಡಿ 31 ರನ್​ ಬಾರಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಾರಾ ವೋಲ್ವರ್ತ್​ 42 ಎಸೆತಗಳಲ್ಲಿ 9 ಫೋರ್​ ಹಾಗೂ 2 ಸಿಕ್ಸರ್​ಗಳ ನೆರವಿನಿಂದ 62 ಬಾರಿಸಿದರು. ಮೇಘನಾ ಇನಿಂಗ್ಸ್​ನಲ್ಲಿ 4 ಫೋರ್​ಗಳು ಸೇರಿಕೊಂಡಿದ್ದವು.

ಮೇಘನಾ ಔಟಾದ ಬಳಿಕ ಆಡಲು ಬಂದ ಆ್ಯಶ್ಲ್ರೀ ಗಾರ್ಡ್ನರ್​ ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು. 6 ಫೋರ್​ ಹಾಗೂ 1 ಸಿಕ್ಸರ್ ಸಮೇತ ಅವರ 41 ರನ್​ ಬಾರಿಸಿದರು. ಕೊನೆಯಲ್ಲಿ ದಯಾಲನ್​ ಹೇಮಲತಾ 6 ಎಸೆತಗಳಲ್ಲಿ 16 ರನ್​ ಬಾರಿಸಿದರೆ, ಹರ್ಲಿನ್​ ಡಿಯೋಲ್​ 5 ಎಸೆತಗಳಿಗೆ 12 ರನ್​ ಗಳಿಸಿದರು.

ಬೆಂಗಳೂರು ತಂಡದ ಪರ ಸೋಫಿ ಡಿವೈನ್​ ಹಾಗೂ ಪ್ರೀತಿ ಬೋಸ್​ ತಲಾ ಒಂದು ವಿಕೆಟ್​ ಪಡೆದರು.

ಅದಕ್ಕಿಂತ ಮೊದಲು ಟಾಸ್ ಗೆದ್ದ ಬಳಿಕ ಮಾತನಾಡಿದ ಗುಜರಾತ್​ ತಂಡದ ನಾಯಕಿ ಸ್ನೇಹಾ ರಾಣಾ, ನನ್ನ ತಂಡದ ಆಟಗಾರ್ತಿಯರೆಲ್ಲರೂ ಅತೀವ ಆತ್ಮವಿಶ್ವಾಸದಲ್ಲಿದ್ದೇವೆ. 160ರಿಂದ 170 ರನ್​ ಪೇರಿಸಿ ಗೆಲ್ಲುವ ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸ್ಮೃತಿ ಮಂಧಾನಾ ಮಾತನಾಡಿ, ನಾವು ಟಾಸ್​ ಸೋತರೂ ಮ್ಯಾಚ್ ಗೆಲ್ಲುತ್ತೇವೆ. ಟಾಸ್​ ಗೆದ್ದಿದ್ದರೂ ಫೀಲ್ಡಿಂಗ್​ ಆಯ್ಕೆ ಮಾಡುವ ಉದ್ದೇಶ ಹೊಂದಿದ್ದೆವು ಎಂದು ಹೇಳಿದ್ದಾರೆ. ಇತ್ತಂಡಗಳಲ್ಲಿ ತಲಾ ಒಂದು ಬದಲಾವಣೆ ಆಗಿದೆ. ರೇಣುಕಾ ಸಿಂಗ್​ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಪ್ರೀತಿ ಅವಕಾಶ ಪಡೆದಿದ್ದಾರೆ. ಗುಜರಾತ್​ ತಂಡಕ್ಕೆ ಮೇಘನಾ ವಾಪಸಾಗಿದ್ದ, ಮಾನ್ಸಿ ಹೊರಕ್ಕುಳಿದಿದ್ದಾರೆ.

Exit mobile version