Site icon Vistara News

Cricket Record : 22 ಸಿಕ್ಸರ್​, 14 ಫೋರ್​; 43 ಎಸೆತಕ್ಕೆ 193 ರನ್​, ದಾಖಲೆಗಳೆಲ್ಲವೂ ಚಿಂದಿ!

Batting Reocrd

ಬೆಂಗಳೂರು: ಕ್ರಿಕೆಟ್​ನಲ್ಲಿ ದಾಖಲೆಗಳು (Batting Record) ಶಾಶ್ವತವಲ್ಲ. ಒಬ್ಬರು ಮಾಡಿದ ದಾಖಲೆಯನ್ನು ಇನ್ನೊಬ್ಬರು (Cricket Record) ಕೆಲವೇ ದಿನಗಳಲ್ಲಿ ಮುರಿಯುವುದು ಮಾಮೂಲಾಗಿದೆ. ಅದರಲ್ಲೂ ಕ್ರಿಕೆಟ್​ ಸಂಪೂರ್ಣವಾಗಿ ಬ್ಯಾಟರ್​ಗಳ ಆಟವಾಗಿ ಪರಿವರ್ತನೆಗೊಂಡಿರುವ ದಿನದಿಂದ ರನ್​ ವಿಚಾರದಲ್ಲಿ ದಿನಕ್ಕೊಂದು ದಾಖಲೆಗಳು ಮೂಡಿ ಬರುತ್ತಿವೆ. ಅಂತೆಯೇ ಯುರೋಪಿಯನ್ ಕ್ರಿಕೆಟ್ ಟಿ 10 ಪಂದ್ಯದಲ್ಲಿ ದೊಡ್ಡ ದಾಖಲೆಯೊಂದು ಸೃಷ್ಟಿಯಾಗಿದೆ. ಕೇವಲ 43 ಎಸೆತಗಳಲ್ಲಿ 193 ರನ್ ಸಿಡಿಸಿದ ವಿಶ್ವ ದಾಖಲೆ.

ಮಂಗಳವಾರ ನಡೆದ ಪಂದ್ಯದಲ್ಲಿ ಕ್ಯಾಟಲುನ್ಯಾ ಜಾಗ್ವಾರ್​ ತಂಡದ ಹಮ್ಜಾ ಸಲೀಮ್ ದಾರ್ 43 ಎಸೆತಗಳಲ್ಲಿ 193 ರನ್ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಕ್ಯಾಟಲುನ್ಯಾ ಜಾಗ್ವಾರ್ ಮತ್ತು ಸೋಹಲ್ ಹಾಸ್ಪಿಟಲ್ಟೆಟ್ ನಡುವಿನ ಯುರೋಪಿಯನ್ ಕ್ರಿಕೆಟ್ ಟಿ 10 ಪಂದ್ಯದಲ್ಲಿ ಈ ಅಸಾಧಾರಣ ಇನ್ನಿಂಗ್ಸ್ ದಾಖಲಾಗಿದೆ. 22 ಸಿಕ್ಸರ್​ಗಳು ಮತ್ತು 14 ಬೌಂಡರಿಗಳೊಂದಿಗೆ ಅಜೇಯ 193 ರನ್ ಗಳಿಸಿದ ಹಮ್ಜಾ ಈಗ ಟಿ10 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಸಿಡಿಸಿದವರಾಗಿದ್ದಾರೆ. ಅವರು ಹಿಂದಿನ 163 ರನ್​ಗಳ ದಾಖಲೆಯನ್ನು ಮೀರಿಸಿದ್ದಾರೆ.

ಇದನ್ನೂ ಓದಿ : S Sreesanth : ಗಂಭೀರ್‌ಗೆ ಟೀಕಿಸಿದ​ ಶ್ರೀಶಾಂತ್​ಗೆ ಬಂತು ಲೀಗಲ್​ ನೋಟಿಸ್!

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕ್ಯಾಟಲುನ್ಯಾ ಜಾಗ್ವಾರ್ ತಂಡ 10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 257 ರನ್ ಗಳಿಸಿತು. ಜಾಗ್ವಾರ್ಸ್ ಪರ ಹಮ್ಜಾ ಕೇವಲ 43 ಎಸೆತಗಳಲ್ಲಿ 193* ರನ್ ಗಳಿಸಿದರು. ಯಾಸಿರ್ ಅಲಿ 19 ಎಸೆತಗಳಲ್ಲಿ 58 ರನ್ ಸಿಡಿಸಿ ಔಟಾದರು. ನಂತರ ಸೋಹಲ್ ಹಾಸ್ಪಿಟಲೈಟ್​ ತಂಡವು 10 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 104 ರನ್ ಮಾತ್ರ ಬಾರಿಸಿತು. 10 ಎಸೆತಗಳಲ್ಲಿ 25 ರನ್ ಗಳಿಸಿದ ರಾಜಾ ಈ ತಂಡ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಖಮರ್ ಶಹಜಾದ್ 13 ಎಸೆತಗಳಲ್ಲಿ 22 ರನ್ ಗಳಿಸಿದರೆ, ಅಮೀರ್ ಸಿದ್ದಿಕಿ 9 ಎಸೆತಗಳಲ್ಲಿ 16 ರನ್ ಗಳಿಸಿದರು. ಈ ಮೂಲಕ ಜಾಗ್ವರ್​ ತಂಡ 153 ರನ್​ಗಳಿಂದ ಗೆಲುವು ಸಾಧಿಸಿತು.

ಜಾಗ್ವಾರ್ಸ್ ಪರ ಹಮ್ಜಾ ಮತ್ತೊಮ್ಮೆ ಬೌಲಿಂಗ್​ನಲ್ಲೂ ಮಿಂಚಿದ್ದಾರೆ. ಚೆಂಡಿನೊಂದಿಗೆ ಒಟ್ಟು ಮೂರು ವಿಕೆಟ್​ಗಳನ್ನು ಪಡೆದರು. ಈ ತಂಡದ ಪರ ಫೈಸಲ್ ಸರ್ಫರಾಜ್, ಫಾರೂಕ್ ಸೊಹೈಲ್, ಅಮೀರ್ ಹಮ್ಜಾ ಹಾಗೂ ಮೊಹಮ್ಮದ್ ಉಮರ್ ವಕಾಸ್ ತಲಾ 1 ವಿಕೆಟ್ ಪಡೆದರು. ಈ ಮುಖಾಮುಖಿಯ ನಂತರ, ಜಾಗ್ವಾರ್ಸ್ ಗುರುವಾರ ತನ್ನ ಮುಂದಿನ ಪಂದ್ಯದಲ್ಲಿ ಇಸಿಎಸ್ ಸ್ಪೇನ್ ಟಿ 10 ಪಂದ್ಯದಲ್ಲಿ ಬೆಂಗಾಲಿ ಸಿಸಿಯನ್ನು ಸೋಲಿಸುವ ಮೂಲಕ ಗೆಲುವಿನ ಅಭಿಯಾನವನ್ನು ಮುಂದುವರಿಸಿತು. ಸೋಹಲ್ ಹಾಸ್ಪಿಟಲ್ಟೆಟ್ ಶುಕ್ರವಾರ ತಮ್ಮ ಮುಂದಿನ ಪಂದ್ಯದಲ್ಲಿ ಬೆಂಗಾಲಿ ಸಿಸಿ ವಿರುದ್ಧ ಸೆಣಸಲಿದೆ.

ಸಚಿನ್ ಅವರ ಈ ದಾಖಲೆ ಮುರಿಯಲು ವಿರಾಟ್​ ಕೊಹ್ಲಿಗೆ ಅಸಾಧ್ಯ; ಲಾರಾ

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಅದಷ್ಟೋ ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ಇತ್ತೀಚೆಗ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಕೊಹ್ಲಿ ಅವರು ಸಚಿನ್​ ಅವರ ಏಕದಿನ ಕ್ರಿಕೆಟ್​ನ 49 ಶತಕದ ದಾಖಲೆಯನ್ನು ಮುರಿದಿದ್ದರು. ಆದರೆ ಸಚಿನ್​ ಅವರ ಈ ಒಂದು ದಾಖಲೆ ಮುರಿಯಲು ಅವರಿಗೆ ಅಸಾಧ್ಯ ಎಂದು ವಿಂಡೀಸ್​ ಮಾಜಿ ಆಟಗಾರ ಬ್ರಿಯಾನ್ ಲಾರಾ(Brian Lara) ಅಭಿಪ್ರಾಯಪಟ್ಟಿದ್ದಾರೆ.

ಸದ್ಯ 80 ಅಂತಾರಾಷ್ಟ್ರೀಯ ಶತಕ ಬಾರಿಸಿ ದ್ವಿತೀಯ ಸ್ಥಾನದಲ್ಲಿರುವ ಕೊಹ್ಲಿ ಅವರು ಸಚಿನ್​ ಅವರ 100ನೇ ಶತಕದ(Tendulkar’s 100 centuries) ದಾಖಲೆಯನ್ನು ಕೂಡ ಮುರಿಯಲಿದ್ದಾರೆ ಎಂಬ ಕುರಿತು ಈಗಾಗಲೇ ಚರ್ಚೆಗಳು ನಡೆಯುತ್ತಿದೆ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಲಾರಾ, ಇದು ಅಸಾಧ್ಯ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೆ ಇದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.

ವಯಸ್ಸು ನಿಲ್ಲದು

ಕೊಹ್ಲಿಗೆ ಈಗ 35 ವರ್ಷ. ಅವರಿಗೆ ಸಚಿನ್​ ಅವರ 100 ಶತಕದ ದಾಖಲೆ ಮುರಿಯಲು ಇನ್ನೂ 20 ಶತಕದ ಅಗತ್ಯವಿದೆ. ಮುಂದಿನ ವರ್ಷ ಟೀಮ್ ಇಂಡಿಯಾಕ್ಕೆ ಹೆಚ್ಚು ಏಕದಿನ ಸರಣಿಗಳು ಇಲ್ಲ. ಹೆಚ್ಚಾಗಿ ಟಿ20 ಸರಣಿಗಳೇ ಇವೆ. ಟಿ20ಯಲ್ಲಿ ವಿರಾಟ್ ಅವರ ಭವಿಷ್ಯದ ಬಗ್ಗೆ ಇನ್ನೂ ಗೊಂದಲಗಳಿವೆ. ಒಂದೊಮ್ಮೆ ಏಕದಿನ ಸರಣಿಗಳು ಇದ್ದರೂ, ಪ್ರತಿ ವರ್ಷ ಐದು ಶತಕಗಳನ್ನು ಗಳಿಸಬೇಕು. ಇದಕ್ಕೆ ನಾಲ್ಕು ವರ್ಷಗಳು ಬೇಕಾಗುತ್ತವೆ. ಆಗ ಕೊಹ್ಲಿಗೆ 39 ವರ್ಷವಾಗುತ್ತದೆ. ಇದು ತುಂಬಾ ಕಠಿಣ. ಹೀಹಾಗಿ ಕೊಹ್ಲಿ ಕನಿಷ್ಠ 90 ಸನಿಹಕ್ಕೆ ಶತಕದ ಸಂಖೆಯನ್ನು ಏರಿಸಬಹುದು” ಎಂದು ಲಾರ ಹೇಳಿದ್ದಾರೆ.

Exit mobile version