ಲಾಸ್ ಏಂಜಲೀಸ್: 2028ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್(2028 Olympics Cricket) ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಸೇರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮುಂದಾಗಿದೆ. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಆರು ತಂಡಗಳ ಟಿ20 ಕೂಟದ ವೇಳಾಪಟ್ಟಿಯನ್ನು ಗೇಮ್ಸ್‌ನ ಸಂಘಟನ ಸಮಿತಿಗೆ ಶಿಫಾರಸು ಮಾಡಿದೆ.
ಕ್ರಿಕೆಟ್ ಸೇರ್ಪಡೆಯ ಕುರಿತು ಮುಂದಿನ ಅಕ್ಟೋಬರ್ ವೇಳೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ. ಇದಕ್ಕಿಂದ ಮೊದಲು ಸಂಘಟನಾ ಸಮಿತಿಯು ಹೊಸ ಕ್ರೀಡೆಗಳ ಪಟ್ಟಿಯನ್ನು ಅಂತಿ ಮಗೊಳಿಸಲಿದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಅಲ್ಲದೇ ಬೇಸ್‌ಬಾಲ್/ಸಾಫ್ಟ್ಬಾಲ್, ಕರಾಟೆ, ಕಿಕ್‌ಬಾಕ್ಸಿಂಗ್, ಸ್ಕ್ವಾಷ್ ಸೇರಿದಂತೆ ಕೆಲವು ಆಟಗಳು 2028ರ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಕ್ರಿಕೆಟ್ ಸೇರ್ಪಡೆಯಾದರೆ ಯಾವ ತಂಡಗಳು ಸ್ಥಾನ ಪಡೆಯಲಿದೆ ಮತ್ತು ಯಾವ ಆಧಾರದಲ್ಲಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎನ್ನುವುದು ಸದ್ಯದ ಕುತೂಹಲ.
ಇದನ್ನೂ ಓದಿ | IND VS NZ: ರಾಯ್‌ಪುರದಲ್ಲಿ ಟೀಮ್ ಇಂಡಿಯಾದ ರಾಯಭಾರ; ಕಿವೀಸ್ ವಿರುದ್ಧ 8 ವಿಕೆಟ್ ಗೆಲುವು