Site icon Vistara News

39ನೇ ವಯಸ್ಸಲ್ಲೂ ಹಕ್ಕಿಯಂತೆ ಹಾರಿ ಅದ್ಭುತ ಕ್ಯಾಚ್​ ಹಿಡಿದ ಆರ್​ಸಿಬಿ ನಾಯಕ; ವಿಡಿಯೊ ವೈರಲ್​

Faf du Plessis

ಜೊಹಾನ್ಸ್​ಬರ್ಗ್​: ಅದ್ಭುತ ಫೀಲ್ಡಿಂಗ್ ಎನ್ನುವುದು ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ರಕ್ತದಲ್ಲೇ ಬಂದಿದೆ. ಫೀಲ್ಡಿಂಗ್​ನಲ್ಲಿ ಅಸಾಧ್ಯವಾದುದನ್ನು ಸಾಧ್ಯ ಎಂದು ತೋರಿಸಿಕೊಟ್ಟ ಕೀರ್ತಿ ದಕ್ಷಿಣ ಆಫ್ರಿಕಾ ಆಟಗಾರರ ವಿಶೇಷತೆ. ಅದ್ಭುತ ಕ್ಯಾಚ್ ಗಳ ಸರದಾರ ಫೀಲ್ಡಿಂಗ್ ಎಂದಾಗ ಮೊದಲು ನೆನಪಾಗುವ ಹೆಸರೇ “ಜಾಂಟಿ ರೋಡ್ಸ್” ಈ ದೇಶದ ಪರ ಆಡಿದ ಅನೇಕ ಕ್ರಿಕೆಟಿಗರು ಕೂಡ ಫೀಲ್ಡಿಂಗ್​ ವಿಚಾರದಲ್ಲಿ ಇವರನ್ನು ಮೀರಿಸುವವರಿಲ್ಲ ಎನ್ನುವ ಮಟ್ಟಿಗೆ ಪ್ರದರ್ಶನ ತೋರಿದ್ದಾರೆ. ಎಬಿಡಿ ವಿಲಿಯರ್ಸ್​, ಮಾರ್ಕ್​ ಬೌಚರ್​, ಫಾಫ್​ ಡು ಪ್ಲೆಸಿಸ್(Faf du Plessis) ಹೀಗೆ ಹಲವು ಆಟಗಾರರು ನೆಪಿಗೆ ಬರುತ್ತಾರೆ. ಇದೀಗ ಫಾಫ್​ ಡು ಪ್ಲೆಸಿಸ್ 39ನೇ ವಯಸ್ಸಲ್ಲೂ ಹಕ್ಕಿಯಂತೆ ಹಾರಿ ಹಿಡಿದ ಕ್ಯಾಚ್​ವೊಂದರ ವಿಡಿಯೊ ವೈರಲ್​ ಆಗಿದೆ.

ಜೋಹಾನ್ಸ್​ಬರ್ಗ್​ನ ದಿ ವಾಂಡರರ್ಸ್​ ಸ್ಟೇಡಿಯಂನಲ್ಲಿ ನಡೆದ SA20 ಲೀಗ್​ನ 4ನೇ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಹಾಗೂ ಎಂಐ ಕೇಪ್​ಟೌನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಿಝಾಡ್ ವಿಲಿಯಮ್ಸ್ ಎಸೆದ ಪಂದ್ಯದ 17ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಬ್ರೆವಿಸ್ ಹೊಡೆದ ಚೆಂಡನ್ನು ಮಿಡ್ ಆಫ್​ನಲ್ಲಿ ಫಾಫ್ ಡುಪ್ಲೆಸಿಸ್ ಅದ್ಭುತ ಡೈವಿಂಗ್ ಮೂಲಕ ಒಂದೇ ಕೈಯಲ್ಲಿ ಕ್ಯಾಚ್​ ಹಿಡಿದಿದ್ದಾರೆ. ಇದನ್ನು ಕಂಡು ಪ್ರೇಕ್ಷಕರು ಒಂದು ಕ್ಷಣ ದಂಗಾದರು. ಕಾಮೆಂಟ್ರಿ ಮಾಡುತ್ತಿದ್ದವರು ವಾಹ್​……. ನಿಜಕ್ಕೂ ನಂಬಲಸಾಧ್ಯ… ಅದ್ಭುತ ಕ್ಯಾಚ್​ ಎಂದು ವರ್ಣಿಸಿದ್ದಾರೆ.

ಇದನ್ನೂ ಓದಿ ಕ್ರಿಕೆಟ್​ ಇತಿಹಾಸದ ಅತ್ಯದ್ಭುತ​ ಕ್ಯಾಚ್ ಕಂಡು ಸ್ಟನ್​ ಆದ ಕ್ರಿಕೆಟ್​ ಜಗತ್ತು!; ಇಲ್ಲಿದೆ ವಿಡಿಯೊ


ಪಂದ್ಯ ಗೆದ್ದ ಕೇಪ್​ಟೌನ್


ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಎಂಐ ಕೇಪ್​ಟೌನ್ ತಂಡ ರಾಸ್ಸಿ ವ್ಯಾನ್​ ಡರ್​ ಡುಸ್ಸೆನ್ ಅವರ ವಿಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 243 ರನ್ ಕಲೆಹಾಕಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಜೋಬರ್ಗ್​ ಸೂಪರ್ ಕಿಂಗ್ಸ್ ತಂಡ 17.5 ಓವರ್​ಗಳಲ್ಲಿ 145 ರನ್​ಗಳಿಗೆ ಸರ್ವಪತನ ಕಂಡು 98 ರನ್​ಗಳ ಹೀನಾಯ ಸೋಲು ಕಂಡಿತು. ಕೇಪ್​ಟೌನ್ ತಂಡದ ಆಟಗಾರ ಡುಸ್ಸೆನ್ ಕವಲ 50 ಎಸೆತಗಳಲ್ಲಿ 6 ಸೊಗಸಾದ ಸಿಕ್ಸರ್​ ಹಾಗೂ 9 ಫೋರ್​ಗಳೊಂದಿಗೆ 104 ರನ್ ಬಾರಿಸಿದರು.

ಆರ್​ಸಿಬಿ ನಾಯಕತ್ವ ಕೈ ತಪ್ಪುವ ಸಾಧ್ಯತೆ


ಕಳೆದ ಎರಡು ಸೀಸನ್​ನಲ್ಲಿ ಡು ಪ್ಲೆಸಿಸ್ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್​ನಿಂದಲೇ ಹೊರಬಿದ್ದಿತ್ತು. ಈ ಬಾರಿ ಅವರನ್ನು ನಾಯಕ್ವದಿಂದ ಕೆಳಗಿಳಿಸಲಾಗುವುದು ಎನ್ನುವ ಮಾತುಗಳು ಕೇಳಿ ಬಂದಿವೆ. ಅವರ ಸ್ಥಾನಕ್ಕೆ ಈ ಹಿಂದೆ ನಾಯಕನಾಗಿದ್ದ ವಿರಾಟ್​ ಕೊಹ್ಲಿಯನ್ನು ಮತ್ತೆ ನಾಯಕನಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಕೊಹ್ಲಿ ಭಾರತ ತಂಡದ ನಾಯಕನಾಗಿದ್ದಾಗ ಐಪಿಎಲ್​ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ ಡು ಪ್ಲಸಿಸ್​ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿತ್ತು.

Exit mobile version