ಗುವಾಹಟಿ: ತಿರುವನಂತಪುರಂನಲ್ಲಿ ನಡೆದ ಎರಡನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು (Ind vs Aus) 44 ರನ್ಗಳಿಂದ ಸೋಲಿಸಿದ ನಂತರ, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಈಗ ನವೆಂಬರ್ 28ರಂದು ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರನೇ ಪಂದ್ಯದಲ್ಲಿ ಕಾಂಗರೂ ಪಡೆಯನ್ನು ಎದುರಿಸಲಿದೆ. ವಿಶಾಖಪಟ್ಟಣಂನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಜಯ ಸಾಧಿಸಿದ ಮೆನ್ ಇನ್ ಬ್ಲೂ ಸರಣಿಯಲ್ಲಿ ಈಗ 2-0 ಮುನ್ನಡೆ ಸಾಧಿಸಿದೆ.
Ruturaj Gaikwad faces the race against time ⏳
— BCCI (@BCCI) November 27, 2023
60 seconds in hand to deliver a Match Report and a distractor in the name of Axar Patel 😃
WATCH 🎥🔽 – By @28anand | #INDvAUS pic.twitter.com/S9dDeXPrRj
ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ಅಗ್ರ ಮೂವರು ಆಟಗಾರರು ತಮ್ಮ ಅರ್ಧ ಶತಕಗಳನ್ನು ದಾಖಲಿಸಿದರೆ, ಸಿಡಿ ಗುಂಡು ರಿಂಕು ಸಿಂಗ್ ಕೇವಲ ಒಂಬತ್ತು ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು. ವೇಗದ ಬೌಲರ್ ಸೀನ್ ಅಬಾಟ್ ತಮ್ಮ ಮೂರು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 56 ರನ್ ನೀಡಿ ದುಬಾರಿ ಎನಿಸಿದ್ದರು.
236 ರನ್ಗಲ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾದ ಪರ ಕೆಳ ಕ್ರಮಾಂಕದಲ್ಲಿ ಮಾರ್ಕ್ ಸ್ಟೊಯಿನಿಸ್ 45 ಮತ್ತು ಟಿಮ್ ಡೇವಿಡ್ ಕ್ರಮವಾಗಿ 45 ಮತ್ತು 37 ರನ್ ಗಳಿಸಿದರೆ, ನಾಯಕ ಮ್ಯಾಥ್ಯೂ ವೇಡ್ 23 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರು. ಆದರೆ ತಮ್ಮ ಪಾಲಿನ ಓವರ್ಗಳು ಮುಕ್ತಾಯಗೊಂಡಾ 9 ಓವರ್ಗಳಲ್ಲಿ 191 ರನ್ ಗಳಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು. ಹೀಗಾಗಿ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಸರಣಿಯನ್ನು ಜಿವಂತವಾಗಿ ಇರಿಸಿಕೊಳ್ಳುವುದಕ್ಕೆ ಇದು ಕೊನೇ ಅವಕಾಶವಾಗಿದೆ.
ಇದನ್ನೂ ಓದಿ : Ind vs Aus : ಭಾರತ- ಆಸೀಸ್ 3ನೇ ಪಂದ್ಯಕ್ಕೆ ಮಳೆಯ ಅಡಚಣೆ ಆಗಬಹುದೇ?
ಭಾರತ- ಆಸ್ಟ್ರೇಲಿಯಾ ಟಿ20 ಮುಖಾಮುಖಿ
ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 28 ಬಾರಿ ಮುಖಾಮುಖಿಯಾಗಿವೆ. ಭಾರತ 17 ಬಾರಿ ಗೆದ್ದಿದ್ದರೆ, ಆಸೀಸ್ 10 ಬಾರಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಮೂರನೇ ಪಂದ್ಯದ ವೇಳೆ ಸೃಷ್ಟಿಯಾಗಬಲ್ಲ ಕೆಲವು ಮೈಲುಗಲ್ಲುಗಳು
- ಋತುರಾಜ್ ಗಾಯಕ್ವಾಡ್ (149) ಟಿ20 ಕ್ರಿಕೆಟ್ನಲ್ಲಿ 150 ಸಿಕ್ಸರ್ಗಳನ್ನು ಬಾರಿಸಲು ಒಂದು ದೊಡ್ಡ ಹೊಡೆತದ ದೂರದಲ್ಲಿದ್ದಾರೆ.
- ತಿಲಕ್ ವರ್ಮಾಗೆ (1956) ಟಿ 20 ಪಂದ್ಯಗಳಲ್ಲಿ 2000 ರನ್ಗಳ ಮೈಲಿಗಲ್ಲನ್ನು ಪೂರ್ಣಗೊಳಿಸಲು 44 ರನ್ಗಳ ಕೊರತೆಯಿದೆ.
- ಅಕ್ಷರ್ ಪಟೇಲ್ (149) ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ 150 ವಿಕೆಟ್ಗಳನ್ನು ಪೂರೈಸಲು ಕೇವಲ ಒಂದು ವಿಕೆಟ್ ಅಗತ್ಯವಿದೆ.
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 250 ವಿಕೆಟ್ಗಳ ಸಾಧನೆಮಾಡಲು ಆಸ್ಟ್ರೇಲಿಯಾದ ಆಡಮ್ ಜಂಪಾಗೆ (247) ಮೂರು ವಿಕೆಟ್ಗಳ ಅಗತ್ಯವಿದೆ.
- ಸೂರ್ಯಕುಮಾರ್ ಯಾದವ್ಗೆ (1940) ಟಿ20ಐನಲ್ಲಿ 2000 ರನ್ ಪೂರೈಸಲು 60 ರನ್ಗಳು ಬೇಕಾಗಿದೆ.
- ಗ್ಲೆನ್ ಮ್ಯಾಕ್ಸ್ವೆಲ್ (99) ಟಿ20ಐನಲ್ಲಿ 100ನೇ ಪಂದ್ಯವನ್ನಾಡಲು ಇನ್ನು ಒಂದು ಪಂದ್ಯ ಬಾಕಿ ಇದೆ.
- ಮ್ಯಾಕ್ಸ್ವೆಲ್ (146) ಟಿ 20 ಕ್ರಿಕೆಟ್ನಲ್ಲಿ 150 ವಿಕೆಟ್ಗಳ ಗುರಿ ತಲುಪಲು ನಾಲ್ಕು ವಿಕೆಟ್ಗಳ ಅಂತರದಲ್ಲಿದ್ದಾರೆ.
ಸಂಭಾವ್ಯ ತಂಡಗಳು ಇಂತಿವೆ
ಭಾರತ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆರೋನ್ ಹಾರ್ಡಿ, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ / ವಿಕೆಟ್ ಕೀಪರ್), ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಘಾ.