ಬೆಂಗಳೂರು : ಭಾರತವು ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರಬಲ ತಂಡ. ಕಳೆದ ಹತ್ತು ವರ್ಷಗಳಲ್ಲಿ ತಂಡದ ಪ್ರದರ್ಶನ ಅನುಕರಣೀಯ. ಆಟದ ದೀರ್ಘ ಸ್ವರೂಪವಾಗಿರಲಿ ಅಥವಾ ಸಂಕ್ಷಿಪ್ತ ಸ್ವರೂಪವಾಗಿರಲಿ ಟೀಮ್ ಇಂಡಿಯಾ ಕಠಿಣ ಪರಿಸ್ಥಿತಿಗಳಲ್ಲಿಯೂ ಇತರ ತಂಡಗಳ ಮೇಲೆ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ದಶಕದಲ್ಲಿ ಭಾರತದ ಯಶಸ್ಸಿನ ಹಿಂದಿನ ಮುಖ್ಯ ಕಾರಣವೆಂದರೆ ತಂಡದ ಆಧಾರಸ್ತಂಭಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ,(Virat kohli). ಅವರಿಬ್ಬರೇ ಭಾರತ ತಂಡದ ಶಕ್ತಿ.
ರೋಹಿತ್ ಮತ್ತು ವಿರಾಟ್ ತಂಡಕ್ಕೆ ಏಕಾಂಗಿಯಾಗಿ ಪಂದ್ಯಗಳನ್ನು ಗೆದ್ದುಕೊಡಬಲ್ಲವರು. ಕಿರು ಸ್ವರೂಪಕ್ಕೆ ಬಂದಾಗ ಅವರು ವಿಶ್ವದ ಅಗ್ರ ಸ್ಕೋರರ್ ಆಗಿದ್ದಾರೆ. ಇದೀಗ ವರ್ಷದ ನಂತರ ಅಫ್ಘಾನಿಸ್ತಾನ ಸರಣಿಗಾಗಿ ಅವರಿಬ್ಬರನ್ನು ಟಿ 20 ಐ ತಂಡಕ್ಕೆ ಸೇರಿಸಲಾಗಿದೆ. ಈ ಮೂಲಕ ಅವರಿಬ್ಬರು 2024 ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಾದರೆ ಮುಂಬರುವ ಟಿ20 ವಿಶ್ವಕಪ್ ಅವರ ಸೇವೆಗಳು ಏಕೆ ಬೇಕು ಎಂಬುದಕ್ಕೆ ಐದು ಪ್ರಮುಖ ಕಾರಣಗಳನ್ನು ನೋಡೋಣ.
ರೋಹಿತ್ ಮತ್ತು ಕೊಹ್ಲಿ ಅನುಭವ
ಕ್ರಿಕೆಟ್ನಲ್ಲಿ ಕಿರು ಸ್ವರೂಪವನ್ನು ಪರಿಚಯಿಸಿದಾಗಿನಿಂದ ರೋಹಿತ್ ಶರ್ಮಾ ಭಾರತದ ಟಿ20 ಸೆಟ್ಅಪ್ನ ನಿರ್ಣಾಯಕ ಸದಸ್ಯರಾಗಿದ್ದಾರೆ. ಒಂದೆರಡು ವರ್ಷಗಳ ನಂತರ ವಿರಾಟ್ ಕೂಡ ಟಿ20 ತಂಡದಲ್ಲಿ ಸ್ಥಾನ ಪಡೆದುಕೊಂಡರು. ರೋಹಿತ್ ಮತ್ತು ವಿರಾಟ್ ಅಂದಿನಿಂದ ಮಾದರಿಯಲ್ಲಿ ನಿರಂತರವಾಗಿದ್ದಾರೆ. ಭಾರತ ತಂಡದ ಪರ ಅವರಿಬ್ಬರು 100ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದಿದ್ದಾರೆ.
ಟಿ20 ಐ ವೃತ್ತಿಜೀವನದ ದೀರ್ಘ ಅನುಭವ ಪರಿಗಣಿಸಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ವಿಶ್ವ ಕಪ್ಗೆ ಅವರ ಸೇವೆಗಳನ್ನು ಬಳಸಿಕೊಳ್ಳಲಾಗಿದೆ. 2007ರ ಟಿ 20 ವಿಶ್ವಕಪ್ನಂತೆಯೇ ಬಿಸಿಸಿಐ ಯುವ ತಂಡವನ್ನು ಆಯ್ಕೆ ಮಾಡಬಹುದು ಎಂಬ ವದಂತಿಗಳು ನಡುವೆ ರೋಹಿತ್ ಮತ್ತು ವಿರಾಟ್ ಅವರ ಅನುಭವ ತಂಡದ ಪಾಲಿಗೆ ನಿರ್ಣಾಯಕವಾಗಲಿದೆ.
ಅವರ ರನ್ ಗಳಿಕೆಗಳು
ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಟಿ 20 ತಂಡದ ಭಾಗವಾಗಿದ್ದಾರೆ. ಜತೆಗೆ ಈ ಸ್ವರೂಪದಲ್ಲಿ ಭಾರತದ ಯಶಸ್ಸಿಗೆ ಮುಖ್ಯ ಕಾರಣರಾಗಿದ್ದಾರೆ. ಬಲಗೈ ಅಗ್ರ ಕ್ರಮಾಂಕದ ಬ್ಯಾಟರ್ಗಳಿಬ್ಬರೂ ದೊಡ್ಡ ಪ್ರಮಾಣದಲ್ಲಿ ರನ್ ಗಳಿಸಿದ್ದಾರೆ.
ಇದನ್ನೂ ಓದಿ : VIRAL VIDEO: ವಿರಾಟ್ ಕೊಹ್ಲಿ ಯಾರು?; ರೊನಾಲ್ಡೊ ಪ್ರತಿಕ್ರಿಯೆಗೆ ದಂಗಾದ ಖ್ಯಾತ ಯೂಟ್ಯೂಬರ್
ವಿರಾಟ್ ಕೊಹ್ಲಿ 115 ಟಿ 20 ಪಂದ್ಯಗಳಲ್ಲಿ 4000 ಕ್ಕೂ ಹೆಚ್ಚು ಟಿ20 ರನ್ ಗಳಿಸಿದ್ದಾರೆ. ಈ ನಿರ್ದಿಷ್ಟ ಮೈಲಿಗಲ್ಲನ್ನು ತಲುಪಿದ ಏಕೈಕ ಆಟಗಾರ. ರೋಹಿತ್ ಶರ್ಮಾ 140 ಟಿ20 ಇನ್ನಿಂಗ್ಸ್ಗಳಲ್ಲಿ 3853 ರನ್ ಗಳಿಸಿದ್ದಾರೆ. ಅವರಿಬ್ಬರೂ ಟಿ 20 ಕ್ರಿಕೆಟ್ನಲ್ಲಿ ರನ್ ಗಳಿಕೆಯ ವೇಗದ ವರ್ಧಿಸುವಲ್ಲಿ ನಿಸ್ಸೀಮರು. ಅವರ ಸಾಮರ್ಥ್ಯವನ್ನು ಪರಿಗಣಿಸಿದರೆ ಮುಂದಿನ ವಿಶ್ವ ಕಪ್ನಲ್ಲಿ ಭಾರತ ತಂಡಕ್ಕೆ ನೆರವಾಗಲಿದೆ.
ನಾಯಕತ್ವದ ಗುಣಗಳು
ಭಾರತ ತಂಡದ ಆಧಾರ ಸ್ತಂಭಗಳಾದ ರೋಹಿತ್ ಮತ್ತು ವಿರಾಟ್ ಇಬ್ಬರೂ ಅಸಾಧಾರಣ ನಾಯಕತ್ವದ ಕೌಶಲ ಗಳನ್ನು ಹೊಂದಿದ್ದಾರೆ/ ಸಾಕಷ್ಟು ಸಮಯದವರೆಗೆ ಭಾರತೀಯ ತಂಡವನ್ನು ಮುನ್ನಡೆಸಿದ್ದಾರೆ. ತಂಡವನ್ನು ಮುನ್ನಡೆಸುವಾಗ ರೋಹಿತ್ ಶರ್ಮಾಗೆ , ವಿರಾಟ್ ಕೊಹ್ಲಿ ನೆರವಾಗುತ್ತಾರೆ.
ವಿರಾಟ್ ನಾಯಕನಾಗಿದ್ದಾಗಲೂ ಇದೇ ರೀತಿ ಸಂಭವಿಸುತ್ತಿತ್ತು. ಈಗ ರೋಹಿತ್ ತಂಡವನ್ನು ಮುನ್ನಡೆಸುತ್ತಿರುವುದರಿಂದ ಅವರಿಬ್ಬರು ಮೈದಾನಲ್ಲಿ ಚರ್ಚೆಗಳನ್ನು ನಡೆಸುತ್ತಾರೆ. ಡಿಆರ್ಎಸ್ ಮನವಿ ಮಾಡುವಾಗ ಅಥವಾ ಎದುರಾಳಿ ಬ್ಯಾಟರ್ಗಳಿಗೆ ಖೆಡ್ಡ ತೋಡುವ ಸಂದರ್ಭದಲ್ಲಿ ಅವರಿಬ್ಬರೂ ಯೋಜನೆಗಳನ್ನು ರೂಪಿಸುತ್ತಾರೆ. ಇಬ್ಬರು ನಾಯಕರನ್ನು ಒಳಗೊಂಡ ತಂಡದೊಂದಿಗೆ ಭಾರತವು ಏಕ ದಿನ ವಿಶ್ವಕಪ್ನಲ್ಲಿ ಸತತ 10 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ರೋಹಿತ್ ನಿರ್ಭೀಡ ಆಟ, ಕೊಹ್ಲಿಯ ರನ್ ಗಳಿಕೆಯ ಸಾಮರ್ಥ್ಯ
ಇತ್ತೀಚೆಗೆ ಮುಕ್ತಾಯಗೊಂಡ 2023 ರ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಆಕ್ರಮಣಕಾರಿ ಪಾತ್ರವನ್ನು ವಹಿಸಿದ್ದರು. ಅವರು ಪಂದ್ಯಾವಳಿಯಲ್ಲಿ 597 ರನ್ ಗಳಿಸಿದ್ದಾಎ. ಪ್ರತಿ ಪಂದ್ಯದಲ್ಲೂ ಭಾರತಕ್ಕೆ ಉತ್ತಮ ಆರಂಭವನ್ನು ಕೊಟ್ಟಿದ್ದರು. ಅವರಿಂದಾಗಿ ಭಾರತ ತಂಡಕ್ಕೆ ದೊಡ್ಡ ದೊಡ್ಡ ಮೊತ್ತಗಳನ್ನು ಪೇರಿಸಲು ಸಾಧ್ಯವಾಗಿತ್ತು.
ಆರಂಭಿಕ ಅನುಕೂಲಕವನ್ನು ವಿರಾಟ್ ಕೊಹ್ಲಿ ಬಳಸಿಕೊಳ್ಳುತ್ತಿದ್ದರು. ಇನಿಂಗ್ಸ್ನಲ್ಲಿ ದೀರ್ಘಕಾಲ ಬ್ಯಾಟಿಂಗ್ ಮಾಡುತ್ತಿದ್ದರು. 2022 ರ ಟಿ 20 ವಿಶ್ವಕಪ್ನಲ್ಇಲ ಪಾಕಿಸ್ತಾನ ವಿರುದ್ಧ ಮಾಡಿದಂತೆಯೇ ವಿರಾಟ್ ಭಾರತವನ್ನು ಕ್ಲಿಷ್ಟಕರ ಪರಿಸ್ಥಿತಿಗಳಿಂದ ಹೊರತರುತ್ತಾರೆ.
ಕೊನೆಯ ಟಿ 20 ವಿಶ್ವಕಪ್
ಭಾರತವು ಅಂತಾರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಆಟಗಾರರನ್ನು ಹೊಂದಿರುವುದರಿಂದ ಟಿ20 ವಿಶ್ವಕಪ್ 2024 ಬಹುಶಃ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಆಟದ ಸಂಕ್ಷಿಪ್ತ ಸ್ವರೂಪಗಳಲ್ಲಿ ತಮ್ಮ ವೃತ್ತಿಜೀವನದ ಕೊನೇಯ ಟೂರ್ನಿಯಾಗಬಹುದು. ಏಕದಿನ ವಿಶ್ವಕಪ್ನಲ್ಲಿ ಅವರು ತಮ್ಮ ಸರ್ವಸ್ವವನ್ನೂ ನೀಡಿದ್ದರು. ಆದಾಗ್ಯೂ ಫೈನಲ್ನಲ್ಲಿ ಸೋತರು. ಹೀಗಾಗಿ ಇದು ಅವರಿಗೆ ಕೊನೆಯ ಟಿ 20 ವಿಶ್ವಕಪ್ ಆಗಿದೆ. ಹೀಗಾಗಿ ಭಾರತ ತಂಡಕ್ಕೆ ಟ್ರೋಫಿಯನ್ನು ಎತ್ತಲು ಸಹಾಯ ಮಾಡಲು ಅವರು ತಮ್ಮ ಶಕ್ತಿ ಮೀರಿ ಪ್ರಯತ್ನಿಸಲಿದ್ದಾರೆ.