Site icon Vistara News

World Record : ಒಂದೇ ಒಂದು ರನ್​ ನೀಡದೇ 7 ವಿಕೆಟ್​ ಉರುಳಿಸಿದ ಬೌಲರ್​​; ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ

world record

ಬೆಂಗಳೂರು: ಇಂಡೋನೇಷ್ಯಾದ ಮಹಿಳಾ ಕ್ರಿಕೆಟ್ ತಂಡದ (Indonesian women’s cricket team) ಯುವ ಬೌಲರ್ ರೋಹ್ಮಾಲಿಯಾ ರೊಹ್ಮಾಲಿಯಾ ಟಿ 20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸುವ ಮೂಲಕ ಇತಿಹಾಸ (World Record) ಬರೆದಿದ್ದಾರೆ. ಮಂಗೋಲಿಯಾ ವಿರುದ್ಧದ ನಾಲ್ಕನೇ ಟಿ 20ಐ ಪಂದ್ಯದಲ್ಲಿ 17 ವರ್ಷದ ಆಫ್-ಸ್ಪಿನ್ನರ್ 3.2-3-0-7 ಅಂಕಿ ಅಂಶಗಳೊಂದಿಗೆ ದಾಖಲೆ ಮಾಡಿದ್ದಾರೆ. 2021ರಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಯುರೋಪ್ ರೀಜನ್ ಕ್ವಾಲಿಫೈಯರ್​ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4-2-3-7 ಬೌಲಿಂಗ್ ಸಾಧನೆ ಮಾಡಿದ್ದ ನೆದರ್ಲ್ಯಾಂಡ್ಸ್​​ನ ಫ್ರೆಡೆರಿಕ್ ಓವರಿಡ್ಜಿಕ್​ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಒಟ್ಟಾರೆಯಾಗಿ, ರೋಹ್ಮಾಲಿಯಾ ಟಿ 20 ಐ ಪಂದ್ಯದಲ್ಲಿ 7 ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅರ್ಜೆಂಟೀನಾದ ಅಲಿಸನ್ ಸ್ಟಾಕ್ಸ್, ಮಲೇಷ್ಯಾದ ಸಯಾಜ್ರುಲ್ ಎಜಾತ್ ಇಡ್ರಸ್ ಇತರ ಇಬ್ಬರು ಸಾಧಕರು.

2019 ರಲ್ಲಿ ಮಾಲ್ಡೀವ್ಸ್ ವಿರುದ್ಧ ನೇಪಾಳದ ಅಂಜಲಿ ಚಂದ್ ಅವರ 2.1-2-0-6 (ರನ್​ ನೀಡದೇ 6 ವಿಕೆಟ್ ಉರುಳಿಸಿದ್ದು) ಸಾಧನೆಯನ್ನು ರೋಹ್ಮಾಲಿಯಾ ಮೀರಿಸಿದ್ದಾರೆ.

ಟಿ 20 ಪಂದ್ಯಗಳಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು (ಪುರುಷರು ಮತ್ತು ಮಹಿಳೆಯರು):

ರೋಹ್ಮಾಲಿಯಾ ರೋಮಾಲಿಯಾ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಐದನೇ ಟಿ 20 ಐ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ಇಂಡೋನೇಷ್ಯಾ ತಂಡಕ್ಕೆ ಗೆಲುವು ತಂದುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಡೋನೇಷ್ಯಾ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ನಿ ಪುಟು ಆಯು ನಂದಾ ಸಕಾರಿನಿ 44 ಎಸೆತಗಳಲ್ಲಿ 61 ರನ್ ಗಳಿಸಿದರು. ಉತ್ತರವಾಗಿ ಮಂಗೋಲಿಯಾ 16.2 ಓವರ್ ಗಳಲ್ಲಿ 24 ರನ್ ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ: Ranji Trophy : ರಣಜಿ ಟ್ರೋಫಿ ಆಡುವವರಿಗೆ ಇನ್ನು ಮುಂದೆ ಒಂದು ಕೋಟಿ ರೂ. ವೇತನ!

ಏಪ್ರಿಲ್ 27 ರಂದು ಕೀರ್ತಿಪುರದಲ್ಲಿ ಪ್ರಾರಂಭವಾಗುವ ಆತಿಥೇಯರ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಮುಂಚಿತವಾಗಿ ವೆಸ್ಟ್ ಇಂಡೀಸ್ ‘ಎ’ ಕ್ರಿಕೆಟ್ ತಂಡ ಬುಧವಾರ ನೇಪಾಳಕ್ಕೆ ಆಗಮಿಸಿದೆ. ಆದಾಗ್ಯೂ, ಕಠ್ಮಂಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಆಟಗಾರರೇ ಲಗೇಜ್​ಗಳನ್ನು ವಿಲೋಡ್ ಮಾಡುವ ಪರಿಸ್ಥಿತಿ ಎದುರಾಯಿತು.

ವೈರಲ್ ಆಗಿರುವ ವೀಡಿಯೊದಲ್ಲಿ, ವೆಸ್ಟ್ ಇಂಡೀಸ್ ಆಟಗಾರರು ಕಿಟ್ ಬ್ಯಾಟ್​​ಗಳು ಮತ್ತು ಸೂಟ್​ಕೇಸ್​ಗಳನ್ನು ಒಂದರ ಮೇಲೊಂದರಂತೆ ರಾಶಿ ಹಾಕುತ್ತಿದ್ದ ದೃಶ್ಯ ಕಂಡು ಬಂತು.

Exit mobile version