Site icon Vistara News

WPL 2023 : ಮುಂಬಯಿ ವಿರುದ್ಧ ಆರ್​ಸಿಬಿಗೆ 9 ವಿಕೆಟ್​ ಹೀನಾಯ ಸೋಲು, ತೀವ್ರ ವೈಫಲ್ಯ ಕಂಡ ಮಂಧಾನಾ ಬಳಗ

9 wickets crushing defeat for RCB team

#image_title

ಮುಂಬಯಿ: ಬ್ಯಾಟಿಂಗ್ ಹಾಗೂ ಬೌಲಿಂಗ್​ ವಿಭಾಗದ ವೈಫಲ್ಯಕ್ಕೆ ಬೆಲೆ ತೆತ್ತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2023) ತನ್ನ ಎರಡನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 9 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಯಿತು. ಸ್ಮೃತಿ ಮಂಧಾನಾ ಪಡೆಗೆ ಇದು ಸತತ ಎರಡನೇ ಸೋಲಾಗಿದ್ದು, ರೌಂಡ್ ರಾಬೀನ್​ ಲೀಗ್​ನ ಅಂಕಪಟ್ಟಿಯಲ್ಲಿ ಹಿನ್ನಡೆಗೆ ಒಳಗಾಯಿತು. ಮುಂಬಯಿ ಇಂಡಿಯನ್ಸ್ ತಂಡದ ಹೇಲಿ ಮ್ಯಾಥ್ಯೂಸ್​ 38 ಎಸೆತಗಳಲ್ಲಿ ಅಜೇಯ 77 ರನ್​ ಬಾರಿಸಿ ನಿರಾಯಸ ಗೆಲುವಿನ ರೂವಾರಿ ಎನಿಸಿಕೊಂಡರು.

ಬ್ರಬೊರ್ನ್​ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬ್ಯಾಟ್​ ಮಾಡಿ 155 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಮುಂಬಯಿ ತಂಡ 14.2 ಓವರ್​ಗಳಲ್ಲಿ ಒಂದು ವಿಕೆಟ್​ ಕಳೆಧೂಕೊಂಡು 159 ರನ್ ಬಾರಿಸಿ ಗೆಲುವು ಸಾಧಿಸಿತು. ಮುಂಬಯಿ ಪರ ನ್ಯಾಟ್​ ಸ್ಕೀವರ್ ಬ್ರಂಟ್ (ಅಜೇಯ 55) ಅರ್ಧ ಶತಕ ಬಾರಿಸಿದರೆ, ಆರಂಭಿಕ ಬ್ಯಾಟರ್​ ಯಸ್ತಿಕಾ ಭಾಟಿಯಾ 23 ರನ್​ಗಳ ಕೊಡುಗೆ ಕೊಟ್ಟರು.

ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ

ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ಪರ ಸ್ಮೃತಿ ಮಂಧಾನಾ (23) ಹಾಗೂ ಸೋಫಿ ಡಿವೈನ್​ (16) ಮೊದಲ ವಿಕೆಟ್​ಗೆ 39 ರನ್​ ಬಾರಿಸಿ ವಿಶ್ವಾಸ ಮೂಡಿಸಿದರು. ಆದರೆ, ಆ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡು 43 ರನ್​ಗೆ 4 ವಿಕೆಟ್ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಬಳಿಕ ಆಡಲು ಇಳಿದ ರಿಚಾ ಘೋಷ್​ (28), ಕನಿಕಾ ಅಹುಜಾ (22), ಶ್ರೇಯಾಂಕಾ ಪಾಟೀಲ್​ (23) ಹಾಗೂ ಮೇಗನ್​ ಶೂಟ್​ (20) ಕನಿಷ್ಠ ಮೊತ್ತಕ್ಕೆ ತಂಡ ಆಲ್​ಔಟ್​ ಆಗದಂತೆ ನೋಡಿಕೊಂಡಿತು. ಅದಕ್ಕಿಂತ ಮೊದಲ ಎಲಿಸ್​ ಪೆರಿ 13 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ : WPL 2023 : ಡಬ್ಲ್ಯುಪಿಎಲ್​ನಂತೆ ಐಪಿಎಲ್​ನಲ್ಲೂ ವೈಡ್​ ಬಾಲ್, ನೋ ಬಾಲ್​​ ಪರೀಕ್ಷೆಗೆ ಡಿಆರ್​ಎಸ್​ ಬಳಕೆ?

ಮಂಬಯಿ ಬೌಲರ್​ಗಳಾದ ಸೈಕಾ ಇಶಾಖ್​ (26 ರನ್​ಗಳಿಗೆ 2 ವಿಕೆಟ್​) ಹಾಗೂ ಹೇಲಿ ಮ್ಯಾಥ್ಯೂಸ್​ (28 ರನ್​ಗಳಿಗೆ 3 ವಿಕೆಟ್) ಹಾಗೂ ಅಮೇಲಿಯಾ ಕೆರ್​ (30 ರನ್​ಗಳಿಗೆ 2 ವಿಕೆಟ್​) ಬೌಲಿಂಗ್​ ದಾಳಿಗೆ ಆರ್​ಸಿಬಿ ಪಡೆ ತತ್ತರಿಸಿತು.

Exit mobile version