Site icon Vistara News

IPL 2023 | ಐಪಿಎಲ್ ಮಿನಿ ಹರಾಜಿಗೆ 991 ಆಟಗಾರರಿಂದ ನೋಂದಣಿ; ಪೂರ್ಣ ವಿವರ ಇಲ್ಲಿದೆ

IPL mini auction

ಮುಂಬಯಿ : ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಆಟಗಾರರ ನೋಂದಣಿ ಪ್ರಕ್ರಿಯೆ ನವೆಂಬರ್‌ ೩೦ಕ್ಕೆ ಕೊನೆಯಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ ಒಟ್ಟು ೯೯೧ ಆಟಗಾರರು ಆಡಲು ಅಸಕ್ತಿ ತೋರಿದ್ದು, ಅದರಲ್ಲಿ ೭೧೪ ಭಾರತೀಯರು ಹಾಗೂ ೨೭೭ ವಿದೇಶಿ ಆಟಗಾರರು ಸೇರಿಕೊಂಡಿದ್ದಾರೆ.

೧೬ನೇ ಆವೃತ್ತಿಯ ಐಪಿಎಲ್‌ನ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್‌ ೨೩ಕ್ಕೆ ನಡೆಯಲಿದೆ. ಹೀಗಾಗಿ ನವೆಂಬರ್‌ ೧೫ರೊಳಗೆ ತಮ್ಮ ತಂಡದಲ್ಲಿ ಉಳಿಸಿಕೊಂಡವರ ಹಾಗೂ ಬಿಡುಗಡೆ ಮಾಡುವವರ ಪಟ್ಟಿಯನ್ನು ನೀಡುವಂತೆ ಫ್ರಾಂಚೈಸಿಗಳಿಗೆ ಐಪಿಎಲ್ ಆಡಳಿತ ಮಂಡಳಿ ಕೋರಿಕೊಂಡಿತ್ತು. ಅದಾದ ಬಳಿಕ ನವೆಂಬರ್‌ ೩೦ರೊಳಗೆ ತಮ್ಮ ಹೆಸರನ್ನು ನೊಂದಾಯಿಸುವಂತೆ ಬಿಸಿಸಿಐ ಆದೆಶ ಹೊರಡಿಸಿತ್ತು. ಆ ದಿನಾಂಕ ಮುಗಿದ ಹಿನ್ನೆಲೆಯಲ್ಲಿ ಒಟ್ಟು ಲೆಕ್ಕಾಚಾರ ಸಿಕ್ಕಿದೆ.

ಒಟ್ಟು ಆಟಗಾರರಲ್ಲಿ ೧೮೫ ಮಂದಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದವರಾಗಿದ್ದಾರೆ. ೭೮೬ ಆಟಗಾರರು ಆಡದವರು. ೨೦ ಆಟಗಾರರು ಸಹಯೋಗ ಪಡೆದುಕೊಂಡ ಆಟಗಾರರಾಗಿದ್ದಾರೆ.

ಆಟಗಾರರ ವಿವರ ಇಲ್ಲಿದೆ

೧೯- ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತ ಆಟಗಾರರು.

೧೬೬- ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿದೇಶಿ ಆಟಗಾರರು

೨೦- ಅಸೋಸಿಯೇಟ್‌ ಆಟಗಾರರು

೯೧- ಹಿಂದಿನ ಐಪಿಎಲ್‌ನಲ್ಲಿ ಪಾಲ್ಗೊಂಡ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಆಟಗಾರರು

೦೩- ಹಿಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳದಿರುವ ಮತ್ತು ಅಂತಾರಾಷ್ಟ್ರಿಯ ಪಂದ್ಯಗಳನ್ನು ಆಡದ ಕ್ರಿಕೆಟಿಗರು

೬೦೪- ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ವಿದೇಶಿ ಆಟಗಾರರು

೮೮- ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ವಿದೇಶಿ ಆಟಗಾರರು

ದೇಶವಾರು ವಿದೇಶಿ ಆಟಗಾರರ ವಿವರ

ದೇಶಆಟಗಾರರು
ಅಫಘಾನಿಸ್ತಾನ14
ಆಸ್ಟ್ರೇಲಿಯಾ57
ಬಾಂಗ್ಲಾದೇಶ06
ಇಂಗ್ಲೆಂಡ್‌31
ಐರ್ಲೆಂಡ್‌08
ನಮೀಬಿಯಾ05
ನೆದರ್ಲೆಂಡ್ಸ್‌07
ನ್ಯೂಜಿಲ್ಯಾಂಡ್‌27
ಸ್ಕಾಟ್ಲೆಂಡ್‌02
ದಕ್ಷಿಣ ಆಫ್ರಿಕಾ52
ಶ್ರೀಲಂಕಾ23
ಯುಎಇ06
ವೆಸ್ಟ್‌ ಇಂಡೀಸ್‌33
ಜಿಂಬಾಬ್ವೆ06

ಇದನ್ನೂ ಓದಿ | Women’s IPL | ತಂಡಗಳ ಹರಾಜಿನ ಮೂಲ ಬೆಲೆಯಲ್ಲೇ ವಿಶ್ವ ದಾಖಲೆ ಸೃಷ್ಟಿಸಲಿದೆ ಮಹಿಳೆಯರ ಐಪಿಎಲ್‌!

Exit mobile version