Site icon Vistara News

Kavya Maran | ಎಸ್​ಆರ್​ಎಚ್ ತಂಡದ ಮಾಲಕಿ ಕಾವ್ಯಾ ಮಾರನ್​ಗೆ ಮದುವೆ ಪ್ರಪೋಸ್​ ಮಾಡಿದ ಕ್ರಿಕೆಟ್​ ಅಭಿಮಾನಿ!

kavya maran

ಜೊಹಾನ್ಸ್​ಬರ್ಗ್​: ಐಪಿಎಲ್​ನ ಸನ್​ ರೈಸರ್ಸ್​ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ (Kavya Maran) ಅವರು ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್ಎ20 ಕ್ರಿಕೆಟ್​ಲೀಗ್​ನಲ್ಲಿ ತಂಡವನ್ನು ಹೊಂದಿದ್ದಾರೆ. ಅವರ ಮಾಲೀಕತ್ವದ ಈಸ್ಟರ್ನ್​ ಕೇಪ್​ ತಂಡ ಜಯದ ಹಾದಿಯಲ್ಲೂ ಸಾಗುತ್ತಿದೆ. ಅಂತೆಯೇ ಜನವರಿ 19ರಂದು ಬೊಲ್ಯಾಂಡ್​ ಪಾರ್ಕ್​ನಲ್ಲಿ ಪಾರ್ಲ್​ ರಾಯಲ್ಸ್ ತಂಡದ ವಿರುದ್ಧ 5 ವಿಕೆಟ್​ಗಳ ವಿಜಯ ಸಾಧಿಸಿತ್ತು. ಈ ವೇಳೆ ಕ್ರಿಕೆಟ್ ಪ್ರೇಮಿಯೊಬ್ಬ ತಂಡದ ಮಾಲಕಿ ಕಾವ್ಯಾ ಮಾರನ್​ಗೆ ಮದುವೆ ಪ್ರಪೋಸಲ್ ಇಟ್ಟ ಪ್ರಸಂಗವೂ ನಡೆಯಿತು.

ಈಸ್ಟರ್ನ್ ಕೇಪ್​ಟೌನ್​ ತಂಡ ಪಂದ್ಯ ನಡೆಯುವ ವೇಳೆ ಕಾವ್ಯಾ ಮಾರನ್​ ಅವರು ಪ್ರತಿ ಬಾರಿಯೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಇರುತ್ತಾರೆ. ಈ ವೇಳೆ ಹುಲ್ಲಿನ ಹಾಸಿನ ಮೇಲೆ ಕುಳಿತ ವ್ಯಕ್ತಿಯೊಬ್ಬ ಬೋರ್ಡ್​ ಮೇಲೆ KAVYA MARAN, WILL YOU MARRY ME? ಎಂದು ಬರೆದು ಪ್ರದರ್ಶಿಸಿದ್ದಾನೆ. ತಕ್ಷಣ ನೇರ ಪ್ರಸಾರದ ವಿಡಿಯೊ ಕ್ಯಾಮೆರಾಗಳು ಆತನನ್ನು ತೋರಿಸಿದವು.

ಕಾವ್ಯಾ ಮಾರನ್ ಅವರು ಮಾಧ್ಯಮ ಕಂಪನಿಗಳ ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿ, ಸನ್​ನೆಟ್​ವರ್ಕ್​ ಸಂಸ್ಥೆಯ ಮಾಲಕಿ. ಐಪಿಎಲ್​ ಬಿಡ್ಡಿಂಗ್ ವೇಳೆಯೂ ಅವರು ಕ್ಯಾಮೆರಾಗಳ ಗಮನ ಸೆಳೆದಿದ್ದರು.

ಇದನ್ನೂ ಓದಿ | IPL 2023 | ಎಸ್​ಆರ್​ಎಚ್​ ತಂಡದಲ್ಲಿ ಮಯಾಂಕ್​ ಯಶಸ್ಸು ಸಾಧಿಸುವುದು ಖಚಿತ ಎಂದಿದ್ದಾರೆ ಅನಿಲ್​ ಕುಂಬ್ಳೆ

Exit mobile version