Site icon Vistara News

Virat Kohli : ಕೊಹ್ಲಿಯ ಪ್ರಾಣಕ್ಕೆ ಆಪತ್ತು ಒಡ್ಡಿದ ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತಾ ವೈಫಲ್ಯ

Chinnaswamy Stadium

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ (ಮಾರ್ಚ್ 25) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮತ್ತು ಪಂಜಾಬ್ ಕಿಂಗ್ಸ್ (Punjab Kings) ನಡುವಿನ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ (Virat kohli) ಬ್ಯಾಟಿಂಗ್ ಮಾಡಲು ಬಂದಾಗ ಭದ್ರತಾ ಉಲ್ಲಂಘನೆ ಸಂಭವಿಸಿದೆ. ಈ ಮೂಲಕ ಪ್ರಾಣಕ್ಕೆ ಆಪತ್ತು ಒಡ್ಡುವಂಥ ಘಟನೆ ಸಂಭವಿಸಿದೆ.

ಈ ಹಿಂದೆ, ವಿರಾಟ್ ಕೊಹ್ಲಿಗೆ ಹತ್ತಿರವಾಗಲು ಅಭಿಮಾನಿಗಳು ಭದ್ರತೆಯನ್ನು ಉಲ್ಲಂಘಿಸಿದ ಹಲವಾರು ನಿದರ್ಶನಗಳು ನಡೆದಿವೆ. ಅಂತೆಯೇ ವಿರಾಟ್ ಕೊಹ್ಲಿ ಆರ್​​ಸಿಬಿ ಪರ ಬ್ಯಾಟಿಂಗ್ ಮಾಡಲು ಬಂದಾಗ ಅವರ ಜನಪ್ರಿಯತೆ ಮತ್ತೊಮ್ಮೆ ಪ್ರದರ್ಶನಗೊಂಡಿತು. ಅವರು ಪಂದ್ಯದಲ್ಲಿ ಚೆಂಡನ್ನು ಎದುರಿಸುವ ಮೊದಲೇ ಈ ಘಟನೆ ನಡೆದಿದೆ.

ಭಾರತದ ಮಾಜಿ ನಾಯಕ ಬ್ಯಾಟಿಂಗ್ ಕ್ರೀಸ್ ಕಡೆಗೆ ನಡೆಯುತ್ತಿದ್ದಾಗ, ಒಬ್ಬ ಪ್ರೇಕ್ಷಕ ಭದ್ರತೆಯನ್ನು ಉಲ್ಲಂಘಿಸಿ ಅವರ ಹತ್ತಿರ ಬರುವಲ್ಲಿ ಯಶಸ್ವಿಯಾದ. ಬ್ಯಾಟಿಂಗ್ ಸೂಪರ್​ಸ್ಟಾರ್​ ಅತನನ್ನು ತಬ್ಬಿಕೊಳ್ಳಲು ಎದ್ದು ನಿಲ್ಲುವ ಮೊದಲು ಆತ ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದಿದ್ದಾನೆ. ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಓಡಿ ಬಂದು ಆತನನ್ನು ಕರೆದೊಯ್ದರು.

ಆರ್​ಸಿಬಿ ಆಟಗಾರನನ್ನು ಕಸ ಎಂದು ಕರೆದ ಮುರಳಿ ಕಾರ್ತಿಕ್​, ಜಾಡಿಸಿದ ಆರ್​ಸಿಬಿ ಫ್ಯಾನ್ಸ್​
ನವದೆಹಲಿ: ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವೇಗಿ ಯಶ್ ದಯಾಳ್ (Yash Dayal) ಬಗ್ಗೆ ಕ್ರಿಕೆಟಿಗ ಮತ್ತು ವೀಕ್ಷಕವಿವರಣೆಗಾರ ಮುರಳಿ ಕಾರ್ತಿಕ್ ವಿಲಕ್ಷಣ ಕಾಮೆಂಟ್ ಮಾಡಿದ್ದಾರೆ. ಅವರನ್ನು ಬೇರೊಬ್ಬರ ಕಸ ಎಂದು ಕರೆಯುವ ಮೂಲಕ ಅವಮಾನ ಮಾಡಿದ್ದಾರೆ. ಇದು ಆರ್​ಸಿಬಿ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಮಾಜಿ ಆಟಗಾರನನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಇದನ್ನೂ ಓದಿ : Virat kohli : ಸುರೇಶ್​ ರೈನಾ ದಾಖಲೆ ಮುರಿದು ಅಗ್ರ ಸ್ಥಾನ ಪಡೆದ ವಿರಾಟ್​ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ 6 ನೇ ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ ಐಪಿಎಲ್ 2024 ರಲ್ಲಿ ಯಶ್ ದಯಾಳ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವೇಗದ ಬೌಲರ್ ಹೊಸ ಚೆಂಡಿನೊಂದಿಗೆ ಮಿಂಚುತ್ತಿದ್ದಾರೆ ಮತ್ತು ಚೆಂಡನ್ನು ಸ್ವಿಂಗ್ ಮಾಡುತ್ತಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲಿ ಎದುರಾಳಿಗಳಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಯಶ್ ದಯಾಳ್. ಅವರು ಶಿಖರ್ ಧವನ್ ಮತ್ತು ಜಾನಿ ಬೈರ್ಸ್ಟೋವ್ ಅವರಂತಹ ಅನುಭವಿ ಬ್ಯಾಟರ್​ಗಳನ್ನು ತಮ್ಮ ಸ್ವಿಂಗ್ ಬೌಲಿಂಗ್​ನಿಂದ ಯಾಮಾರಿಸಿ ಔಟ್ ಮಾಡಿದ್ದಾರೆ. ಎಡಗೈ ವೇಗಿ ಚೆಂಡನ್ನು ಎರಡೂ ದಿಕ್ಕುಗಳಲ್ಲಿ ಸ್ವಿಂಗ್ ಮಾಡುವ ಮೂಲಕ ಎದುರಾಳಿಗಳಿಗೆ ಸಮಸ್ಯೆ ಒಡ್ಡಿದ್ದು ನಿಜವಾಗಿದೆ.

Exit mobile version